Friday, April 11, 2014

ಅನುಕ್ತ

ಧುಮ್ಮಿಕ್ಕುತ್ತದೆ
ಧಾರೆ
ಹೊಮ್ಮುತ್ತದೆ
ಜ್ವಾಲೆ
ಸುಯ್ಯುತ್ತದೆ
ಅಲೆ....

ಒಡ್ಡು
ಕಟ್ಟೆ
ದಂಡೆ.. ಗಳಿಗೆ ಸುಳಿಸುಳಿದು-
ತಡೆಯುತ್ತದೆ,
ಹಿಮ್ಮೆಟ್ಟುತ್ತದೆ,
ಮರಳುತ್ತದೆ,

ತುಟಿಗಳಲ್ಲಿ
ನೇತಾಡುವ ಮಾತು..
ತಿರುಗಿ
ಬಂದ ಕಡೆಗೆ ಹೋಗುತ್ತದೆ.

ಹೇಳುವುದಕ್ಕೂ
ಕೇಳುವುದಕ್ಕೂ

ಸಮಯವಿಲ್ಲ.

3 comments:

sunaath said...

ನಿಮ್ಮ ಕವನಗಳು ಇದೀಗ ಹೊಸದೊಂದು formನಲ್ಲಿ ಬರುತ್ತಲಿವೆ. ತುಂಬ ವಿಶಿಷ್ಟವಾಗಿದೆ, ಸೊಗಸಾಗಿದೆ ಈ ಹೊಸ ಆಕಾರ....ಪುಟ್ಟ ಕನ್ನಡಿಯಲ್ಲಿ ಓಡುತ್ತಿರುವ ಮೋಡಗಳನ್ನು ಹಿಡಿದಂತೆ.

Badarinath Palavalli said...

defensively ಇದು ಸಮಯವಲ್ಲ!

ನಿಮ್ಮ ಈ ಹೊಸ ಶೈಲಿ ನನಗೆ ಮಾದರಿಯಾಗಲಿ.

prabhamani nagaraja said...

ಕವನ ವಿಭಿನ್ನ ಹಾಗೂ ವಿನೂತನವಾಗಿದೆ, ಅಭಿನ೦ದನೆಗಳು.