Monday, July 14, 2014

ನಮ್ಮನೇ ದಿನಚರೀಲಿ...ಬೆಳ್ಗೆ

ಬೆಳ್ಗೆ ನಮ್ಮನೇ ದಿನಚರೀಲಿ ಈ ತರ ಎಲ್ಲಾ ನಡ್ಯತ್ತೆ.

"ಅಮ್ಮಾ
ನಂಗೆ ಒಂದು ಪೆನ್ ಬೇಕು.
ಸಂಜೆ ಆಫೀಸಿಂದ ಬಂದ್ ಮೇಲೆ ಸ್ವಲ್ಪ ಹೊತ್ತು ಕೂತ್ಕೊ.
ಮುಖ ತೊಳ್ಕೋ.
ಕುಕ್ಕರ್ ಇಟ್ಟು ಏನಾದ್ರೂ ತಿನ್ನಕ್ ಕೊಟ್ಟು
ನೀನೂ ಏನಾರು ಚೂರ್ ತಿನ್ನು. ಟೀ ಕುಡಿ.
ಆಮೇಲೆ ಇಬ್ರೂ ಜ್ಯೋತೀಸ್ ಹೋಗೋಣ ಅಮ್ಮ.
ಅಲ್ಲಿ ಆ ಪೆನ್ ಇರ್ಬೋದು."

[ಇದು ಸ್ನಾನದ ಮಧ್ಯದ ಮಾತುಕತೆ.
ಹಾಗಾಗಿ ಬೇಕುಗಳ ಸಾಲು ಬಂದ್ ಕೂಡ್ಲೆ
ನಾನು ಜೋರಾಗಿ ಮೈತಿಕ್ಕಿ ಅವಳು ಒಂದ್ಸಲ
ಜೋರಾಗಿ ಕೂಗಿ.. ಎಲ್ಲ ಆಗುತ್ತೆ ಮದ್ ಮಧ್ಯ]

ನನ್ನ ಬಾಯಿ 'ಆ' ಅಂತ ಕಳ್ದಿರತ್ತೆ. ಹುಬ್ಬು ಪ್ರಶ್ನಾರ್ಥಕ ಚಿಹ್ನೆ.
ಈಗ ಮೊದಲಿಗಿಂತ ಸ್ವಲ್ಪ ಮೆದು ದನಿ, ಅನುನಯದ ಬನಿ.

"ಅದೇನೂ ಅಂದ್ರೆ, ಅಕ್ಸ್ಮಾತ್ ಕರೆಂಟ್ ಹೋಗ್ಬಿಟ್ರೆ ಬರಿಯೋಕ್ ಆಗಲ್ಲ ಅಲ್ವಾ.
ಈ ಪೆನ್ನಲ್ಲಿ ಒಂದು ಲೈಟಿರತ್ತೆ.
ಅದೇ ಬರಿಯಕ್ಕ್ ಬರೋದನ್ನ ಒತ್ತಿದ್ ಕೂಡ್ಲೆ ಪೆನ್ನು ಬರುತ್ತಲ್ವಾ
ಆಗ ಲೈಟೂ ಹತ್ಕೊಳತ್ತೆ. ಬೇಕಾರೆ ಕತ್ಲಲ್ಲೂ ಬರೀಬೋದು."
ಈಗ ನಾನು ನಗಬೇಕೋ ಅಳಬೇಕೋ?

ನಕ್ಕರೆ ಕೂಡಲೇ ಜ್ಯೋತೀಸ್ ಹೋಗಬೇಕಾಗತ್ತೆ.
ಆಗ ಅವಳಿಗೆ ನಗು ಮತ್ತು ನನಗೆ ಇನ್ನೇನು ಅಳು ಬರುವ ಕ್ಷಣ.
ನಾನು ಮರುಮಾತಾಡದೆ ಕೊನೆಯ ತಂಬಿಗೆ ನೀರು ಆ ಪುಟ್ ಪುಟಾಣಿ ಮೈಗೆ ಹೊಯ್ದು


ಮೆತ್ತನೆ ಟವೆಲ್ಲಲ್ಲಿ ಒರಸಿ, ಒಂಚೂರು ಜೋರಾಗಿನೇ ಬಾತ್ರೂಮಿನಿಂದ ದಬ್ಬಿಕೊಂಡು ಹೊರಗೆ ಬರುತ್ತೇನೆ.

ನಾನು ಈ ಮಾತುಕತೆಯ ಮಧ್ ಮಧ್ಯೆ ಬರುವ ಉದ್ಗಾರಗಳು, ಅನುನಯಗಳನ್ನೆಲ್ಲಾ ಇಲ್ಲಿ ಬರೆಯಲು ಹೋಗಿಲ್ಲ. :)

6 comments:

Sushrutha Dodderi said...

:-)

ನಂಗೂ ಬೇಕು ಲೈಟ್ ಇಪ್ಪ ಪೆನ್ನು.

ವಿ.ರಾ.ಹೆ. said...

:) :)

sunaath said...

ಮಗುವಿನ ಮನದಲ್ಲಿಯ ಕಾಮನಬಿಲ್ಲನ್ನು ಸೊಗಸಾಗಿ ಸೆರೆ ಹಿಡಿದಿದ್ದೀರಿ.

Badarinath Palavalli said...

ಸ್ಕೂಲಿನಲ್ಲಿ ಜೊತೆ ಮಕ್ಕಳು ಕಲ್ಪನೆಗಳನ್ನು ಅಮೋಘವಾಗಿ ಬಿತ್ತಿ ಕಲಿಸುತ್ತವೆ ಅಂತ ಕಾಣುತ್ತೆ!
ಹ್ಹಹ್ಹಹ್ಹ
ಎಂತ ಅದ್ಭುತ ಪೆನ್ನುರೀ ಅದೂ... ವ್ಹಾವ್...

@spn3187 ಕನ್ನಡಿಗ ಶಿವಕುಮಾರ ನೇಗಿಮನಿ said...

http://bit.ly/1tOXv19

Ahalya said...

:) :)