Thursday, January 30, 2014

ಹೀಗೇ ಒಂದೆರಡು...ಮಾತು.

ಕುಡಿದು ಕುಪ್ಪಳಿಸಿ
ಲೇಟಾಗೆದ್ದು ಸ್ವಾಗತಿಸಿದ ಹೊಸವರ್ಷದ
ಮೊದಲಲ್ಲೆ
ವೈಕುಂಠ ಏಕಾದಶಿ.
ಸಾವಿನ ಹೊಸ್ತಿಲಿನಾಚೆ ಒಂದು ಸೀಟು
ಕಾದಿರಿಸಿಕೊಂಡೇ
ಸಂಭ್ರಮಿಸಿಬಿಡೋಣ.
ಎಳ್ಳು ಬೆಲ್ಲ ಹಂಚಿ
ಒಳ್ಳೊಳ್ಳೆ ಮಾತಾಡಿ
ಒಳಿತು ಕೆಡುಕುಗಳ ಮಧ್ಯೆ ಗೆರೆಯೆಳೆಯದೆ..
ಬೇರೆ ಇಸವಿಯ ಪಥಕ್ಕೆ ಸೇರೋಣ.
ಸಮ್ಮೇಳನಗಳ ಟಾಕು (talk)
ಸಂಭ್ರಮಗಳ ಠೀಕು
ಇವೆಲ್ಲವನ್ನೂ ಹರಿದಾಡಿಸಿದ ಟ್ವೀಟು
ಒತ್ತಿ ಒತ್ತಿ ಕೊಟ್ಟ ಎಫ್.ಬಿ ಲೈಕು
ಪ್ರಿಂಟಾಗಿ ಬಂದ ದಿನಪತ್ರಿಕೆಯ
ಆನ್ ಲೈನು ಲಿಂಕು
ಆಹಾ ..ಸಮಾಜವೇ (social)
ಸೋ ರಿಯಲ್! ಮತ್ತು
ಕೆಲವೊಮ್ಮೆ.. ಸರ್ರಿಯಲ್!!
ಮಾಧ್ಯಮ ಪೋಷಿತ, ಪ್ರೇಷಿತ
ಜನ ಸಮೂಹದಿಂದೆದ್ದು
ಬರಬಹುದೆ
ಬಾಹುಬಲಿ
ಈ ಸಲ ಭರತನಿಗಾಗಿ!


ಎಷ್ಟೆಲ್ಲ ಕೆಲಸವಿದೆ
ಕಥೆ, ಕವಿತೆ, ಹಾಡು ಕರೆಯುತ್ತಿವೆ
ಮಕ್ಕಳೂ ಕಾಯುತ್ತಿದ್ದಾರೆ
ಮನೆಯೊಳಗೆ
ರಾತ್ರಿಯ ಮಮ್ಮು ತಿನ್ನಿಸಿ
ಗೋಗರೆದು ಮಲಗಿಸುವಷ್ಟರಲ್ಲಿ
ಬೆಳದಿಂಗಳಿನ ದಾಹವಡಗಿ
ಬೆನ್ನು ಹಾಸಿಗೆ ತಾಗುವ ಮೊದಲೆ
ಸುಖನಿದ್ದೆ.

ಎಷ್ಟೆಲ್ಲ ಕೆಲಸವಿದೆ.
ಒಂದಿಡೀ ವರ್ಷವಿದೆ.
ಆಮೇಲೆ.. ಇನ್ನೇನು
ಎಂದಿನಂತೆ
ಮತ್ತೊಂದು ವರ್ಷ ಬರುತ್ತದೆ..
ಆದರೂ
ಎದಿರುಗೊಳ್ಳುವವರೆಗೂ ಖಾತ್ರಿಯಿಲ್ಲ.
ಎಂದೇ
ಈ ಹಳೇವರುಷವನ್ನೇ ಬದುಕಿಬಿಡಲು.
ನಿರೀಕ್ಷೆ
ಹೊಸ ಹುರುಪು ತುಂಬಿದೆ..

ಅಷ್ಟಲ್ಲದೆ ಅನ್ನುತಾರೆಯೇ..
ನಿರೀಕ್ಷೆಯೆ ಪರಮಸುಖ! ಮತ್ತು ಸಖ.

4 comments:

ಅರವಿಂದ said...

ಚನ್ನಾಗಿದೆ. ಜೊತೆಗೆ ಸ್ವಲ್ಪ ಕಾವ್ಯದ ಬಗೆಗೆ(ಶೈಲಿ) ಹೊಸ ಪ್ರಯೋಗಗಳಿಗೆ ಪ್ರಯತ್ನಿಸಿದರೆ ಉತ್ತಮ.

ಧನ್ಯವಾದಗಳು

ಅರವಿಂದ said...

ಚನ್ನಾಗಿದೆ. ಜೊತೆಗೆ ಸ್ವಲ್ಪ ಕಾವ್ಯದ ಬಗೆಗೆ(ಶೈಲಿ) ಹೊಸ ಪ್ರಯೋಗಗಳಿಗೆ ಪ್ರಯತ್ನಿಸಿದರೆ ಉತ್ತಮ.

ಧನ್ಯವಾದಗಳು

sunaath said...

ಜೀವನಕ್ಕೆ ಹಿಡಿದ ಕನ್ನಡಿ ನಿಮ್ಮ ಕವನ!

Badarinath Palavalli said...

"ಅಷ್ಟಲ್ಲದೆ ಅನ್ನುತಾರೆಯೇ..
ನಿರೀಕ್ಷೆಯೆ ಪರಮಸುಖ! ಮತ್ತು ಸಖ."
ಅಲ್ಲವೇ ಮತ್ತೆ!

ತುಂಬಾ ವಿಚಾರಗಳನ್ನು ಪೋಣಿಸಿ ಬಾಸೆದುಕೊಟ್ಟ ನಿಮ್ಮ ಈ ಕವನ ನಿಜವಾಗಲೂ ಮೆಚ್ಚುಗೆಯಾಯಿತು.

http://badari-poems.blogspot.in/2014/01/blog-post_31.html

(ಅಂದಹಾಗೆ, ನಿಮ್ಮ facebook id ನನಗೆ ಗೊತ್ತಾಗಲಿಲ್ಲ! ನನ್ನ id Badarinath Palavalli )