ನೀನು ಲೆಕ್ಕಕ್ಕೆ
ನಾನು ಆಟಕ್ಕೆ
ಔಟಾದರೂ, ಗೆದ್ದರೂ
ಆಟ ನಿಂತರೂ ನಡೆದರೂ
ನನಗೇ ಬಿಟ್ಟ
ಕುಂಟೇಬಿಲ್ಲೆ
ಕಾಣದ ಹಾಗೆ
ಕಟ್ಟಿಕೊಂಡ ಎಲ್ಲೆ.
ಕಾಲಿದ್ದೂ ಕುಂಟುವ
ನೋವು
ಆಡಿದವರಿಗೇ ಗೊತ್ತು,
ಬಿಲ್ಲೆ ಇಲ್ಲದೆ ದೂಡುವ
ಹೆಜ್ಜೆ ಭಾರ ಭಾರ ಇತ್ತು,
ಒಂದು ಮಾತು
ಹ್ಯಾಗಿದೀ ಅಂತ ಕೇಳಿದ್ದರೂ
ಸಾಕಿತ್ತು.
ಮಾತು ಬಿಟ್ ಹಾಕು
ಆದರೆ ಎಲ್ಲಿ ??
ಆ -
ಕೈಯೊತ್ತು,
ಕಣ್ಣು ಕಣ್ಣು ಕಲೆವ ಹೊತ್ತು,
ಕವಿದ ಕತ್ತಲಲ್ಲೆ ಹೊಳೆವ
ಬಾನ್ಮುತ್ತು...?!
ಯಾವುದೋ ಆಟ
ಇನ್ಯಾವುದೋ ಲೆಕ್ಕ
ಕನಸು ಬೀಳುವ ಕಣ್ಣಲಿ
ಕಸ ಬಿದ್ದು
ಧಾರೆ ಧಾರೆ ಮುತ್ತು.
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
-
“ಅಸ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ| ಪೂರ್ವಾಪರೌ ತೋಯನಿಧೀ
ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ ”
ಕವಿಗುರು ಕಾಳಿದಾಸನು ತನ್ನ ‘ಕುಮಾರಸಂಭವ’ ಕಾವ್ಯ...
7 comments:
ಕಾಲಿದ್ದೂ ಕುಂಟುವ
ನೋವು
ಆಡಿದವರಿಗೇ ಗೊತ್ತು,..
Good poem.
ಬಿಲ್ಲೆ ಕಾಣದ ಈ ಕುಂಟೆಬಿಲ್ಲೆಯನ್ನು ಆಡುವ ಬದಲು ‘ಮೂರುಕಾಲಿನ ಓಟ’ವನ್ನು ಆಡುವದು ಒಳ್ಳೇದೇನೊ? ಆದರೆ ಇಲ್ಲಿಯೂ ಸಹ ಮುಗ್ಗರಿಸಿ ಬೀಳುವ ಸಂಭವ ಇದ್ದೇ ಇದೆ. The best game is Patience!
ಒಳ್ಳೆಯ ಕವನಕ್ಕಾಗಿ ಅಭಿನಂದನೆಗಳು.
@ ಕೇಶವ್,
ಮೆಚ್ಚುಗೆಗೆ ಧನ್ಯವಾದ
@ ಸುನಾಥ ಕಾಕಾ,
ನಿಮ್ ಮಾತು ಸತ್ಯ, ಮೆಚ್ಚುಗೆಗೆ ಮುದ ಪದಲೂ ಹಿಂದೆಗೆವ ಮನಸ್ಸಿನಲ್ಲಿ...ನಿಮ್ಮ patience ಸಲಹೆ ಮೋಡಗಟ್ಟಿದ ಮನಕ್ಕೆ ಬೆಳ್ಳಿಗೆರೆ!
ಪ್ರೀತಿಯಿಂದ,
ಸಿಂಧು
ಸರ್,
ಚೆಂದದ ಕವನ.
ನಿಮಗೂ ಯುಗಾದಿ ಹಬ್ಬದ ಶುಭಾಶಯಗಳು.
ಒಂದು ಒಳ್ಳೆಯ ಕವನ
`ಆಟಕ್ಕು೦ಟು ಲೆಕ್ಕಕ್ಕಿಲ್ಲ' ಎನ್ನುವ ಮಾತು ಕೇಳಿದ್ದೆ. ನಿಮ್ಮ ಕವನ `ಲೆಕ್ಕಕ್ಕುಂಟು ಆಟಕ್ಕಿಲ್ಲ...'! ಸು೦ದರ ಸಾಲುಗಳ ಉತ್ತಮ ಕವನ, ಅಭಿನ೦ದನೆಗಳು. ನನ್ನ ಬ್ಲಾಗ್ ಗೂ ಬನ್ನಿ.
@ಶಿವು @ ಬದರಿನಾಥ್ - ಧನ್ಯವಾದಗಳು ಮೆಚ್ಚುಗೆಗೆ
@ ಪ್ರಭಾಮಣಿ ನಾಗರಾಜ್ - ಹುಂ - ಇದು ಲೆಕ್ಕಕ್ಕೆ ಸಂದು ಆಡಲೊಲ್ಲದವರ ಕವಿತೆ.
ಆಟಕ್ಕುಂಟು ಲೆಕ್ಕಕ್ಕಿಲ್ಲ ಬಾಲ್ಯಕ್ಕೆ ದಕ್ಕಿದ ಒಂದು ಸುಂದರ ಕವಿಸಮಯ..
ದೊಡ್ಡವರಾದ ಮೇಲೆ ಲೆಕ್ಕವೇ ಎಲ್ಲ.
ಓದುತ್ತಿರುತ್ತೇನೆ ನಿಮ್ಮ ಬ್ಲಾಗನ್ನು. ಧನ್ಯವಾದ
ಪ್ರೀತಿಯಿಂದ
ಸಿಂಧು
Post a Comment