ಜಗವೆಲ್ಲ
ಫೇಸ್ಬುಕ್ಕು, ಟ್ವಿಟ್ಟರಲ್ಲಿ ಮುಳುಗಿ
ತೇಲಾಡುತ್ತಿರುವಾಗ
ಬದುಕಿನ ಗಂಟನ್ನು
ಜಾಣಜಾಣೆಯರೆಲ್ಲ
ಸೋಶಿಯಲ್ ಕನ್ನಡಿಯಲ್ಲಿ
ಹಿಡಿದ್ ಹಿಡಿದು ಸಂಭ್ರಮಿಸಿ
ಟೋಸ್ಟ್ ಮಾಡುವ
ಹೊತ್ತಲ್ಲಿ
ಇಲ್ಲೊಂದು ಪುಟ್ಟ
ಮೂಲೆಯಲಿ
ಸುಮ್ಮಗೆ ಎಲೆ ಬಗ್ಗಿಸಿ
ಮರವೊಂದು
ನಿಂತಿದೆ.
ಏಸಿಯಲಿ ಕುಳಿತು
ಕೀ ಕುಟ್ಟುವವರಿಗೆ
ಬಿಸಿಲ ಅರಿವಿಲ್ಲ
ನೆರಳು ಬೇಕಿಲ್ಲ
ಕಿವಿಗಳಲಿ ಇಯರ್ಫೋನು
ತುರುಕಿ ಜಗದಗಲದ ಸಂಗೀತ
ಕೇಳುವವರಿಗೆ
ಕೊಂಬೆಯಲಿ ಉಲಿವ
ಹಕ್ಕಿದನಿಯ ಗರಜಿಲ್ಲ
ಹಳೆಹಳೆಯವರು
ಕೀ ಒತ್ತದವರು, ಶಾಯಿಯಲದ್ದಿ
ಬರೆದವರು
ಸ್ಕ್ಯಾನು ಮಾಡಿ ಆರ್ಟಿಕಲು
ಕಳಿಸಿದವರು
ಸುಮ್ಮನಿದ್ದಾರೆ, ಮೇಲು ಬರೆಯಲು ಬರುವುದಿಲ್ಲ
ಬಾಣಶೂರರಿಗೆ
ತಿಳಿಯಬೇಕಾದ ದರ್ದಿಲ್ಲ.
ಮರ ಸುಮ್ಮಗಿದೆ.
ಕಡಿದಷ್ಟೂ ಚಿಗುರುವುದು
ಮರದ ಗುಣ.
ಮನುಷ್ಯನದಲ್ಲ.
ತಿರುಗಿ ನೋಡದೆ
ಹೊರಟ ಕ್ರೌರ್ಯಕ್ಕೆ
ಮಾತು ನುಂಗಿ
ನಿಲ್ಲುವುದೆ ಮದ್ದಿರಬಹುದೆ?!
5 comments:
ಸಿಂಧು,
ಈ ಸೋಶಲ್, ವ್ಹರ್ಚುಅಲ್ ಚಕ್ರವ್ಯೂಹದಿಂದ ಹೊರಬಂದು, ಆ ಮರದಂತೆ ನೈಸರ್ಗಿಕವಾಗಲು ಆಧುನಿಕ ಮನುಜರಿಗೆ ಸಾಧ್ಯವಾದೀತೆ? ನಿಮ್ಮ ಕಳಕಳಿ ಹಾಗು ಅದು ವ್ಯಕ್ತವಾದ ಬಗೆ ಮೆಚ್ಚುವಂತಹದು.
ನಿಮ್ಮ ಕವನದಲ್ಲಿ ನನ್ಗಿಷ್ಟವಾದದ್ದು, ಫೇಸ್ ಬುಕ್, ಟ್ವಿಟ್ಟರ್ ಇರುವಂತಹ ಈ ಕಾಲದಲ್ಲಿ, ಮರದ ತಂಪಾದ ನೆರಳು, ಹಕ್ಕಿಗಳ ಕಲರವ, ಬೇಕಾಗಿಲ್ಲ ಎನ್ನುವ ಮಾತು. ಕವನ ತುಂಬಾ ಚೆನ್ನಾಗಿದೆ.
ನನ್ನ ಬ್ಲಾಗಿಗೂ ಭೇಟಿ ಕೊಡಿ.
ನಿಮ್ಮ ಕವನದಲ್ಲಿ ನನ್ಗಿಷ್ಟವಾದದ್ದು, ಫೇಸ್ ಬುಕ್, ಟ್ವಿಟ್ಟರ್ ಇರುವಂತಹ ಈ ಕಾಲದಲ್ಲಿ, ಮರದ ತಂಪಾದ ನೆರಳು, ಹಕ್ಕಿಗಳ ಕಲರವ, ಬೇಕಾಗಿಲ್ಲ ಎನ್ನುವ ಮಾತು. ಕವನ ತುಂಬಾ ಚೆನ್ನಾಗಿದೆ.
ನನ್ನ ಬ್ಲಾಗಿಗೂ ಭೇಟಿ ಕೊಡಿ.
ಎಲ್ಲರಿಗೂ ಉತ್ತರ ಕೊಡುವ ಹಾಗಿದೆ ಕವನ. ಪ್ರಾರಬ್ಧಗಳ ಮೂಟೆಯಂತಹ ಮನುಜರಿಗೆ ತಿದ್ದಲಾರೆವು ಬಿಡಿ.
http://badari-poems.blogspot.in
very nice
Post a Comment