Wednesday, February 5, 2014

ಕನಸಿನ ನಿಯಮ..

ರೋ ರೋ ರೋ ಅ ಬೋಟ್
ಜೆಂಟ್ಲಿ ಡೌನ್ ದಿ ಸ್ಟ್ರೀಮ್...
ಮೆರಿಲಿ ಮೆರಿಲಿ ಮೆರಿಲಿ ಮೆರಿಲಿ
ಲೈಫ್ ಈಸ್ ಬಟ್ ಅ ಡ್ರೀಮ್..


ಇದೇ ಸರಿ.

(ನೀರಿದ್ದರೆ)
ನಿಧಾನಕ್ಕೆ.. ಆ ಹರಿವಲ್ಲಿ
ನವುರಾಗಿ..
ಮುಳುಗೇ ಹೋಗುತ್ತೇನೆ ಎನ್ನಿಸಿದರೂ
ತೇಲುತಿರುವೆ ಎಂಬಂತೆ..
ಹುಟ್ಟು ಹಾಕಬೇಕು,
ಕನಸಲ್ಲಾದರೂ
ಅಳದೆ ಇರಬೇಕು.
ಅಳುಕು ಮರೆಯಬೇಕು.

ಎಚ್ಚರದ ಮಾತು
ಈಗ ಬೇಡ.

3 comments:

Badarinath Palavalli said...

ಕನಸಲಾದರೂ ಧೈರ್ಯಸ್ಥರಾಗಬೇಕೆಂಬ ತಮ್ಮ ಮಾತು ನನ್ನ ಪಾಲಿಗಂತೂ ಎಷ್ಟೋ ಮನೋಧೈರ್ಯವನ್ನು ತುಂಬುವಂತಿದೆ.

sunaath said...

ಒಂದು ಯೋಚನೆ, ಒಂದು ಭಾವನೆ ಎಲ್ಲವೂ ಕವನರೂಪದಲ್ಲಿ ಹರಳುಗಟ್ಟುವುದನ್ನು ನಿಮ್ಮ ಕಾವ್ಯದಲ್ಲಿ ಕಾಣುತ್ತೇನೆ.

ತೇಜಸ್ವಿನಿ ಹೆಗಡೆ said...

ಎಚ್ಚರದ ಮಾತೊಂದೇ ಅಲ್ಲ ಸಿಂಧು.. ಎಚ್ಚರಿಸುವಂಥವರೂ ಬೇಡ?! :) ಕಲ್ಪನೆಗಳು ಚೆಂದ.