ಹೀಗೊಂದು ಪುರಸೊತ್ತಿನ ಕ್ಷಣದಲ್ಲಿ ಅಕ್ಷರಕ್ಕೆ ಹರಿದ ಲಹರಿ.
"ದಿಲ್ ಡೂಂಢ್ ತಾ ಹೈ ಫಿರ್ ವೊಹೀ ಪುರಸತ್ ಕೇ ರಾತ್ ದಿನ್.. "ಅಂತ ಶೀರ್ಷಿಕೆ ಕೊಟ್ಟು ಬರೆದ ಕಾಲಂ ಒಂದನ್ನು ಓದುತ್ತಿದ್ದ ದಿನಗಳಲ್ಲಿ ಆ ಇಡೀ ಸಾಲಿನ ಅರ್ಥವೇ ಹೊಳೆದಿರಲಿಲ್ಲ. ಆ ಹಾಡನ್ನು ಕೇಳಿರಲಿಲ್ಲ. ಆದರೆ ಆ ಲೇಖನವಿಡೀ ಹಾಡಿನ ಅಂತರಾಳವಿತ್ತು. ಮತ್ತು ಅದು ಸುಮ್ ಸುಮ್ನೇ ನಂಗೆ ಇಷ್ಟವಾಗಿಬಿಟ್ಟಿತು.
ನಮ್ಮ ಕರ್ನಾಟಕದ ಎತ್ತರದ ಗಿರಿಯ ಶಿಖರದಲ್ಲಿ ಕಳೆದ ಒಂದು ಸಂಜೆ ನನ್ನ ವಾಕ್ ಮನ್ನಲ್ಲಿ ಆ ಹಾಡು ಪೂರ್ತಿಯಾಗಿ ಕಿವಿಗಿಳಿಯಿತು. ಹತ್ತಿದ ಸುಸ್ತನ್ನು ಅಳಿಸಿ ಮನಸ್ಸನ್ನ ಹೊಸದೇ ಒಂದು ಭಾವೋದ್ದೀಪ್ತ ಮಜಲಿಗೊಯ್ದು ನಿಲ್ಲಿಸಿತು. ಆ ಎತ್ತರ ಬಾನೆತ್ತರದಲ್ಲಿ ನನ್ನ ಕಾಲು,ಹಿಂಬದಿಗಳು ಮಾತ್ರ ನೆಲಕ್ಕಂಟಿದ್ದವು. ಮನ ಮುಗಿಲ ಅಂಚುಗಳಲ್ಲಿ ಸುತ್ತುತ್ತಿತ್ತು.
ಹಾಡಿದವರು ಭೂಪಿಂದರ್ ಮತ್ತು ಬರೆದವರು ಗುಲ್ಜಾರ್ ಎಂಬ ವಿಷಯ ತಿಳಿಯಿತು. ಅವತ್ತು ಸಂಜೆ ಇರುಳುಗೆಂಪಲ್ಲಿ ಹರಿದ ಇಂಪು, ರಾತ್ರಿ ನಕ್ಷತ್ರಗಳು ಮಿಂಚುವಾಗಲೂ ಹರಿಯುತ್ತಲೇ ಇತ್ತು. ನಡುರಾತ್ರಿ ಕಳೆದು ಇಬ್ಬನಿತಂಪು ನಮ್ಮ ಟೆಂಟಲ್ಲಿ ಹನಿಯುವವರೆಗೂ ಹಾಡುತ್ತಿದ್ದ ವಾಕ್ ಮನ್ ಶೆಲ್ ಖಾಲಿಯಾಗಿ ನಿಲ್ಲುವವರೆಗೂ! ಬೆಳಿಗ್ಗೆ ಎದ್ದ ಕೂಡಲೆ ಪುರಸೊತ್ತಿನ ರಾತ್ರಿ ಮುಗಿದು ರಾಶಿ ರಾಶಿ ಮುಗಿಲುಗಳ ಹಿಂಡು ನಮ್ಮ ಶಿಖರವನ್ನು ಮುತ್ತಿದ ಚಟುವಟಿಕೆಯ ಬೆಳಗು ಹರಿಯಿತು! ಆಮೇಲೆ ಹಲವು ರಾತ್ರಿಗಳ ದೀಪವಾರಿದ ನಂತರದ ಅಳಲಿನ ಗಳಿಗೆಗಳಲ್ಲಿ ಸಾಥಿ ಕೊಟ್ಟ ಹಾಡು, ಗಡಿಬಿಡಿಯ ಗಳಿಕೆಯ ದಿನಗಳಲ್ಲಿ ನನ್ನ ಬಿಝಿ ಶೆಡ್ಯೂಲು ನೋಡಿ ವಾರ್ಡ್ ರೋಬಿನ, ಕೆಳ ಅಂಚಿನ ಡ್ರಾದಲ್ಲಿ ಹಳೆಯ ಕ್ಯಾಸೆಟ್ಟುಗಳ ಒಳಗೇ ಉಳಿಯಿತು.
ಇವತ್ತು ಇನ್ನೇನೋ ಹಳೆಯದರ ನೆನಪಿನ ದೀಪ ಹಚ್ಚಿಟ್ಟುಕೊಂಡು, ಕಳೆದ ದಿನಗಳ ಇರುಳುಗತ್ತಲೆಯ ಗೋಡೌನಿನಲ್ಲಿ ಅಲೆದಾಟ. ಅಲ್ಲಿ ಜಗಜೀತರ ದನಿ ತುಮ್ ಕೋ ದೇಖಾ ತೋ.. ಅಂತ ನಸುನಗುತ್ತಾ ಫುರ್ ಸತ್ ಕೇ ರಾತ್ ದಿನ್ ನೆನಪು ಮಾಡಿಕೊಡುತ್ತಿದೆ. ಅಷ್ಟೆಯೇ ಆ ಪುರಸೊತ್ತಲ್ಲಿ ಏನೇನು ಮಾಡಬಹುದು ಅಂದುಕೊಂಡೇ ರೋಮಾಂಚಿತಳು ನಾನು. ಮಾಡಿದೆನಾ ಅಂತ ಕೇಳಬೇಡಿ. ಅಕಸ್ಮಾತ್ ಕೇಳಿದರೆ ಹೇಳಲಿಕ್ಕೆ ಸಮಯವಿಲ್ಲ. :)
ಥೋಡೀ ಸೀ ಜಮೀ ಥೋಡಾ ಆಸ್ ಮಾ ದ ಟ್ಯೂನು ಸರಿಯಾಗುವುದು ೩೦*೪೦ ಚಿಕ್ಕ ಮನೆಯೋ ಅಥವಾ ಅಪಾರ್ಟ್ ಮೆಂಟೂ ನಡೆಯುತ್ತೋ ಅಂತ ಗೊಂದಲಗೊಳ್ಳುತ್ತೇನೆ ನಾನು. ಅರಳು ಹುರಿದ ಹಾಗೆ ಮಾತನಾಡದಿದ್ದರೂ ಹುರಿದ ಅರಳನ್ನು ತಿನ್ನುತ್ತ ಮಾತನಾಡಿ ಕಳೆಯುವ ನಮ್ಮ ವೀಕೆಂಡಿನ ಸಂಜೆಗಳಲ್ಲಿ ಕಾಗೆ ಹಾರಿಸುವ ಅವಶ್ಯಕತೆ ಇಲ್ಲ. ಅವೆಲ್ಲ ಗೂಡು ಸೇರಿದ ಮೇಲೆಯೇ ನಾವು ಹೊರಗೆ ಬರುವುದು.
ಈ ಹಾಡು ನೀವು ಕೇಳಿರದೆ ಇದ್ದರೆ ಇಲ್ಲಿವರೆಗೂ.. ಈಗ ಕೇಳಿ.
http://www.muzigle.com/track/thodi-si-zamin-thoda-aasman
ನಂಗೆ ತುಂಬ ಇಷ್ಟ ಆದ ಈ ಹಾಡಿನ ಸಾಹಿತ್ಯ ಗುಲ್ಜಾರ್ ಅವರದ್ದು.
ಇದೊಂದು ಡ್ಯುಯೆಟ್ - ಭೂಪಿಂದರ್ ಮತ್ತು ಲತಾ ಅವರ ಧ್ವನಿ. ಆರ್.ಡಿ ಬರ್ಮನ್ ಅವರ ಸಂಗೀತ.
ಇವಳು: ಥೋಡಿ ಸಿ ಝಮೀ.. ಥೋಡಾ ಆಸ್.ಮಾ
ಅವನು: ತಿನ್ ಕೋಂ ಕಾ ಬಸ್ ಇಕ್ ಆಶಿಯಾಂ
ಇವಳು: ಮಾಂಗಾ ಹೈ ಜೋ ತುಮ್ ಸೆ ವೋ ಜ್ಯಾದಾ ತೊ ನಹೀಂ ಹೈ
ಅವನು: ದೇನೆ ಕೋ ತೊ ಜಾನ್ ದೇ ದೇ ವಾದಾ ತೋ ನಹೀ ಹೈ
ಇವಳು: ಕೋಯೀ ತೇರೆ ವಾದೋಂ ಪೇ ಜೀತಾ ಹೈ ಕಹಾಂ..
ಅವನು:ಮೇರೇ ಘರ್ ಕೇ ಆಂಗನ್ ಮೇ ಚೋಟಾ ಸಾ ಝೂಲಾ ಹೋ
ಇವಳು:ಸೌಂಧೀ ಸೌಂಧೀ ಮಿಟ್ಟೀ ಹೋಗೀ ಲೇಪಾ ಹುವಾ ಚೂಲಾ ಹೊ
ಅವನು: ಥೋಡೀ ಥೋಡೀ ಆಗ್ ಹೋಗೀ.. ಥೋಡಾ ಸಾ ಧುವಾಂ
ಅವನು: ರಾತ್ ಕಟ್ ಜಾಯೇಗೀ ತೋ ದಿನ್ ಕೈಸೇ ಬಿತಾಯೇಂಗೇ
ಇವಳು: ಬಾಜರೇ ಕಿ ಖೇತೋಂ ಮೇ ಕವ್ವೇ ಉಡಾಯೇಂಗೇ
ಅವನು: ಬಾಜರೇ ಕಿ ಸಿಟ್ಟೋಂ ಜೈಸೀ ದೇತೀ ಹೋ ಜವಾಂ (ಜವಾಬ್)
ಯಾಕೋ ಈ ಕ್ಯಾಸೆಟ್ಟಿನಲ್ಲಿದ್ದ ಇಂಡೆಕ್ಸಿನ ಯಾವ ಹಾಡು ಕೇಳಿದರೂ ಮನಸ್ಸು ಮೋಡಕಟ್ಟುತ್ತದೆ. ಮಳೆಬರುವ ಸೂಚನೆ ಕಂಡ ಅವನು ಬೇಗನೆ ಕೊಡೆ ಸೂಡಿಕೊಂಡು ಒಂದು ಸಣ್ಣ ನಗೆಯೊಂದಿಗೆ ಹೊರಟುಬಿಡುತ್ತಾನೆ. ನಾನು ಒದ್ದೆ ಒಳಗೆ ಹೊರಗೆ ಗರಿ ಗರಿ ಇಸ್ತ್ರಿ ಬಟ್ಟೆ. ಪುಕ್ಕ ಕಿತ್ತ ಗರಿ.
ಯಾರಿಗೆ ತಾನೆ ಬೆಳಕು ಹರಿಯುವವರೆಗೆ..ರಾತ್ರಿ ಇಡೀ ಕೆಲಸಕ್ಕೆ ಬಾರದ ಮಾತನಾಡುತ್ತಾ ಸುಳ್ಳೆ ಸುಳ್ಳೆ ಆಕಾಶದ ಚುಕ್ಕಿ ಎಣಿಸುತ್ತಾ ಒಬ್ಬರಿಗಿನ್ನೊಬ್ಬರು ಆತು ಕೂತು, ಬೆಳಗಾದ ಕೂಡಲೆ ಹೊಲಕ್ಕೆ ಕಾಳು ತಿನ್ನಲು ಬಂದ ಹಕ್ಕಿಗಳನ್ನು ಹಾರಿಸುವ ಕೆಲಸದಲ್ಲಿ ಕಳೆದುಹೋಗಲು ಇಷ್ಟವಾಗುವುದಿಲ್ಲ? ಅದರಲ್ಲೂ ಜೋಳದ ಕಾಳು ಹುರಿದು ಅರಳಾಗುವ ಹಾಗೆ ಮಾತನಾಡುವವಳಿಗೆ!
ಏನೋ ಇಲ್ಲಿ ಕ್ಯೂಬಲ್ಲಿ ಏಸಿ ಆಫೀಸಿನಲ್ಲಿ ಹೊರಗಿನ ಗಾಳಿಯೇ ಬೀಸುವುದಿಲ್ಲ.. ಕಾಳು ತಿನ್ನುವ ಹಕ್ಕಿಯೆಲ್ಲಿ ಹುಡುಕಲಿ?
ಏನೇ ನೀನು ಅಂಗಳ ಇಲ್ದೇ ಇದ್ರೂ ಜಗಲಿಗೇ ಕಟ್ಟಿದೀನಲ್ಲ ಜೋಕಾಲಿನ. ಇಷ್ಟು ದಪ್ಪ ಆಗಿ ನನ್ನ ಹತ್ರ ತೂಗು ಅಂದ್ರೆ ಆಗಲ್ಲ ಅಂತೀನಷ್ಟೆ ಅನ್ನುವ ಬದಲು ಅವನು ಜಾಣ, ಮಾತಿರದೆ ನಗು ಸೂಸಿ ಜೋಕಾಲಿಯನ್ನೊಮ್ಮೆ ನನ್ನನ್ನೊಮ್ಮೆ ನೋಡಿ ನಮ್ಮ ಮುದ್ದುರಾಕ್ಷಸಿಯನ್ನ ಎತ್ತಿಕೊಂಡು ಜೋಲಿಯಲ್ಲಿಟ್ಟು ತೂಗುತ್ತಾನೆ. "ಯಹಾಂ ಏಕ್ ಶೆಹಜಾದೀ ಸೋಯೀ ಹುಯೀ ಹೈ...ಎಂಬ ಸೊಲ್ಲು ಚೂರು ಪಾರು ಕೇಳ್ತಾ ಇದೆ.
ಅವಳು ಎದ್ದ ಮೇಲೆ ಹಾಡುತ್ತಾಳೆ. ಏಕ್ ಫರಿಂದಾ ಹೋ ಶರ್ಮಿಂದಾ..ಆವೋ ಜಂಗಲ್...ಸೋಚ್ ರಹಾ ಹೈ ಬಾಹರ್ ಆಕೆ ಕ್ಯೂಂ ನಿಕಲಾ ಹೈ....
ಓಹ್ ಇರಿ. ಅವಳು ಏಳುವುದಕ್ಕೆ ಮೊದಲು ನನ್ನ ಕೆಲಸ ಮುಗಿಸಬೇಕು. ಮತ್ತೆ ನಾಳೆ ಸಿಗೋಣ.
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
-
“ಅಸ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ| ಪೂರ್ವಾಪರೌ ತೋಯನಿಧೀ
ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ ”
ಕವಿಗುರು ಕಾಳಿದಾಸನು ತನ್ನ ‘ಕುಮಾರಸಂಭವ’ ಕಾವ್ಯ...
9 comments:
Dil Dhoondta Hai Phir Wahi Fursat Ke Raat Din .... ನ೦ಗೆ ತು೦ಬಾ ಇಷ್ಟದ ಹಾಡು. ಮೌಸಮ್ ಚಿತ್ರದ್ದು...
ಅದ್ರ ಬಗ್ಗೆ ನಿನ್ನ ಬರಹನೂ ಆಪ್ತವಾಗಿದ್ದು.:)
ಕವನದ ಭಾವ ನಿಮ್ಮ ಲೇಖನದ ತುಂಬ ಹರಡಿದೆ. ಇದು ನನಗೂ ಇಷ್ಟವಾದ ಹಾಡು.
ಮನಸ್ಸು ಕೈ ಮುರಿದುಕೊಂಡು ಮುದುಡಿ ಹೋಗಿತ್ತು, ಪ್ರಫುಲ್ಲಮಯ ಹಾಡು ಕೊಟ್ಟು ಅರಳಿಸಿದಿರಿ. ಧನ್ಯವಾದಗಳು.
ಸಿಂಧು,
ಹೃದ್ಯವಾದ ಗೀತೆಗೆ ಹೃದ್ಯವಾದ ಟಿಪ್ಪಣಿ. ಇಡೀ ಲೇಖನದ ತುಂಬ ಪುರಸೊತ್ತು ವ್ಯಾಪಿಸಿದೆ!
ವಿಜಯಶ್ರೀ,
ಆಪ್ತಸ್ಪಂದನೆಗೆ ಥ್ಯಾಂಕ್ಯೂ ವೆರಿಮಚ್.
ಬದರಿನಾಥ್,
ನಿಮ್ಮ ಕ್ಷಣಗಳು ಅರಳಿದ್ದು ಕೇಳಿ ನಂಗೆ ಖುಶೀ.
ಸುನಾಥ್,
ಹೃದ್ಯವಾದ ಸ್ಪಂದನೆಯಿಂದ ಮನಸ್ಸು ಪ್ರಫುಲ್ಲಗೊಂಡಿದೆ.
ಪ್ರೀತಿಯಿಂದ,
ಸಿಂಧು
This is one of my favourite lyrics and I hum it quite often. Every sunny winter morning I spend in Delhi bring with it the line- "jhaadon ki narm dhoopva aangan me let kar..."
"ದಿಲ್ ಥೋಡಿ ಆವಾಜ್ ಅಕ್ ರಹಿ ಹೈ" ಅಂತಾ ಒಂದು ಅಲ್ಬಂ ನಲ್ಲಿ ಇದರದೇ ಮೂರು ಹಾಡುಗಳಿವೆ..... ಕೇಳಿದಷ್ಟು ಹೊಸ ಅರ್ಥ ಕಲ್ಪಿಸುವ ಸಾಲುಗಳು...
ಪ್ರತಿ ಕ್ಷಣಕ್ಕೂ ಹೃದಯ ಆದೃ......
ಮತ್ತೆ ಹಾಡು ನೆನಪಿಸಿದಿರಿ....
ಧನ್ಯವಾದ
tumba chendada haadu.. thanks
nanna istada haaDu... dhanyavadagaLu tumba aaptavaagi baredu namage nenapisiddeeri.
Post a Comment