ಹಸಿರೆಲೆ ತುದಿ ಮುದ್ದಿಸುವ
ಹನಿ
ಇನ್ನೇನು ಜೀಕಿ ಇಳಿದು
ನೆಲದನ್ನೆಯ ಕೆನ್ನೆ ಸೋಕಿ
ಇಂಗಲಿದೆ
ಕೆಂಪು ಕೆಂಪು
ಧರಣಿಯ ಬಿಸಿಯೊಡಲಲಿ
ಸೋಸಿ ಆವಿಯಾಗಿ
ಮುಗಿಲ ತೆಕ್ಕೆಯ ಸೇರಲಿದೆ
ತಿಳಿಗಂದು ಮೋಡವದು
ಉದಾಸೀನದಲಾ
ಜೀವಸೆಲೆಯ ಹೀರಿ
ನೀಲ ಗಗನದಿ
ಮತ್ತೆ ಬೆಳ್ಳಿಯಂಚು ಹೊದ್ದು
ಕಪ್ಪಗೆ ಮೆರೆದು
ಒಣಗಿ ಉದುರಿದ ಹಳದಿಎಲೆಗೆ
ಅವರ್ಣ
ಕಂಬನಿ ಮಿಡಿದು
ಹಸಿರೆಲೆ ತುದಿಯಲ್ಲಿ
ಮುದ್ದು ಮುದ್ದಾಗಿ ಮತ್ತೆ ಕೂರಲಿದೆ
ಅದ ನೋಡ ನೋಡುತ
ದಿನಗಳು ತುಂಬುತಿವೆ
ಕಾಲನ ಬಿಂದಿಗೆ
ತುಂಬಿ ತುಳುಕಿ ಬರಿದಾಗುತ ಸಾಗಿದೆ
ತುಂಬಿದ್ದೆಲ್ಲ ತುಳುಕಲೆಬೇಕು
ತುಳುಕಿ ಕಳೆಯದೆ
ಹೊಸದು ತುಂಬಲು ಜಾಗವೆಲ್ಲಿದೆ
ತುಂಬಿ ತುಳುಕಿ
ಬಸಿದು ಆವಿಯಾಗಿ
ತುಂಬಿಕೊಳ್ಳುವ ವಿಧಾನವ
ಕಲಿಸುವ ಹನಿಯೇ
ನಿನ್ನ ನೋಡುತ ನೋಡುತ
ನನ್ನ ದಿನಗಳು ತುಂಬುತಿವೆ.
(ಹಸಿರಿನ ಬಣ್ಣದ ಚಿಗುರೆಲೆ ನೋಡಿ ನಲಿದಾಡುವೆ ನೀನು;ಹಳದಿಯ ಬಣ್ಣದ ಹಣ್ಣೆಲೆ ನೋಡಿ ಹನಿಗೂಡುವೆ ನಾನು.. - ಕಣವಿಯರ ಕವಿಸಾಲು ಅಂತ ನೆನಪು. ಸರಿಯಾದ ಮೂಲ ತಿಳಿದಿದ್ದರೆ ತಿಳಿಸಿ.)
ದರ್ಶಿನಿ ಹೋಟೆಲುಗಳೆಂಬ ಅನ್ನಪೂರ್ಣೆಯರು
-
ಸಣ್ಣ ಊರಿನಿಂದ ಮಹಾನಗರಕ್ಕೆ ಬರುವವರಿಗೆ ಅಚ್ಚರಿಯೆನಿಸುವ ಹಲವು ಸಂಗತಿಗಳು ಇಲ್ಲಿ
ಅಡಿಗಡಿಗೂ ಕಾಣಸಿಗುತ್ತವೆ. ಅಬ್ಬಾ ಎನಿಸುವಂತಹ ಇಲ್ಲಿನ ಟ್ರಾಫಿಕ್ಕು, ರಸ್ತೆಯಿಕ್ಕೆಲದ
ಥಳಥಳ ಕಟ್ಟಡಗಳು, ...
4 comments:
ಮೊದಲಿಗೆ ಪುಟ್ಟಿ :ತುಪ್ಪು" ಗೆ ಹುಟ್ಟುಹಬ್ಬದ ಶುಭಾಷಯಗಳು...
ದಿನಗಳೆವ, ತನ್ನವರು ಬೆಳೆವ, ಎಲ್ಲಾ ನೋಡುವ ನಿಮ್ಮ ಮನ ಮತ್ತು ಅದನ್ನು ಪ್ರಸ್ತಾಪಿಸಿದ ನಿಮ್ಮ ಕವನ ಇಷ್ಟವಾದವು.
cycle!
ಹನಿಯ ಕವನ ಸುಂದರವಾಗಿದೆ. ನಿಮ್ಮ ಇತರ ಕವನಗಳು ಕೂಡ.
ಹನಿಯ ಕಥೆಯನ್ನೂ ನಾನೊಂದು ಬರೆದಿದ್ದೇನೆ, ಸಮಯ ಸಿಕ್ಕಾಗ ಓದಿ.
http://mind-book.blogspot.com/2009/08/ondu-haniya-kathe.html
ಹನಿಯ ಕವನ ಸುಂದರವಾಗಿದೆ. ನಿಮ್ಮ ಇತರ ಕವನಗಳು ಕೂಡ.
ಹನಿಯ ಕಥೆಯನ್ನೂ ನಾನೊಂದು ಬರೆದಿದ್ದೇನೆ, ಸಮಯ ಸಿಕ್ಕಾಗ ಓದಿ.
http://mind-book.blogspot.com/2009/08/ondu-haniya-kathe.html
Post a Comment