ಸುಳಿದು ನಿನ್ನ ನೆನಪು
ಕತ್ತಲ ಮನದಂಗಳದ ತುಂಬ ದೀಪದ ಬೆಳಕು
ಸುತ್ತ ಚಳಿಯ ಸಂಜೆ
ಕಾಲು ಚಾಚಿ ಒಲೆಯ ಮುಂದೆ
ನಿನ್ನ ನೆನಪಿನ ಕಾವು
ಅಕಾಲದ ಸಂಜೆ ಮಳೆಗೆ ನೆಂದ ರಸ್ತೆ
ಎದೆಯಲ್ಲಿ
ಮೇಲೇಳುವ
ಬೆಚ್ಚನೆ ಸ್ಪರ್ಶದ ಸ್ಮ್ರತಿಯ ಹಬೆ
ಒಂದು ಮಾತಿನ ಮೊದಲ ಪದ ಮಾತ್ರ ನಿನ್ನದು
ದನಿಯಾಗದೆ ಉಳಿದ ವಾಕ್ಯ
ನನಗೆ ಕೇಳಿದ್ದು ಹೇಗೆ,
ನಾನು ಹೇಳಲು ಬಾಯಿ ತೆರೆದದ್ದನ್ನ
ನೀನು ಆಡಿದ ಹಾಗೆ,
ಆಡದೆಯೆ ಉಳಿದೂ ಎಲ್ಲ ಅಂತರ್ಗತವಾದ ನಗೆ,
ಆ ನಗೆಬಿಂಬದ ಬೆಳದಿಂಗಳ ಬೆನ್ನಿಗೆ
ಕಡುಗಪ್ಪು ಆಕಾಶದ ಬಗೆ,
ಬಗೆಯಲು ಹೆದರಿಕೆ ನನಗೆ
ಉಳಿಯದೆ ಆಡಿದ ಮಾತು
ಆಡಬಾರದ್ದೇ ಅಂತಲೂ ಗೊತ್ತು ನಿನಗೆ.
ಇದು 'ಹೊಸ'ಬಗೆ!
ಕನಸಿನ ಕೆನಿ.....................................ದ. ರಾ. ಬೇಂದ್ರೆ
-
ಬೇಂದ್ರೆಯವರು ಒಂದು ಸಲ ತಮ್ಮ ಭಾಷಣದಾಗ ಹೇಳಿದ್ದರು:
“ನನಗ ಏನೋ ಹೊಳೀಲಿಕ್ಕೆ ಹತ್ತೇದ; ಅದು ಏನಂತ ತಿಳೀವಲ್ತು. ನನಗ ಏನೋ ತಿಳೀಲಿಕ್ಕೆ ಹತ್ತೇದ; ಅದು
ಏನಂತ ಹೊಳೀವಲ್ತು.”
ಬೇಂದ್ರೆಯವರ ಕ...