ಇವತ್ತು ಬೆಳಗಿಗೊಂದು
ಹೊಸಪಾಠ;
ಹಿಡಿಬೆರಳು ಗಟ್ಟಿಯಾಗಿ
ಬಿಡದೆ ಹಿಡಿದು
ಕಣ್ ಬನಿ ಒರೆಸುತ್ತ
ನಡೆದ ದಾರಿಗಳೀಗ
ಅಗಲಗಲ,
ಮರಗಳಿಂದ ತೂಗುವ
ಹೂಗೊಂಚಲು ಎಡಬಲ,
ಮಳೆನಿಂತು ಹನಿವ
ಹಸಿರೊಳಳಗೆ ಹುದುಗಿ
ಹಾಡುವ ಕೋಕಿಲ,
ಹೊಸದಾಗಿ ಬೈಂಡ್ ಹಾಕಿಟ್ಟ ಪುಸ್ತಕಗಳ
ತುಂಬಿದ ಚೀಲ,
ಹೆಗಲಿಗೇರಿಸಿ...
ನೀ ಬರದಿದ್ದರೇನಂತೆ,
ವ್ಯಾನೇ ಆದರು ಪರವಾ ಇಲ್ಲ,
ಎಂದೋಡುವ
ಕಿನ್ನರ ಕಾಲ್ಗಳ ಒಡತಿ
-ಯ
ಕೈಗಳು
ಹೊರಡುವ ಮುಂಚೆ
ಬರಸೆಳೆದಿದ್ದು ಯಾಕೋ!!?
ಅಪ್ಪಿಕೊಂಡ
ಹೊಟ್ಟೆಯೊಳಗೆ ತಳಮಳ.
ಇವತ್ತು ಬೆಳಗಿಗೊಂದು
ಹೊಸಪಾಠ;
ಬಿಟ್ಟೋಡುತ್ತ ಹರಿದ ಬದುಕಿಗೆ
ಇನ್ನು ಬಿಟ್ಟುಕೊಡಲು
ಕಲಿಯಬೇಕಿರುವ ಸಂಕಟ.
ಹೊಸಪಾಠ;
ಹಿಡಿಬೆರಳು ಗಟ್ಟಿಯಾಗಿ
ಬಿಡದೆ ಹಿಡಿದು
ಕಣ್ ಬನಿ ಒರೆಸುತ್ತ
ನಡೆದ ದಾರಿಗಳೀಗ
ಅಗಲಗಲ,
ಮರಗಳಿಂದ ತೂಗುವ
ಹೂಗೊಂಚಲು ಎಡಬಲ,
ಮಳೆನಿಂತು ಹನಿವ
ಹಸಿರೊಳಳಗೆ ಹುದುಗಿ
ಹಾಡುವ ಕೋಕಿಲ,
ಹೊಸದಾಗಿ ಬೈಂಡ್ ಹಾಕಿಟ್ಟ ಪುಸ್ತಕಗಳ
ತುಂಬಿದ ಚೀಲ,
ಹೆಗಲಿಗೇರಿಸಿ...
ನೀ ಬರದಿದ್ದರೇನಂತೆ,
ವ್ಯಾನೇ ಆದರು ಪರವಾ ಇಲ್ಲ,
ಎಂದೋಡುವ
ಕಿನ್ನರ ಕಾಲ್ಗಳ ಒಡತಿ
-ಯ
ಕೈಗಳು
ಹೊರಡುವ ಮುಂಚೆ
ಬರಸೆಳೆದಿದ್ದು ಯಾಕೋ!!?
ಅಪ್ಪಿಕೊಂಡ
ಇವತ್ತು ಬೆಳಗಿಗೊಂದು
ಹೊಸಪಾಠ;
ಬಿಟ್ಟೋಡುತ್ತ ಹರಿದ ಬದುಕಿಗೆ
ಇನ್ನು ಬಿಟ್ಟುಕೊಡಲು
ಕಲಿಯಬೇಕಿರುವ ಸಂಕಟ.
4 comments:
Nice lines madam...
ಚಿಣ್ಣರ ಚಡಪಡಿಕೆಯನ್ನು, ಅದಕ್ಕೂ ಅಧಿಕವಾಗಿರುವ ತಾಯಿಯ ತಳಮಳವನ್ನು ಚೆನ್ನಾಗಿ ತೋರಿಸಿದ್ದೀರಿ.ಕೊನೆಯ ದರ್ಶನ ತುಂಬ ಸಮಂಜಸವಾಗಿದೆ: ಇನ್ನು ಬಿಟ್ಟುಕೊಡಲು ಕಲಿಯಬೇಕಿರುವ ಸಂಕಟ!
ಎಷ್ಟೋ ಯುಗಗಳ ನಂತರ, ಬ್ಲಾ^ಗಿಗೆ ಬಂದಿದ್ದೀರಿ. ಒಳ್ಳೆಯ ಕವನವನ್ನು ಕೊಟ್ಟಿದ್ದೀರಿ ಎನ್ನುವ ಸಮಾಧಾನವಿದೆ.
@ಶಿವರುದ್ರಯ್ಯ ಸಾಲಿಮಠ್ - ಧನ್ಯವಾದಗಳು. ನಿಮ್ಮ ಸ್ಪಂದನೆಗಾಗಿ.
@ ಸುನಾಥ ಕಾಕ: ಪ್ರೀತಿಯ ಕಾಕಾ. ನಾನು ಬರೆದು ನಿಮ್ಮ ಒಂದು ಪ್ರತಿಸ್ಪಂದನೆ ಇಲ್ಲದೆ ಯಾ ಕಾಲಾಗಿತ್ತೋ ಅನ್ನಿಸಿಬಿಟ್ಟಿತ್ತು. ಇದೇ ಸರಿಯಾದ ಜಾಗ.
ಈ ಮಕ್ಕಳು ಕೊನೆತನಕಾನೂ ಕಲಿಸ್ತಾನೇ ಇರ್ತಾರೆ ಅಂತ ಅನ್ನಿಸ್ತಾ ಇದೆ ನನಗೆ. ಮಕ್ಕಳು ಮತ್ತು ಹಿರಿಯರನ್ನ ನೋಡಿದಾಗೆಲ್ಲ ಏನೇನೋ ತುಂಬುತದೆ ತಲೆಯೊಳಗೆ. ಹಿಡಿದ, ಹಿಡಿಯಬೇಕಿದ್ದ, ಹಿಡಿಯಬಹುದಾದ ದಾರಿ ಮತ್ತು ಪಯಣಗಳ ಸಾಧ್ಯತೆ ಎಷ್ಟು ಅನಂತ ಇದೆ ಅಲ್ಲಾ..
ನಿಮ್ಮ ಪ್ರೀತಿಗೆ ಶರಣು.
Post a Comment