Tuesday, April 19, 2011

ಬಿಸಿಲು ಮಳೆ ಮಳೆಬಿಲ್ಲು

ಪುಟ್ಟ ಕಲ್ಲು
ಕಪ್ಪೆ ಹಾರಿಸಿ ಎದ್ದ ಅಲೆಯಂದದಿ
ನೆನಪ ಸುಗಂಧ
ಪರಿಮಳಿಸಿ
ಹೊರಗೆ ಕಾಫಿಗೆ ಬಂದು
ನೋಡುತ್ತೇನೆ
ಬಿಸಿಲು ತೂರಿ ಮಳೆ
ಒಳಗೂ ಹೊರಗೂ
ದೊಡ್ಡ ಕಟ್ಟಡದ ಛಾವಣಿ
ಕೆಳಗೆ ಅಂದದ ಆವರಣ
ಹೊರಗೆ ಧೂಳು ಹಬೆಯೆಬ್ಬಿಸುತ್ತಾ
ಮಳೆ ನೀರ ಪೂರಣ
ದಶಕಗಳ ನೆನಪು
ಮಣ್ಣವಾಸನೆಯಲ್ಲಿ
ಹಬ್ಬುತ್ತಾ
ಮನಸು ಹಿತವಾದ ಕನಸ
ಹೊಕ್ಕು
ಪುಟ್ಟ ಕಲ್ಲು
ಕಪ್ಪೆ ಹಾರಿಸಿ
ಅಲೆ ಅಲೆ ಅಲೆ..
ಚೈತನ್ಯನ ನೋಡುತಲೆ!
ಸಾಗರ, ಕೆರೆ ಏರಿ, ಸೈಕಲ್ ಸವಾರಿ
ಹೈಸ್ಕೂಲು, ಮಾಶ್ಟ್ರು, ಸಹಪಾಠ
ಮಾತಿರದ ಕಾಲದ ಮೆಲಕು
ಹಾಕುತ್ತಾ ಕಾಫಿ ಮುಗಿದ ಮೇಲು
ಕೈಯಲ್ಲೆ ಇದೆ ಲೋಟ
ಹೊಸ ಹೊಸ ನೋಟ!
ಬಿಸಿಲು ಮಳೆ ಮಳೆಬಿಲ್ಲು
ಬೆಚ್ಚಗಿನ ಒದ್ದೆ ಅಲ್ಲು ಇಲ್ಲು ಎಲ್ಲೆಲ್ಲು

3 comments:

sunaath said...

ನಿಮ್ಮ ಕವನ ನನ್ನ ಮನದಲ್ಲೂ ಸಹ ಬಿಸಿಲು ಮಳೆ ಮಳೆಬಿಲ್ಲನ್ನು ತುಂಬಿತು. ಮನಸ್ಸು ಸಮ್ಮೋದದಲ್ಲಿ ತೇಲಿತು.

ಸಿಂಧು sindhu said...

ಪ್ರಿಯ ಸುನಾಥ,
ಖುಶಿ ನಂಗೆ ನಿಮ್ಗಿದು ಇಷ್ಟವಾಗಿದ್ದು.
ಹಳೆಯ ನೆನಪೊಂದು ಇಡಿ ಇಡಿಯಾಗಿ ಮನುಶ್ಯರೂಪದಲ್ಲಿ ನಿಂತಾಗ ಅದಕ್ಕೆ ಮಳೆ,ಬಿಸಿಲು ಮಳೆಬಿಲ್ಲು ಪ್ರಭಾವಳಿಯಾದಾಗ ಮೂಡಿದ್ದಿದು.
ಪ್ರೀತಿಯಿಂದ,ಸಿಂಧು

ವೀರಣ್ಣ ಮಂಠಾಳಕರ್ said...

ಬಿಸಿಲು ಮಳೆ ಮಳೆ ಬಿಲ್ಲು ಹೆಸರು ತುಂಬಾ ಚೆನ್ನಾಗಿವದೆ. ನೀವು ಬರೆಯುವ ಕವನಗಳು ಮತ್ತು ವಿಚಾರಗಳು ಅದ್ಬುತವಾಗಿವೆ.