Wednesday, September 11, 2013

ಬಾಗು-ಬಳುಕು

ನೇರ

ಗೆರೆ ಕೊರೆದಂತೆ

ಅತ್ತಿತ್ತ ಅಲುಗದಂತೆ

ಚೆಲ್ಲದಂತೆ

ಚದುರದಂತೆ

ನುಣ್ಪು ಚೂರೂ

ದೊರಗಾಗದಂತೆ..

ಇದ್ದರೆ

ಮುರಿಯಬಹುದು

ಕತ್ತರಿಸಬಹುದು

ಅಳಿಸಬಹುದು

ತುಂಬಿಕೊಳ್ಳದೆ ಇರಬಹುದು

ಜಾರಿ ಹೋಗಬಹುದು

ಯಾರಿಗೂ ಬೇಕು ಅನ್ನಿಸದೆ ಹೋಗಬಹುದು.

ಅದಕ್ಕೇ

ಇರಬೇಕು

ಬಾಗು, ಬಳುಕು,

ತುಂಬಿಕೊಳ್ಳುವ ದೊರಗು,

ದಾರಿ ಸಿಗದಿದ್ದರೆ ಸುತ್ತಿ ಬಳಸುವ

ಡೊಂಕು.

ಇರಿಯುವುದು ಸುಲಭ,

ಅರಳುವುದು ಕಷ್ಟ.

ನೇವರಿಸುವುದು ಬಲು ಕಷ್ಟ.

ನದಿ, ಹರಿವು,ಬಾಗು, ಬಳುಕು. ತೋರಿದ ಬೆಳಕು

ಮಬ್ಬು ಹರಿಸಬೇಕು,

ಮುಂದೆ ನಡೆಯಬೇಕು.

2 comments:

ತೇಜಸ್ವಿನಿ ಹೆಗಡೆ said...

ತುಂಬಬೇಕು.. ತುಂಬಲು ಬಾಗಲೇ ಬೇಕು... :) ತುಂಬಾ ಇಷ್ಟ ಆತು ಸಿಂಧು :)

-ತೇಜ್

sunaath said...

ನಿಮ್ಮ ಕವನದಲ್ಲಿಯ ದರ್ಶನದಂತೆ, ನಿಮ್ಮ ಕವನವೂ ಸಹ ಬಾಗುತ್ತ, ಬಳಕುತ್ತ ಚೆಲುವನ್ನು ಮೆರೆದಿದೆ!