ಇದ್ದಕ್ಕಿದ್ದಂಗೆ ಒಂದಿನ
ಚಳಿಗಾಲದ ಮಧ್ಯಾಹ್ನ
ಕೀ ಚಿಟುಕಿಸಿ ಜಾಲಕಿಟಕಿ ತೆರೆದರೆ
ಅಲ್ಲಿತ್ತೊಂದು ಕೊಂಡಿ
ಕುತೂಹಲದಿಂದ ಹಿಂಬಾಲಿಸಿ ಹೊರಟರೆ
ಬಂದು ನಿಂತಿದ್ದು ಕೆರೆಶಾಲೆಯ ನೆನಪಿನಂಗಳದಲ್ಲಿ
ಜೊತೆಜೊತೆಗೇ ಬೆಂಚಲ್ಲಿ ಕೂತು
ಎಂದೂ ಮಾತನಾಡಿಸಿರದ
ಆಗ ಅಕಸ್ಮಾತ್ತಾಗಿ ಎದುರು ಸಿಕ್ಕರೆ ನಾಚಿ,ಬೆಚ್ಚಿ, ಇರುಸು ಮುರುಸಾಗಿ
ತಿರುಗಿ ಸಾಗಿದ್ದ ಇಬ್ಬರೂ
ಇವತ್ತು
ಕಳೆದ ಗಂಟನ್ನು ಜೋಪಾನವಾಗಿ
ಎತ್ತಿಟ್ಟಂತೆ,
ಮರೆಯದಂತೆ, ಆಗೀಗ ಸಿಗುವಂತೆ
ಕಳೆದ ಕಾಲದ ಅಸಮಾನತೆಯನ್ನೆಲ್ಲ
ಸಪಾಟಾಗಿಸಿ ಒಬ್ಬರಿಗಿನ್ನೊಬ್ಬರ ಸಿಗಿಸಿ
ಹಳೆ ನೆನಪಿನ ಕೆರೆಯ ಅರಳು ಮೊಗ್ಗುಗಳನ್ನ
ಹರವಿ ಕೂರಿಸಿರುವುದು
ಫೇಸ್ಬುಕ್ಕು ಎಂಬ ಜಾಲಂಗಳ!
ನವೀನ,ರಘುರಾಮ,ದಿನೇಶ,ಶಶಿ..ಪೂರ್ಣಿಮಾ
ಇವರೆಲ್ಲರ ಬೆಂಗಡೆಯಲ್ಲಿ ಅನಾಮತ್ತು ಏಳು ವರ್ಷದ ಬಾಲ್ಯ
ಮತ್ತು ಅದು ಕಟ್ಟಿಕೊಟ್ಟ ಈ ಬದುಕು!
2 comments:
ನಾನು ಎರಡನೇ ಕ್ಲಾಸ್ ನಲ್ಲಿ ಇರಬೇಕಾದ್ರೆ ನನಗೆ ತುಂಬಾ ಇಷ್ಟದ ಸ್ನೇಹಿತೆ ಇದ್ದಳು.ಅವಳು ಆಮೇಲೆ transfer ಆಗಿ ಬೇರೆ ಕಡೆ ಹೋದರು.ಕಾಂಟಾಕ್ಟ್ ತಪ್ಪಿತ್ತು.ಮೊನ್ನೆ ಫೆಸ್ ಬುಕ್ಕಿನಲ್ಲಿ ಅವಳ ರಿಕ್ವೆಸ್ಟ್ ನೋಡಿ ನಂಗೂ ಹಂಗೆ ಕುಶಿ ಆಗಿತ್ತು.ಹಾಗೆ ಮತ್ತೊಬ್ಬ ಕಳೆದು ಹೋದ ಸ್ನೇಹಿತನೂ ಸಿಕ್ಕಿದ್ದಾನೆ.
Nice poem..liked it..:-)
ಸಿಂಧು ಅವರೇ ನಿಮ್ಮ ಬ್ಲಾಗ್ "ನೀಂ ಸತ್ಯವ್ರತನೇ ದಿಟಂ..." ಈಗತಾನೆ ಓದಿದೆ. ನಾನು ಕೂಡ ಕುವೆಂಪು ರವರ ಶ್ರೀ ರಾಮಾಯಣ ದರ್ಶನಂ ಓದುವುದರಲ್ಲಿದ್ದೇನೆ. ದಯವಿಟ್ಟು ಹಳೆಗನ್ನಡ / ನಡುಗನ್ನದವನ್ನು ಓದುವ Tips ಇದ್ದರೆ ಕೊಡಿ. ನನ್ನ ಹತ್ತಿರ ಆಗಲೇ ಹಳೆಗನ್ನಡ ಶಭ್ದಕೊಶವಿದೆ. ಅದನ್ನು ಬಿಟ್ಟು ಬೇರೆ ಯಾವ ರೀತಿ ತಯಾರಿ ನಡಿಸಬೇಕೋ ತಿಳಿಯದು. ದಯವಿಟ್ಟು ತಿಳಿಸಿ. ಹಳೆಗನ್ನಡ ಪುಸ್ಥಕಗಳನ್ನು ಓದಲು ಬಹಳ ಉತ್ಸುಕನಾಗಿದ್ದೇನೆ. ನನ್ನ ಒಂದು ಹಳೆಗನ್ನಡ ಕವಿತೆಯ link ಇಲ್ಲಿದೆ.
http://mind-book.blogspot.com/2010/04/blog-post_01.html
Please send the tips to read/study halegannada books to my mail id : shekar.inbox@gmail.com
Post a Comment