ನಂಬಿಕೆ
ಎಂಬ ಎರಡು ಅಲಗಿನ ಕತ್ತಿ
-ಯ ಮಜಾ ಅಂದರೆ
ನಂಬಿದರೂ ನಂಬದಿದ್ದರೂ
ಮೆದುವಾದ ಮನಸು ಕೆತ್ತಿ
-ದ ಮರದ ಹಾಗೆ
ಗಾಯವುಳಿಯುವುದು
ಮರ ಬೆಳೆಯುತ್ತಲೇ ಇರುವುದು.
ಎಂಬ ಎರಡು ಅಲಗಿನ ಕತ್ತಿ
-ಯ ಮಜಾ ಅಂದರೆ
ನಂಬಿದರೂ ನಂಬದಿದ್ದರೂ
ಮೆದುವಾದ ಮನಸು ಕೆತ್ತಿ
-ದ ಮರದ ಹಾಗೆ
ಗಾಯವುಳಿಯುವುದು
ಮರ ಬೆಳೆಯುತ್ತಲೇ ಇರುವುದು.
ರೆಂಬೆರೆಂಬೆಗೆ ಚಾಚಿದ ಹಸಿರು ಮೇಲುದ ,
ಗೊಂಚಲು ಗೊಂಚಲು ಹೂ,
ಕಟ್ಟಿದ ಕಾಯಿ,
ಮಾಗುವ ಹಣ್ಣು,
ದೊರಗು ದೊರಗು ಮೈಯೊಳಗೆ
ಉಜ್ಜಿ ಹದ ಮಾಡಲು
ಪಾತ್ರಕ್ಕೆ ತಕ್ಕ ಹಸನಾದ ಮರಮುಟ್ಟು.
ಗೊಂಚಲು ಗೊಂಚಲು ಹೂ,
ಕಟ್ಟಿದ ಕಾಯಿ,
ಮಾಗುವ ಹಣ್ಣು,
ದೊರಗು ದೊರಗು ಮೈಯೊಳಗೆ
ಉಜ್ಜಿ ಹದ ಮಾಡಲು
ಪಾತ್ರಕ್ಕೆ ತಕ್ಕ ಹಸನಾದ ಮರಮುಟ್ಟು.
ಹಸಿರೆಲೆ ಹಳದಿಯಾಗಿ
ನೆಲದೆಡೆಗೆ ಪಯಣ
ನೆಲದೊಳಗಣ ಬೇರು
ಕಾಂಡದಾಚೆಗೆ ನೀಕಿದರು
ನಿಲುಕದ ಗಗನ.
ನೆಲದೆಡೆಗೆ ಪಯಣ
ನೆಲದೊಳಗಣ ಬೇರು
ಕಾಂಡದಾಚೆಗೆ ನೀಕಿದರು
ನಿಲುಕದ ಗಗನ.
ನಂಬಿಕೆ ಎಂಬ ಎರಡು ಅಲಗಿನ ಕತ್ತಿ
-ಯ ಮಜಾ ಎಂದರೆ
ಬಟ್ಟೆ ಸುತ್ತಿ ಮುಚ್ಚಿಟ್ಟರೆ
ಮುಟ್ಟದೆ ಸವರದೆ ದೂರವಿದ್ದರೆ
ನಂಬುವುದು ನಂಬದಿರುವುದು ಎಂಬ ವ್ಯತ್ಯಾಸವೂ ಬೇಡ.
-ಯ ಮಜಾ ಎಂದರೆ
ಬಟ್ಟೆ ಸುತ್ತಿ ಮುಚ್ಚಿಟ್ಟರೆ
ಮುಟ್ಟದೆ ಸವರದೆ ದೂರವಿದ್ದರೆ
ನಂಬುವುದು ನಂಬದಿರುವುದು ಎಂಬ ವ್ಯತ್ಯಾಸವೂ ಬೇಡ.
ಅದಕ್ಕೆ ಕತ್ತಿವರಸೆ ಆಗಿ ಬರುವುದಿಲ್ಲ.
1 comment:
ಅದ್ಭುತ ಕವನ. ಹೆಚ್ಚಿಗೇನು ಹೇಳಲಿ?
Post a Comment