Thursday, April 24, 2014

ಕು ಹೂ ಗೀತ

ಇವಳು
"ಸ್ಥವಿರಗಿರಿಯ ಚಲನದಾಸೆ",
ಇವನು
"ಗಂಗಾವತರಣ".
ಇವಳು
ಕಲರವದ ಮರುದನಿ ಹಕ್ಕಿ.
ಇವನು
ಹಕ್ಕಿ ಕೂತ ರೆಂಬೆ.
ಇವಳು
ಬೆಳ್ಳಿ ಮೂಡಿತೋ ಕೋಳಿ ಕೂಗಿತೋ.
ಇವನು
ಎಮ್ಮೇ ನಿನಗೆ ಸಾಟಿಯಿಲ್ಲ.
ಇವಳು
ದೊಡ್ಡವರೆಲ್ಲ ಜಾಣರಲ್ಲ.
ಇವನು
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ.
ಇವಳು
ದಂಡೆಗೆ ಹುಲಿಮುದ್ದು
ಮಾಡಿ ಮತ್ತೆ ಮತ್ತೆ ಬರುವ
ಸಮುದ್ರೆ.
ಇವನು
ಸಮುದ್ರೆಗೆ
ಕಾದು ಕೂತ
ದಂಡೆ.
ಇವರಿಬ್ಬರ ಸಂಗಾತ
ದಲ್ಲಿ
ನಾವು
ತೆರೆಯಿಳಿತ ತೆರೆಯೇರು,
ಸಂಭ್ರಮದ ಈಜುಮುಳುಗು,
ಒಮ್ಮೊಮ್ಮೆ
ನೀರು ಕುಡಿದು ನೆತ್ತಿ ಹತ್ತಿ,
ಮತ್ತೆ ನಗುನಗುತ್ತ
ಅಳುನುಂಗಿದ

ಮೆರ್ರಿ ಗೀತ. 

ಪುತಿನ ಅಂದ ಹಾಗೆ
ಕೂ ಗೀತ. ಹೂ ಗೀತ. ಕುಹೂ ಗೀತವು.


3 comments:

ಪ್ರೇಮತಾಣ said...

ಪದ್ಯ ಚಂದ ಇದೆ ಸಿಂಧೂ.

Badarinath Palavalli said...

ಅದೇ ಅಲ್ಲವೇ ನಿಜ ದಾಂಪತ್ಯಗೀತೆ.
ಇಲ್ಲಿ ಸಾಮಜ ಅಲ್ಲಿ ವರಗಮನ!
ಕವನದಲ್ಲಿ ಕಟ್ಟಿಕೊಟ್ಟ ಆ ಗೀತೆಗಳ ಸಾಲುಗಳೂ ಗಮನ ಸೆಳೆದವು.

sunaath said...

ಆನಂದದಾಯಿನಿ ಗೀತೆ.