ಅಳುಕು -
ಮೀರುವ ಕ್ರಿಯೆಯಲ್ಲಿ ಅಳಿಯುವೆನೇನೋ ಎಂದು;
ಹೊಳಪು -
ಮಡಿಲು ತುಂಬಿದ ಗುಲಾಬಿಕಾಲ್ಗಳ ಸೊಬಗು ಕಂಡು;
ಸಿಡುಕು -
ನೀನು ನಿದ್ದೆ ಕೆಡಿಸುತ್ತೀ ಅಂತ;
ಕಿರಿನಗು-
ನಿನ್ನ ಬೇಡಿಕೆ ತುಂಬಿದ ಕೆನ್ನೆಕಂಗಳ ನೋಡಿ;
ಅಸಹನೆ -
ಇನ್ನೇನು ತುತ್ತಿಡುವಷ್ಟರಲ್ಲಿ ಚಡ್ಡಿ ಬಿಚ್ಚುತ್ತೀ ಕಕ್ಕ ಬಂತು;
ಮಂತ್ರಮುಗ್ಧೆ -
ಕುತ್ತಿಗೆಯ ಬಳಸಿ ಕೆನ್ನೆಗೆ ಮೆತ್ತನೆ ಕೆನ್ನೆ ತೀಡುವಾಗ;
ಗೊಣಗು -
ಊಟದ ತಟ್ಟೆ ಹಿಡಿದು ಮನೆಯಿಡೀ ಸುತ್ತುವಾಗ;
ಬೆರಗು -
ಬೇಸರ ಬಂದು ಗಬ್ಬೆದ್ದ ದಿನದ ರುಟೀನಲ್ಲಿ ನಿನ್ನ ಹೊಸತನದ ಬನಿ ಬನಿ ಇಳಿವಾಗ;
ಅನಿಸುತ್ತೆ ಟುಪ್ಪೂ..
ಇದಕ್ಕೆ ಇರಬಹುದೆ ಕತೆ ಕವಿತೆ ಗೀತ ಗೋವಿಂದ-
-ಗಳಲ್ಲಿ ಉಲಿದಿದ್ದು
"ಮಣ್ಣುತಿಂದ ಬಾಯ ಬಿಡಿಸೆ
ಅಮ್ಮನೆದುರು ಜಗವೆ ಹರಡಿ
ಮೂಡಿದುದು ಅಚ್ಚರಿ
ತಾಯ್ತನದ ವೈಖರಿ !
ಅವಳ ಹೊರತು ಕಾಣಬಹುದು ಯಾರಾದರೂ ಹೇಗೆ??
ಮಗು ಮಣ್ಣು ತಿನ್ನದೆ -
ಅಮ್ಮ ಪೆಟ್ಟು ಕೊಡದೆ-
ಬಾಯಿ ಬಿಡದೆ-
ಅದರಲ್ಲಿಣುಕದೆ-
ಅಮ್ಮನ ಹೊರತು ಕಾಣಬಹುದು ಯಾರಾದರೂ ಹೇಗೆ??
ಮಗಳ ಹೊರತು ತೋರಬಹುದು ಯಾರಾದರೂ ಹೇಗೆ?
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
-
“ಅಸ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ| ಪೂರ್ವಾಪರೌ ತೋಯನಿಧೀ
ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ ”
ಕವಿಗುರು ಕಾಳಿದಾಸನು ತನ್ನ ‘ಕುಮಾರಸಂಭವ’ ಕಾವ್ಯ...
4 comments:
ವಿಶಿಷ್ಟವಾದ ಬರವಣಿಗೆ ಶೈಲಿ ಮತ್ತು ಸರಳತೆಯ ಮೂರ್ತತೆ. ತಾಯಿಯ ಮಾತುಗಳು ಅಕ್ಕರೆಯಿಂದ ಬರೆಯಲ್ಪಟ್ಟಿವೆ. ತುಂಬಾ ಇಷ್ಟವಾಯಿತು.
ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
www.badari-poems.blogspot.com
www.badari-notes.blogspot.com
www.badaripoems.wordpress.com
Face book Profile : Badarinath Palavalli
ನಿಮ್ಮ ಓದಿಗೆ ನನ್ನ ಕವನಗಳು ಕಾದಿವೆ ಮತ್ತು ನಿಮ್ಮ ಅಭಿಪ್ರಾಯದ ಕಾಮೆಂಟುಗಳು ನನಗೆ ದಾರಿ ದೀಪ.
ಸಿಂಧು,
ಪುಟ್ಟ ಮಗುವು ತಾಯಿಯಲ್ಲಿ ಹುಟ್ಟಿಸಬಹುದಾದ ಭಾವನೆಗಳನ್ನು ’ಕವನದಲ್ಲಿ-ಕಾಮನಬಿಲ್ಲು’ ಕಾಣುವಂತೆ ಚಿತ್ರಿಸಿದ್ದೀರಿ. ಇದರ ಶ್ರೇಯಸ್ಸು ನಿಮ್ಮ ಪುಟ್ಟ ಮಗುವಿಗೇ ಸೇರಬೇಕಲ್ಲವೆ!
ಮಗು ತಾಯಿಯಲ್ಲಿ ಉ೦ಟುಮಾಡುವ ಅಷ್ಟಭಾವಗಳನ್ನು ಬಹಳ ಚೆನ್ನಾಗಿ ಕವನಿಸಿದ್ದೀರಿ, ಅಭಿನ೦ದನೆಗಳು. ನನ್ನ ಬ್ಲಾಗ್ ಗೆ ಒಮ್ಮೆ ಭೇಟಿ ನೀಡಿ.
magaLindaagi ammana sahitya krushi hechchagide:)
Nice write up.
Post a Comment