ಮಳೆಗಾಲದ ಮಧ್ಯಾಹ್ನ
ಉಂಹೂಂ ನಮ್ಮೂರಾಗಲ್ಲ
ಇಲ್ಲೆ ಐಟಿಸಿಟಿಯಲ್ಲಿ
ಬೈಗು,ಬೆಳಗು,ಬಿಸ್ಲೊತ್ತು,ನೆಳಲು
ಗೊತ್ತಾಗದ ಹಾಗೆ
ಏಸಿಯಲ್ಲಿ ಕುಳಿತು
ದಿನಚರಿಯನ್ನೇನು ಹೇಳುವುದು ಬಿಡಿ
ಎಲ್ಲರ ಕತೆಯೂ ಅದೆ
ವಿಷ್ಯ ಏನಪಾಂದ್ರೆ
ಸ್ವಲ್ಪ ಹೆಚ್ಚೇ ಕಾಡುತ್ತಿರುವ
ಹಲ್ನೋವು.
ಹುಂ ತಕ್ಷಣವೇ ಡಾಕ್ಟರತ್ರ
ಕರ್ಕೊಂಡೋಗಲು ನಾನು
ಹೊಸಹೆಂಡತಿಯಲ್ಲ.
ಅಂವ ಹಳೆಗಂಡನೂ ಅಲ್ಲ
ವಯಸ್ಸಾದ್ ಮೇಲೆ
ಇದ್ದಿದ್ದೆ ಇದೆಲ್ಲ
ಅಂತ ನಾನೂ ಸುಮ್ನಿದ್ದೆ
ಸುಮ್ನಾದಂಗೂ ಅಬ್ಬರ
ಜಾಸ್ತಿಯಾಗುವುದೇ ಹಲ್ನೋವಿನ ಲಕ್ಷಣವಂತೆ
ಈಗ ಮೂವತ್ತೈದರ ಆಜೂಬಾಜಲ್ಲಿ
ಇನ್ನೇನು ಮತ್ತೆ
ಎಲ್ಲ ಸಣ್ ಪುಟ್ಟ ಕಾಯಿಲೆಗಳಿಗೂ
ಬಾಲಗೋಪಾಲದಿಂದ
ಕಿರೀಟಕ್ಕೇ ಭಡ್ತಿ.
ಅದಕ್ಕೆ ಇರಬೇಕು
ಮಹಾನಗರದ ಆಸುಪತ್ರೆಗಳೆಲ್ಲ ಭರ್ತಿ.
ಮಳೆಯ ಚಳ್ ಚಳಿಯಲ್ಲಿ
ಬೆಚ್ಚಗೆ ಕೂತು ಚಕ್ಕಲಿ ಕಡಿಯುವ ನೆನಪಿಗೆ
ಹಲ್ಲು ಕಟಗುಟ್ಟಿ
ಇಷ್ಟೆಲ್ಲ ಬರೆಸಿದ್ದು ನೋಡಿದ್ರೆ
ಭೂತಗನ್ನಡಿಯಲ್ಲಿ ಬೆಳಕು ತೂರದೇನೆ
ಬೆಂಕಿ ಬಂದ್ರೂ ಬಂತೆ.
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
-
“ಅಸ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ| ಪೂರ್ವಾಪರೌ ತೋಯನಿಧೀ
ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ ”
ಕವಿಗುರು ಕಾಳಿದಾಸನು ತನ್ನ ‘ಕುಮಾರಸಂಭವ’ ಕಾವ್ಯ...
9 comments:
LOL! :D Go and get treated akkam! :)
ಚೆನ್ನಾಗಿದೇರಿ ಹಲ್ನೋವು ಕಥೆ :)
ಸಿಂಧು,
ದಂತಯಾತನೆಯಿಂದ ಪ್ರೇರಣೆ ಪಡೆದ ಮಧುರ ಭಾವಲಹರಿ!
ನೆನಪೇ ಕಾರಣವಾಗಿ ಹಲ್ಲು ಕಟಕಟಸಿ ಮೂಡಿದ ಕವನ.
ನಿಮಗೆ ಹಲ್ಲು ನೋವಾದರೂ ಪರವಾಗಿಲ್ಲ, ಕ್ಷಮಿಸಿ; ಕವನ ಸುಂದರವಾಗಿದೆ!(ನೋವು ನಿಮ್ಮದು, ಸಂತೋಷ ನಮ್ಮದು!)
ಹ್ಹ ಹ್ಹ ಹ್ಹಾ.......
ನಿಮ್ಮ ಹಲ್ಲುನೋವಿನ ವ್ಯತೆಯ ಕತೆ
ನಮಗೆ ಓದಲು ಸುಂದರ ಕವಿತೆ
ಸುನಾಥ್ ಜೀ ಹೇಳಿದಂತೆ ನಿಮ್ಮ ನೋವು ನಮ್ಮ ನಲಿವು!
ಚನ್ನಾಗಿದೆ.
aha:) kavana maja! ninna saja kke anukampavide:)
ಸು,
ಒಳ್ಳೇ ತಮ್ಮ. ನಗ್ತಾ ಇದ್ರೂ ಪ್ರಾಕ್ಟಿಕಲ್ ಸಜೆಶನ್ ಕೊಡ್ತಾ ಇದ್ದೆ. :) ಇದು ಹಳೇ ಕವಿತೆ. ಹಲ್ನೋವು ಇಲ್ಲೆ.
ಗುರು,
ಥ್ಯಾಂಕ್ಸ್..
ಸುನಾಥ್,
ಕವನ ಚೆನ್ನಾಗಿದ್ದರೆ, ಹಲ್ಲುನೋವು ಬಂದಾಗ ಉಂಟಾದ ಕಿರಿಕಿರಿಯೇ ಕಾರಣ. :)
ಪ್ರವೀಣ್,
ಥ್ಯಾಂಕ್ಸ್ ಕಣ್ರೀ.
ನಿಧಿ ಎಂಬ ತಮ್ಮನೇ,
ನಿಮ್ಮ ಅನುಕಂಪವನ್ನು ಸ್ವೀಕರಿಸಲಾಗಿದೆ. ಮುಂದೆ ನಿಮ್ಮ ಹಲ್ಲುನೋವಿನ ಸಮಯದಲ್ಲಿ ಬಡ್ಡಿ ಸಮೇತ ವಾಪಸ್ ಮಾಡಲಾಗುವುದು. ;)
ನಿಮ್ಮೆಲ್ಲರ ಸ್ಪಂದನೆಗೆ ಧನ್ಯವಾದಗಳು
ಪ್ರೀತಿಯಿಂದ,ಸಿಂಧು
+೧ ಮನದಾಳದಿಂದ
sindhu medam novigu
naliva kavana chendavaagide
ಸ್ಪಂದಿಸಿದ ಸೀತಾರಾಂ ಮತ್ತು ಕಲರವ ಇಬ್ಬರಿಗೂ ಧನ್ಯವಾದಗಳು.
-ಸಿಂಧು
Post a Comment