Wednesday, May 10, 2017

ಇಳಿ-ಕವಿತೆ.

ಹದಿನೆಂಟು ತುಂಬಿದ ಕತ್ತೆ
ಯೂ ಇರಬಹುದು
ಗ್ರೀಕ್ ಚೆಲುವೆ ಆಫ್ರೋದಿತೆ;
ಏರು ಯವ್ವನದ ಕಣ್ಗಳಿಗೆ
ಸುತ್ತೆಲ್ಲ ಹೂ ಹಾಸಿದ
ದಾರಿಯಲಿ ಹೆಜ್ಜೆಯಿಡುವ
ಉನ್ಮತ್ತ ಮೋಹಕತೆ!

ನಿರೀಕ್ಷೆ ಕಳೆದು
ಕೈಗೆ ಸಿಕ್ಕ ನಕ್ಷತ್ರ
ಬಯಸುವ ತಾರೆಯಾಗುವುಳಿವುದೆ ಇಲ್ಲ
ಉದುರಿ ಬಿದ್ದ ಉಲ್ಕೆಯ ಚೂರು.
ಇದು ಚರಿತೆ.

ಬಾಹುಗಳ ಎತ್ತಿ ರೆಕ್ಕೆ ಬಿಚ್ಚಿ
ಹಾರುತಿದ್ದ ಆಪ್ರೋದಿತೆ
ಕುಳಿತಿದ್ದಾಳೆ-
ತೂಕ ಹೆಚ್ಚಿ,
ಸೊಂಟ ಉಳುಕಿ,
ಕಾಲು ಸ್ವಲ್ಪ ನೋವಿದೆ,
ನಗುವ ಅಧರಗಳ
ಬದಿಯ ಆರ್ದ್ರತೆ
ಇಳಿದ ಕಣ್ಬನಿಯ ಕುರುಹ ಹೇಳಿತೆ?
ವಿಷಾದ ತುಳುಕುವ
ಇಳಿ(ಗಾಲದ) ಕವಿತೆ.

1 comment:

sunaath said...

ಇಳಿಗಾಲದ ಆಫ್ರೋದಿತೆಯ ದೈಹಿಕ ಚೆಲುವು ಮಾಸೀತು; ಆದರೆ ಬದುಕಿನ ಚೆಲುವು ಮಾಸಲಾರದು! ನಿಮ್ಮ ಕವನಗಳ ಚೆಲುವೂ ಸಹ ನಿತ್ಯನೂತನ.