Friday, September 25, 2009

Ground Reality hurts.. n its unfair world!

ಸಮಾನತೆ, ಸ್ವಾತಂತ್ರ್ಯ
ಸ್ವಾವಲಂಬನೆ
ಒಳ್ಳೆಯ ಉಕ್ತಲೇಖನದ ಪದಗಳು.
ಎಷ್ಟೇ ಸರಿಯಾಗಿ ಬರೆದರೂ
ಅವು ಪುಸ್ತಕದ ಮೇಲೆ ಮಾತ್ರ.
ಮಾತುಗಳಲ್ಲಿ ಬಂದರೂ
ಭಾಷಣಗಳಲ್ಲಿ ಮಾತ್ರ.
ಪದಗಳಲ್ಲಿ ಮೂಡಿದರೂ
ಪ್ರಶಸ್ತಿ ಪಡೆಯುವ ಕವಿತೆಗಳಿಗೆ ಮಾತ್ರ.
ಚಿತ್ರದಲ್ಲಿ ಬರಬೇಕಿದ್ದರೆ
ಕಲಾತ್ಮಕ ಸಿನಿಮಾಗಳಿಗೆ ಮಾತ್ರ.
ಬದುಕಿನ ಸ್ತರವೇ ಬೇರೆ
ಹೆಣ್ಣು ಯಾವತ್ತಿದ್ದರೂ ಹೊಂದಾಣಿಕೆಗೆ ಮಾತ್ರ.

11 comments:

ರಾಜೇಶ್ ನಾಯ್ಕ said...

??? ಏನಾಯ್ತು? ನಿರಾಶೆಯಿಂದ ಕೂಡಿದ ಲೇಖನ/ಕವಿತೆ/ಕವನ.

shivu.k said...

ಸಿಂಧು ಮೇಡಮ್,

ಕವನ ಚಿಕ್ಕದಾದರೂ ವಾಸ್ತವವನ್ನು ಚೆನ್ನಾಗಿ ಕಟ್ಟಿಕೊಡುತ್ತದೆ...

shivu.k said...

ಸಿಂಧು ಮೇಡಮ್,

ಕವನ ಚಿಕ್ಕದಾದರೂ ವಾಸ್ತವವನ್ನು ಚೆನ್ನಾಗಿ ಕಟ್ಟಿಕೊಡುತ್ತದೆ...

Srik said...

I do accept that reality bites. But not all ways as we think. It depends on the situation and circumstances that we are in. Perhaps! reality is to be looked with greater courage that takes us beyond hurtful feeling and gives us more confidence to proceed!

Anyway! Loved the way you have written :)

sunaath said...

ಸಿಂಧು,
ಇದು ಇವತ್ತಿನ ವಾಸ್ತವ!

ಚಕೋರ said...

ಇನ್ನಷ್ಟು ಉತ್ತಮವಾಗಿ ಬರೆಯಬಹುದಿತ್ತೆನಿಸಿತು..

Shree said...

:-) :-) :-) you said it!

Shree said...

:-) :-) :-) you said it!

ರಂಗ said...
This comment has been removed by the author.
ಅಲೆಮಾರಿ said...

nimma kavanagalella chendagive:)

ಸಿಂಧು sindhu said...

ಸ್ಪಂದಿಸಿದ ಎಲ್ಲರಿಗೂ ವಂದನೆಗಳು.

ಹಮ್ ಮ್ ಮ್.. ನನ್ನ ತೀವ್ರ ಭಾವಬಿಂದುವೊಂದು ಇಲ್ಲಿ ಅಭಿವ್ಯಕ್ತಗೊಂಡಿದೆ.
ಹೆಚ್ಚಿನ ಮಾತುಕತೆ ರಿಲೇಟ್ ಆಗುವುದು ಕಷ್ಟ ಈ ವಿಷಯದಲ್ಲಿ. ಸಾಂದರ್ಭಿಕತೆ ಮತ್ತು ಮನೋಭಾವ ಈ ವಿಷಯಕ್ಕೆ ಅತಿ ಮುಖ್ಯ. ಮುಂದೆಂದಾದರೂ ಈ ಬಗ್ಗೆ ಮಾತನಾಡಿಯೇನು.

ಪ್ರೀತಿಯಿರಲಿ,
ಸಿಂಧು