ಹಳೆಯ ಹಾಡು
Inspired by WB Yeats' Old song
ಪ್ರೀತಿಸದಿರು ಬಹುಕಾಲ
ಸದಾ ಪ್ರೀತಿಸಿದ ನಾನೀಗ
ಮೂಲೆಗುಂಪಾದ
ಮರೆವೆಗೆ ಸಂದ ಹಳೆ ಹಾಡಿನ ರಾಗ
ಕಳೆದ ತಾರುಣ್ಯದ ವರುಷಗಳಲಿ
ಅನ್ಯನಾಗದೆ ಭಿನ್ನತೆ ಇಲ್ಲದೆ
ಬೇರ್ಪಡಿಸಲಾಗದ ಏಕೋಭಾವದಿ
ಇಹೆವೆಂದು ನಾನು ನಂಬಿದೆ
ಓ ಓ..ಚಣಮಾತ್ರದಲಿ ಸರಿದಳು ಅವಳು
ಓ ಪ್ರೀತಿಸದಿರು ಬಹು ಕಾಲ
ಹಾಗೆ ಪ್ರೀತಿಸಿದೆಯಾದರೆ
ಆಗಿಬಿಡುವೆ ನೀನೂ
ಮೂಲೆಗುಂಪಾಗದ
ಮರೆವೆಗೆ ಸಂದ ಹಾಡಿನ ರಾಗ..
No comments:
Post a Comment