Tuesday, September 27, 2016

ಶಿಲುಬೆ ಹೊತ್ತ ಬೆನ್ನು

ಮೋಡ ಕಟ್ಟುತ್ತದೆ
ಹನಿಯುವುದೇ ಇಲ್ಲ
ಹೇಳಲಿಕ್ಕೆ ತುಂಬ ಇದೆ
ದನಿಯಾಗುವುದೇ ಇಲ್ಲ

ಹೀಗಿರಬಾರದಿತ್ತು
ಹಾಗೇ ಇದ್ದಿದ್ದರೆ ಚೆನ್ನಿತ್ತು

ಈಗ ಏನು ಮಾತಾಡಿದರೂ
ಕರ್ತವ್ಯ ಮತ್ತು ಜವಾಬ್ದಾರಿ
ಶಿಲುಬೆ ಹೊತ್ತ ಬೆನ್ನು
ಕೂಡುವುದಿಲ್ಲ ಕಣ್ಣು
ಮಿಂಚುವುದಿಲ್ಲ
ಬರಿದೆ ಗುಡುಗು
ಮಳೆ ಬರದೆಯೂ
ಕಲಕಿ ಹೋದ ಕಣ್ಣು

ಜೊತೆ ಹೆಜ್ಜೆ,
ಗುರಿಯಿರದ ಹಾದಿ
ಹನಿ ಮುದ್ದಿಸುವ ಕಾನು
ಕಂಡ ಶಿಖರವನೇರಲಿಕ್ಕು
ಕಣಿವೆ ತುಂಬ ದಿಕ್ಕು
ಎಲ್ಲ ದಾಟಿ
ರಾಜಪಥದ ಬೀದಿಯ
ಆರತಕ್ಷತೆಯಲ್ಲಿ
ಬಯಲಾದೆವು
ಹಾಗೇ ಇದ್ದಿದ್ದರೆ ಚೆನ್ನಿತ್ತು.

ಶಿಲುಬೆ ಹೊತ್ತ ಬೆನ್ನು
ಸಾಕೆನಿಸಿಯೂ ಹೊರಲೇಬೇಕಿನ್ನು.

2 comments:

sunaath said...

ಶಿಲುಬೆ ಹೊತ್ತ ಬೆನ್ನಿಗೆ ಬದುಕಿನ ದಾರಿ ಭಾರವಾಗುವದು ಸರಿಯೇ. ಆದರೆ, ನಿಮ್ಮ ಪ್ರತಿಭೆ ತುಂಬಿದ ಪೆನ್ನಿನಿಂದ ಬರುವ ಕವನಗಳು ಈ ಭಾರವನ್ನು ಹಗುರಗೊಳಿಸುವವು. Hats off!

Unknown said...

Haage iddiddare chennittu