ಎರಡು ಮೆದುದಿಂಬುಗಳ
ನಡುವಿನ ಹಳ್ಳದಲಿ
ತಲೆಯಿಟ್ಟು ಮಲಗುವುದೆ
ತಾಯ್ತನ!
Tuesday, July 10, 2018
"ಕರೆದ ದಾರಿ ಬೇರೆ, ಮತ್ತೆ ಹಿಡಿದ ದಾರಿ ಬೇರೆಯೆ! ಹಾತೊರೆದು ನಡೆವರನ್ನು ಹಾದಿಗೆಡಿಸುತಾರೆಯೆ?" - ದಿಗ್ಭ್ರಾಂತ ಕವಿತೆ - ಗಂಗಾಧರ ಚಿತ್ತಾಲ
ಇವತ್ತು ಈ ಕವಿತೆ ಓದಿ ಒಂದು ವಿಚಿತ್ರ ಮನಸ್ಥಿತಿ ಉಂಟಾಯಿತು. ಎಲ್ಲೆಲ್ಲಿಯದೋ ಯಾವಯಾವದೋ ವಿಷಯಗಳು ಕನೆಕ್ಟ್ ಆಗಿಬಿಟ್ಟಿತು. ಒಂದೊಳ್ಳೆಯ ಕವಿತೆ ಅಂದ್ರೆ ಹೀಗೆ ಅಲ್ಲವೆ? ನಾನು ಹುಟ್ಟುವುದಕ್ಕೂ ಮೂವತ್ತು ವರುಷಗಳಿದ್ದಾಗ ಬರೆದ ಕವಿತೆ ನಾನು ಹುಟ್ಟಿ ನಲವತ್ತು ವರುಷದ ಮೇಲೆ ನನ್ನನ್ನು ಅಲುಗಾಡಿಸುವ ಈ ಕಾವ್ಯಾನುಸಂಧಾನಕ್ಕೆ ಮನಸೋತಿರುವೆ. ಪು.ತಿ.ನ ಬರೆದ ಹಾಗೆ "ಕಥೆಗಳ ಬರೆಯುವ ಕಥೆಗಾರ ನಿನ್ನ ಕಲೆಗೆ ಯಾವುದು ಪಾರ.."
ಇದೇ ಹುಕಿಯಲ್ಲಿ ನನ್ನದೊಂದು ಸೊಲ್ಲು ತಡೆದರೂ ಮತ್ತೆ ಬಂದು ಬರೆಸಿಕೊಂಡಿತು.
ಬದಲಾದ ಹಾದಿ, ಹೆಜ್ಜೆ, ಜತೆಪಯಣದ ವಜ್ಜೆ ನೋಡುತ್ತಲೆ ಕಳೆದ ದಿನಗಳ ನಿಲ್ದಾಣದಿಂದ ಹೊರಟು ನೋಡದಿದ್ದರೂ ನಡೆದೀತೆಂಬ ನಿಲುಗಡೆಗಳ ದಾರಿ ತುಟಿಮುಚ್ಚಿದ ಕಣ್ರೆಪ್ಪೆಗಳು ಉದುರಿವೆ ತುಟಿ ಮುಟ್ಟಲಾರದೆ ಅದುರಿದೆ ನೀನು ನಡೆದುಬಿಟ್ಟಿದ್ದೀ ನಾನು ಹೊರಳಿಬಿಟ್ಟಿರುವೆ ಆದರೂ ಆ ನೀನು ಕಾಲವಳಿಸದ ನಿಜ ನನ್ನ ನೆನಪಿನಲ್ಲಿ, ಒಂದೇ ಹಾದಿಯ, ಹೆಜ್ಜೆ-ಮೇಲೆ-ಹೆಜ್ಜೆಯೇ ಕನಸಿನಲ್ಲಿ.
ವಿಷಯ ತಿಳಿಯಿತು. ಹಾಂ ಇಲ್ಲ, ಹೂಂ ಇಲ್ಲ, ಬೇಕಿತ್ತೋ ತಿಳಿಯಲಿಲ್ಲ. ಬೇಕಾಗಿರಲಿಲ್ಲವೋ ಗೊತ್ತಾಗಲಿಲ್ಲ! ಇನ್ನೊಂದು ವಾರ, ಮತ್ತೊಂದು ಸ್ಕ್ಯಾನು, ಮತ್ತೆ ನಾಕು ಹೃದಯ, ಕಣ್ಣರಳಲಿಲ್ಲ, ನಗು ಅರಳಲಿಲ್ಲ, ಕೈಲಿ ಹರಿಯತ್ತಾ ಎಂಬ ಪ್ರಶ್ನೆ ತುಟಿಯ ಬದಿಗೆ ಬಿರಿದೂ... ಮಾತಾಗಲಿಲ್ಲ. :( ಎರಡು ಜೀವದ ಬಯಕೆ, ಸುತ್ತ ಹಬ್ಬಿದ ಜಗಕೆ- ತಿಳಿಯಲಿಲ್ಲ. ಎಲ್ಲರ ಕಣ್ಣಿಗೂ ಅವರವರದೆ ಕನ್ನಡಕ. ಒಂದು ಪುಟ್ಟ ಜೀವ ಮಾತ್ರ ದಿವಾನ ಏರಿ ನಿಂತು "ಈಗೆತ್ತಿಕೋ ಅಮ್ಮ ಕೆಳಗಿಂದ ಎತ್ತಲು ಕಷ್ಟವಾಗುತ್ತೆ" ಅಂತು. ಆ ಜೀವದ "ನೆನಕೆ, ಆಶೆ, ಹೊಟ್ಟೆಕಿಚ್ಚು, ಮತ್ತು ಮುದ್ದುಗರೆಯುವಿಕೆಯೇ ನಿನ್ನ ಬದುಕಿನ ಹರಕೆ" ಎಂದು ನಾನು ಇಂದು ಹೇಳಿದರೆ ನಿನಗೆ ತಿಳಿಯುವುದಿಲ್ಲ. ಎಲ್ಲರ ಕನ್ನಡಕದ ಪವರ್ ಬದಲಾಗಿದೆ. ಅಂಗಳದಿ ಅರಳಿದ ಹೂವು ಎಲ್ಲರ ಮನವರಳಿಸಿದೆ. ಹೊಕ್ಕಳ ಬಳ್ಳಿಗೆ ಮಾತ್ರ ಯಾವುದೇ ಕನ್ನಡಕವಿಲ್ಲ, ಲೆನ್ಸು ಇಲ್ಲ. ಅದೇ ಆಶೆ, ಅದೇ ಬಯಕೆ, ಜೀವದಾಳದಲಿ ಮಮತೆ.
ಮೊಣಕಾಲುದ್ದ ನೀರಿನ ಹೊಳೆಯಲ್ಲಿ ಆಡುವ ಮಕ್ಕಳು ಬಿಸಿಬಿಸಿ ಕಲ್ಸೋಪಾನದ ಅಂಚಿಗೆ ನೆರಳಾಡುವ ಅರಳಿಮರ ಬಿರು ಬೇಸಿಗೆಯ ಮಧ್ಯಾಹ್ನದಿ ಮಳೆ ಮೋಡ. ಈಗೀಗ, ಬರಬೇಕಾದ ಮಳೆ, ಮೋಡ ತುಂಬಿಯೂ ಬರುವುದಿಲ್ಲ ಆಸೆ ತೋರಿಸಿ ಕರಗುವುದನ್ನು ಮೋಡಗಳು ಕಲಿತಿವೆ; ಕರಗಿದ, ಪುಡಿಯಾದ, ಆಸೆಬೆಟ್ಟದ ತಪ್ಪಲಿನವಳು ಮಾತ್ರ ಕಲಿಯಲಾರದೆ ಕಾಯುತ್ತಲೇ ಇರುವಳು. (ದೋಣಿಯೊಳಗೆ ನೀನೂ....) ನೀನು ಒಬ್ಬನೇ ನಿಲ್ಲಬಯಸಿದೆ. (ಕರೆಯ ಮೇಲೆ ನಾನೂ...) ನಾನು ಒಬ್ಬಳೇ ಆಗಿಬಿಟ್ಟೆ. ಸುತ್ತ ಮಕ್ಕಳು, ನದಿ, ಆಕಾಶ, ಮಳೆ ಮೋಡ, ಬಿಸಿಲು,
ಮುಕ್ತ
-
ಬಾಂದಳದ ತುಂಬಾ ಎರಚಿದ್ದ ನಕ್ಷತ್ರಗಳನ್ನೇ ದಿಟ್ಟಿಸುತ್ತಿದ್ದಳು ಭೂಮಿ.
ಬಾಲ್ಕನಿಯಲ್ಲಿ ಕುಳಿತು ಅಮಾವಾಸ್ಯೆಯ ಕಾರಿರುಳನ್ನು ಆಸ್ವಾದಿಸುವುದೆಂದರೆ ಅವಳಿಗೆ ಬಹಳ ಇಷ್ಟ.
ಆದರ...
ಬಡಿಸುವ ಬಳಗ
-
ಮಧ್ಯಾಹ್ನ ಊಟದ ಹೊತ್ತಿಗೆ ಏನೋ ಕೆಲಸದ ನಿಮಿತ್ತ ಊರಿನ ಲ್ಯಾಂಡ್ಲೈನ್ ನಂಬರಿಗೆ ಫೋನು
ಮಾಡಿದೆ. ಯಾರೂ ಎತ್ತಲಿಲ್ಲ. ನಂತರ ಅಮ್ಮನ ಮೊಬೈಲಿಗೆ ಮಾಡಿದೆ. ಹತ್ತಾರು ಬಾರಿ ರಿಂಗ್
ಆದನಂತರ ಫೋನ್ ಎ...
ಬೆಡಸಗಾವಿಯ ದೇವಸ್ಥಾನಗಳು
-
ಬೆಡಸಗಾವಿ ಒಂದು ಐತಿಹಾಸಿಕ ಸ್ಥಳವೆಂಬುದು ಅಲ್ಲಿರುವ ದೇವಾಲಯಗಳನ್ನು, ದೊರಕಿರುವ
ಶಾಸನಗಳನ್ನು, ವೀರಗಲ್ಲುಗಳನ್ನು ನೋಡುವಾಗಲೇ ಊಹೆ ಮಾಡಬಹುದು. ಈಗಿನ ಬೆಡಸಗಾವಿ, ಹಿಂದೆ
ಬೆಡಸಗಾಮೆ ಆಗಿ ...
ದೃಶ್ಯ ಮಾಧ್ಯಮ-ಏನಿದೆ ಒಳಗಡೆ?
-
ಆವತ್ತು ಬೆಳಗ್ಗೆ ಟಿವಿ ಹಾಕಿದರೆ, ವಕೀಲರು ಮತ್ತು ಮಾಧ್ಯಮದವರ ನಡುವಿನ ಗಲಭೆಯದೇ ಸುದ್ದಿ.
ರಣರಂಗದಂತೆ ಕಾಣುತ್ತಿದ್ದ ಸಿಟಿ ಸಿವಿಲ್ ಕೋರ್ಟ್ ನ ಆವರಣದಲ್ಲಿ ಗಲಾಟೆಯೋ ಗಲಾಟೆ! ತೂರಿ
ಬರುತ...
ನಿತ್ಯಸ್ಥಾಯಿ ಚಿತ್ರ
-
ಸರಿ ಸರಿದ ಕುಂಚ
ಕಲ್ಪನೆಯ ಚಿತ್ರ
ಎಡತೋಳಿನಿಂದಿಳಿದು ಮುಂಗೈಯವರೆಗೂ
ನಿತ್ಯಸ್ಥಾಯಿ
ಅರಳಿದ ಚೆಂದ ಕಂಡವರೀಗ
ಪದೇ ಪದೇ ಕೇಳುತ್ತಿದ್ದಾರೆ
ಈ ಚಿತ್ರ ಬರೆದವರು ಯಾರೆಂದು
ಗೊತ್ತಿಲ್ಲದವರ ಗುರುತು ಹೇಳ...
ಶಾಲೆ
-
ನಿನ್ನನ್ನು ಶಾಲೆಗೆ ಕಳಿಸುವುದು ನಂಗೆ ಸ್ವಲ್ಪವೂ ಇಷ್ಟವಿಲ್ಲ ಆದರೇನು ಮಾಡಲಿ ನಾನು ಚಲಂ
ಅಲ್ಲ ಮನೆಯಿರುವುದು ಮಹಾನಗರದ ಅಪಾರ್ಟುಮೆಂಟು ಅಕ್ಕಪಕ್ಕದ ಮನೆಯ ಮಕ್ಕಳೆಲ್ಲ ಹೊರಡುವರು
ದಿನವೂ ವ್ಯಾ...