ಹತ್ತಿರವಿರು
ಇಲ್ಲೆ ಬಳಿಯಲ್ಲಿ,
ದೂರವಿರಲಿ
ಮಾತು, ಹೊರನೆಗೆದಾಟ
ದನಿಯೊಡೆಯದೆಯೂ
ಕೇಳಬಲ್ಲೆನಾದರೆ,
ಮುಟ್ಟದೆಯೂ
ಅರಿಯಬಲ್ಲೆನಾದರೆ,
ನೋಡದೆಯೂ
ಕಾಣಬಲ್ಲೆನಾದರೆ,
ಅಷ್ಟು ಸಾಕು
ಈ ಬದುಕಿಗೆ.
ಉಳಿದದ್ದೆಲ್ಲ
ತಮ್ಮ ತಮ್ಮ ಪಾಡಿಗೆ
ಇರಲಿ ಹಾಗೆಯೇ ಚೆಂದಕೆ
ಎಳೆತನವೆ ಸೊಗಸು
ಮಾಗಿದ ಬದುಕಿಗೆ.
ಇಲ್ಲೆ ಬಳಿಯಲ್ಲಿ,
ದೂರವಿರಲಿ
ಮಾತು, ಹೊರನೆಗೆದಾಟ
ದನಿಯೊಡೆಯದೆಯೂ
ಕೇಳಬಲ್ಲೆನಾದರೆ,
ಮುಟ್ಟದೆಯೂ
ಅರಿಯಬಲ್ಲೆನಾದರೆ,
ನೋಡದೆಯೂ
ಕಾಣಬಲ್ಲೆನಾದರೆ,
ಈ ಬದುಕಿಗೆ.
ಉಳಿದದ್ದೆಲ್ಲ
ತಮ್ಮ ತಮ್ಮ ಪಾಡಿಗೆ
ಇರಲಿ ಹಾಗೆಯೇ ಚೆಂದಕೆ
ಎಳೆತನವೆ ಸೊಗಸು
ಮಾಗಿದ ಬದುಕಿಗೆ.
1 comment:
ಇದಾದರೆ ಬದುಕು ಸಾರ್ಥಕ. ಇದನ್ನು ಚೆಂದವಾಗಿ ತಿಳಿಸುವ ಕವನ ಸಾರ್ಥಕ.
Post a Comment