ಇರಬಹುದೆ
ರಸ,ಹಣ್ಣು,ಕಾಯಿ,ಬೇರು..
ಉಮ್ಮತ್ತಿ ಕಾಯಿಯ ಹಾಗೆ?
ಎರಡು ದಿನ ಹಚ್ಚಿದ ಮೇಲೆ
ಕೂದಲುದುರಿ ನುಣ್ಣಗಾಗಿ
ಫಣಿಯ ಮಂಡೆ ಬೋಳಾದ ಹಾಗೆ
ಗಂಟಲ ಸಮುದ್ರದೊಳಗಿಂದ
ಉಕ್ಕಿ ಬರುವ ಮಾತಿನಲೆಗಳ
ಅಡಗಿಸಿ, ಮಲಗಿಸಿ,
ಮೌನದಂಡೆಗೆ ಮರಳಿಸುವ
ಮಾಯಕದ ರಸ, ಹಣ್ಣು, ಕಾಯಿ, ಬೇರು?
ಇರಬಹುದೆ
ಸಿಗಬಹುದೆ
ಜೀವವುಳಿಯಬಹುದೆ?
ರಸ,ಹಣ್ಣು,ಕಾಯಿ,ಬೇರು..
ಉಮ್ಮತ್ತಿ ಕಾಯಿಯ ಹಾಗೆ?
ಎರಡು ದಿನ ಹಚ್ಚಿದ ಮೇಲೆ
ಕೂದಲುದುರಿ ನುಣ್ಣಗಾಗಿ
ಫಣಿಯ ಮಂಡೆ ಬೋಳಾದ ಹಾಗೆ
ಗಂಟಲ ಸಮುದ್ರದೊಳಗಿಂದ
ಉಕ್ಕಿ ಬರುವ ಮಾತಿನಲೆಗಳ
ಅಡಗಿಸಿ, ಮಲಗಿಸಿ,
ಮೌನದಂಡೆಗೆ ಮರಳಿಸುವ
ಮಾಯಕದ ರಸ, ಹಣ್ಣು, ಕಾಯಿ, ಬೇರು?
ಇರಬಹುದೆ
ಸಿಗಬಹುದೆ
ಜೀವವುಳಿಯಬಹುದೆ?
1 comment:
ಮಾತಿನಲೆಗಳು ಮೌನದಂಡೆಗೆ ಸೇರಬಹುದು. ಕವನದಲೆಗಳು ಅಪ್ಪಳಿಸುತ್ತಲೆ ಇರುತ್ತವೆ.
Post a Comment