ಕೈಯಲ್ಲಿ
ಹೂಗೊಂಚಲು ಹಿಡಿದ
ಹೂಮೊಗವ
ತುಂಬಿದ ನೆರಳು
ನನಗೆ ಗೊತ್ತು.
ತುಂಟತನದಲ್ಲಿ
ಅದ್ದಿ ತೆಗೆದ ಮೂರ್ತಿಯ
ಕಣ್ಣಿನಲ್ಲಿ ಪ್ರತಿಫಲಿಸುವ
ಅಭದ್ರತೆಯ ಭಾವವೂ ಗೊತ್ತು.
ಹಿಡಿದು ಎರಡು ತಟ್ಟಬೇಕೆನ್ನಿಸುವಷ್ಟು
ಸಿಟ್ಟು ಬಂದರೂ
ಸುಮ್ಮನೆ ತಬ್ಬಿಕೊಳ್ಳುತ್ತೇನೆ.
ಬಯ್ಗುಳವ ಬಂದ ದಾರಿಯಲ್ಲೆ
ವಾಪಸ್ ಕಳಿಸಿ
ಆ ಬಾಯಲ್ಲೆ ನಿನ್ನ ಕೆನ್ನೆಗೆ
ಮತ್ತೊಂದು ಮುತ್ತಿಡುತ್ತೇನೆ.
ತಮ್ಮನ ಕೆನ್ನೆ ಚಿವುಟಲು
ಹೋಗಿ
ಮೆತ್ತಗೆ ಸವರುವ
ಆ ಸಿರಿಕರಗಳಿಗೆ
ಕರುಣಾರವಿಂದಗಳಿಗೆ
ನನ್ನ ತಲೆಯಿಡುತ್ತೇನೆ.
ಬಾಲ್ಯಕ್ಕೆ
ಸ್ವಲ್ಪ ಇರಿಸುಮುರಿಸಾದರೂ
ನಿನ್ನ ಬದುಕಿಡೀ
ಜೊತೆಯಾಗುವ
ಈ ಜೀವ ನಿನಗೆ
ತುಂಬ ಇಷ್ಟವಾಗತ್ತೆ
ಅಂತ ಗೊತ್ತು.
ನನಗೊಬ್ಬ
ತಮ್ಮನಿರುವ
ನಿರಾಳ
ನನಗಷ್ಟೇ ಗೊತ್ತು.
ಚಂದಚಿಟ್ಟೆಗೂ
ಮೊದಲು
ಕಂಬಳಿಹುಳು
ರಾತ್ರಿಯ ಒಡಲಲ್ಲೇ
ಬೆಳಕಿನ ಬೀಜ.
7 comments:
ಸಿಂಧು,
ಬಹು ದಿನಗಳ ನಂತರ, ನಿಮ್ಮ ಕವಿತೆಯ ಅಮೃತಪಾನ!
ನಿಮ್ಮ ಕವಿತೆ ಯಾವಾಗಲೂ ಚಂದದ ಚಿಟ್ಟೆಯೇ. ಮನಕ್ಕೆ ಮುದ ನೀಡುವ ಕವನ.
sindhu is sindhu:) only u can write this!
Loved the ending:) ನಿಮ್ಮ ಬರೆಹಗಳನ್ನು ಓದುವುದೇ ಒಂದು ಖುಶಿ. ಅಹಲ್ಯಾ ಬಲ್ಲಾಳ್
Loved the ending.:)ನಿಮ್ಮ ಬರೆಹ ಓದುವುದೇ ಒಂದು ಖುಶಿ. ಅಹಲ್ಯಾ ಬಲ್ಲಾಳ್
tumba khushi aytu Sindhu nimma kavithe noDi tumba divasagaLa nantara :-)
~Shubha Ajay
ತುಂಬಾ ಸೊಗಸಾದ ಕವನ.
ಚಂದಚಿಟ್ಟೆಗೂ
ಮೊದಲು
ಕಂಬಳಿಹುಳು
ರಾತ್ರಿಯ ಒಡಲಲ್ಲೇ
ಬೆಳಕಿನ ಬೀಜ.
ಇದು ನಿಜಕ್ಕೂ ಹೊಸತನದ ಸಾಲು...
@ ಸುನಾಥ ಕಾಕಾ,
ನಿಮಗೆ ಖುಶಿಯಾಗಿದ್ದೇ ನನಗೆ ಖುಶಿ. ಹೂಂ ಈಗ ಅಮ್ಮನ ಅವತಾರವೊಂದಿದೆಯಲ್ಲಾ! ಸಮಯಾಭಾವ.
@ನಿಧಿ
ಪಂಡಿತರ ಸಹವಾಸ - ದಾರವೂ ಹೊರಟಿದೆ... :-)
@ಅಹಲ್ಯಾ
ನಿಮ್ಖುಶೀ ನಂಗೂ ಬಂತು. ಥ್ಯಾಂಕ್ಯೂ.
@ಶುಭಾ,
ಮಧುರಳ ಅಮ್ಮಾ ನಿಮ್ಮ ಮಾಧುರ್ಯನೂ ಸ್ವಲ್ಪ ಹಂಚಿ ನಮ್ಗೆ.
ಹೆಂಗಿದ್ದೆ? ಮನೆಗ್ ಬನ್ನಿ.
@ಶಿವು.
ನಿಮ್ಮ ವೆಂಡರ್ ಕಣ್ಣಿಗೆ ಹಿತವುಂಟು ಮಾಡಿದ್ದರೆ ಅಷ್ಟರ ಮಟ್ಟಿಗೆ ಸಾರ್ಥಕ ಇದು.
ಥ್ಯಾಂಕ್ಸ.
ಪ್ರೀತಿಯಿಂದ,
ಸಿಂಧು
Post a Comment