ಮೊಣಕಾಲುದ್ದ ನೀರಿನ ಹೊಳೆಯಲ್ಲಿ ಆಡುವ ಮಕ್ಕಳು
ಬಿಸಿಬಿಸಿ ಕಲ್ಸೋಪಾನದ ಅಂಚಿಗೆ ನೆರಳಾಡುವ ಅರಳಿಮರ
ಬಿರು ಬೇಸಿಗೆಯ ಮಧ್ಯಾಹ್ನದಿ ಮಳೆ ಮೋಡ.
ಈಗೀಗ,
ಬರಬೇಕಾದ ಮಳೆ, ಮೋಡ ತುಂಬಿಯೂ ಬರುವುದಿಲ್ಲ
ಆಸೆ ತೋರಿಸಿ ಕರಗುವುದನ್ನು ಮೋಡಗಳು ಕಲಿತಿವೆ;
ಕರಗಿದ, ಪುಡಿಯಾದ, ಆಸೆಬೆಟ್ಟದ ತಪ್ಪಲಿನವಳು ಮಾತ್ರ
ಕಲಿಯಲಾರದೆ ಕಾಯುತ್ತಲೇ ಇರುವಳು.
(ದೋಣಿಯೊಳಗೆ ನೀನೂ....)
ನೀನು ಒಬ್ಬನೇ ನಿಲ್ಲಬಯಸಿದೆ.
(ಕರೆಯ ಮೇಲೆ ನಾನೂ...)
ನಾನು ಒಬ್ಬಳೇ ಆಗಿಬಿಟ್ಟೆ.
ಸುತ್ತ ಮಕ್ಕಳು, ನದಿ, ಆಕಾಶ, ಮಳೆ ಮೋಡ, ಬಿಸಿಲು,
ಸೋಪಾನ, ಅರಳಿ ಮರ, ಮತ್ತು ಊರೊಳಗೆ ಹೋಗುವ ಹಾದಿ.
3 comments:
ಭಾವಲಹರಿ!
ಒಂದು ಭಾವನೆಗೆ, ಒಂದು ವಾತಾವರಣ ಸೃಷ್ಟಿಸುವುದನ್ನು ನಿಮ್ಮಷ್ಟು ಚೆನ್ನಾಗಿ ಮಾಡಬಲ್ಲವರು ವರಕವಿ ಬೇಂದ್ರೆ ಮಾತ್ರ ಎಂದು ನನಗೆ ಅನಿಸುತ್ತದೆ.
ಎಷ್ಟು ಚೆಂದಾ ಬರ್ದಿದ್ದೀರಿ ಮೇಡಂ.ನೀವು ಕೆಂಡಸಂಪಿಗೆಯಲ್ಲಿ ನಾ ಬರೆದ ಲೇಖನಕ್ಕೆ ಕೊಟ್ಟ ಪ್ರತಿಕ್ರಿಯೆ ಓದಿಯೇ ದಂಗಾದೆ,ಬೆರಗಾದೆ ಏನೇನೋ ಆದೆ.ಅದರಿಂದಾಗಿಯೇ ಈ ಬರೆಹ ಓದುವ ದಾರಿ ಸಿಕ್ಕಿತು...ನಿಮ್ಮನ್ನು ಹುಡುಕಿ ಹುಡುಕಿಯೂ ಸಾಕೋ ಸಾಕಾಯ್ತು,
Post a Comment