Tuesday, September 23, 2008

ಹೊಸಜೀವ ಹೊಸಭಾವ ಹೊಸತೀರ..

ಭಾದ್ರಪದ ಮುಗಿಯುವ ಸಮಯ
ಚವತಿ ಚಂದಿರನ ಅಪವಾದ ಅಂಟಿಸುವ
ಚೆಲ್ಮೊಗಕ್ಕೆ
ಕೃಷ್ಣಪಕ್ಷದ ಸವೆತ..
ಅಲ್ಲಿ ಪಡುವಣದ ತೀರದಲ್ಲಿ
ಒಬ್ಬರಿನ್ನೊಬ್ಬರಲ್ಲಿ ಲೀನದಂಪತಿಗಳ ಮಡಿಲಲ್ಲಿ
ಮೊಗ್ಗು ಹೂಬಿರಿದಿದೆ;
ಮನಸು ಹಗುರಾಗಿ,
ಚಳಿ ಕೂರುತ್ತಿರುವ ಸಂಜೆಗಳಲ್ಲಿ
ಮಳೆಮೋಡದ ನೆನಪು ದಟ್ಟವಾಗಿ-
ಪುಟ್ಟವಳು, ಚಿಕ್ಕವಳು
ಇವತ್ತಷ್ಟೇ ಹುಟ್ಟಿದವಳು
ಅಮ್ಮನ ಮಡಿಲು ತುಂಬಿ,
ಅಪ್ಪನ ಮನಸು ತುಂಬಿ,
ಸುತ್ತೆಲ್ಲರ ಬದುಕಲ್ಲಿ ಆಹ್ಲಾದ ತುಂಬುವವಳು
ಚೆಲುವಾಗಿ,ಒಳಿತಾಗಿ ಬೆಳೆಯಲಿ
ಎಂದು
ನವನವೋನ್ಮೇಷ ಶಾಲಿನೀ
ಪ್ರಕೃತಿಯ ಚರಣಗಳಲ್ಲಿ
ಒಂದು ತುಪ್ಪದ ದೀಪದ ವಿನಂತಿ..
ಇಲ್ಲಿ ಬೆಳಗುವ ಸೊಡರಿನ
ಪ್ರತಿಫಲನಕ್ಕೆ

ಇಂದು ಸಂಜೆಯ ಪಡುವಣ ತೀರದ ಕೆನ್ನೆ ಇನ್ನಷ್ಟು ಕೆಂಪಾಗಲಿದೆ.

3 comments:

ಪ್ರಿಯಾ ಕೆರ್ವಾಶೆ said...

nangishta aaytu nim kavana

ರಂಜನಾ ಹೆಗ್ಡೆ said...

ನಂಗೆ ಖುಷಿ ಆಕ್ತಾ ಇದ್ದು. ಚನ್ನಾಗಿದ್ದು ಕವನ.

sunaath said...

ಆ ನಿಮ್ಮ ಸಂಜೆ ನನ್ನಲ್ಲೂ ಹರ್ಷ ತುಂಬಿತು.