ಎಷ್ಟು ಪ್ರೀತಿಸ ಬಹುದೋ ನಿನ್ನನ್ನು
ಅದಕ್ಕಿಂತ ಜಾಸ್ತಿಯೇ
ಪ್ರೀತಿಸುವೆ ನಾನು ನಿನ್ನನ್ನು,
ಇದು ಗೊತ್ತಾಗಿದ್ದು
ನಿನ್ನೆ ನಾವಿಬ್ಬರೂ
ಹುಚ್ಚಾಪಟ್ಟೆ ಜಗಳವಾಡಿ
ಮುಸುಡಿ ಮೂರುಕಡೆ ಮಾಡಿಕೊಂಡು
ಕೂತಾಗ.
ಯೋಚನೆಯ
ಅಲೆಗಳ ಮೇಲೆ
ಎದೆಯೊಸಗೆ ಮೆಲ್ಲಗೆ ಮುಳುಗೇಳುತ್ತಲಿದೆ.
ನಿನ್ನ
ಸಿಟ್ಟಿನಿಂದ ಉಬ್ಬಿದ ಮುಖ
ಕೆಂಪಿಟ್ಟ ಮೂಗು
ಒಳಗೊಳಗೆ ಬೇಯಿಸುವ ಕುದಿ
ಎಲ್ಲವನ್ನೂ
ಸಂತೈಸುವ ಪ್ರೀತಿ
ನನ್ನ ಇದೀಗಷ್ಟೇ ಸಮಾಧಾನಿಸಿ
ನಿನ್ನೆಡೆಗೇ ಹೊರಟಿದ್ದಾಳೆ
ಒಂದೆರಡು ಕ್ಷಣ ತಾಳು.
ಜಗತ್ತು ಆಡಿಕೊಂಡು ನಕ್ಕಾಗ
ಜಗ್ಗದೆ
ನನ್ನ ಜೊತೆಗೆ ಬಂದವನೆ,
ನೀನೇ ಅಲ್ಲವೆ ಉಲಿದಿದ್ದು..
"ಲಕ್ಷಾಂತರರು ಹೊರಡುವ ಪಯಣದ
ಗುರಿ ತಲುಪಲು
ಸಾಧ್ಯವಾಗುವುದು ಎಲ್ಲೋ
ಒಬ್ಬಿಬ್ಬರಿಗೆ ಮಾತ್ರ "
ಬದುಕಿನ ವಿಲಕ್ಷಣ ಪಯಣದಲ್ಲಿ
ಕಂಗೆಡದೆ ಉಳಿಯುವುದು ಪ್ರೇಮಿ ಮಾತ್ರ!
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
-
“ಅಸ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ| ಪೂರ್ವಾಪರೌ ತೋಯನಿಧೀ
ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ ”
ಕವಿಗುರು ಕಾಳಿದಾಸನು ತನ್ನ ‘ಕುಮಾರಸಂಭವ’ ಕಾವ್ಯ...
7 comments:
ವ್ಹಾವ್...ಸುಂದರ ಕವಿತೆ ಸಿಂಧು...
ಎಷ್ಟು ಪ್ರೀತಿಸ ಬಹುದೋ ನಿನ್ನನ್ನು
ಅದಕ್ಕಿಂತ ಜಾಸ್ತಿಯೇ
ಪ್ರೀತಿಸುವೆ ನಾನು ನಿನ್ನನ್ನು,
ಇದು ಗೊತ್ತಾಗಿದ್ದು
ನಿನ್ನೆ ನಾವಿಬ್ಬರೂ
ಹುಚ್ಚಾಪಟ್ಟೆ ಜಗಳವಾಡಿ
ಮುಸುಡಿ ಮೂರುಕಡೆ ಮಾಡಿಕೊಂಡು
ಕೂತಾಗ.
nija ಅಲ್ವೇ...ಮುನಿಸಿಕೊಂಡಾಗಲೇ ಪ್ರೀತಿ ಗೊತ್ತಾಗೋದು..
ಸಿಂಧು, ನಮ್ಮಲ್ಲಿದ್ದುದರ ಮಹತ್ವದ ಅರಿವು ಅದು ಇಲ್ಲದಾಗ ಆಗುತ್ತೆ ಎನ್ನುವುದು ಗೆಳೆತನದಲ್ಲಿ ಎದ್ದು ಕಾಣುವ ಮತ್ತು ಎಲ್ಲರಿಗೂ ಅನುಭವದಲ್ಲಿರುವ ವಿಷಯ...ಇದನ್ನು ಕವನಿಸಿ ಮನನಿಸಿದ್ದೀರಿ..ಚನ್ನಾಗಿವೆ ಸಾಲುಗಳು...ಅದರಲ್ಲೂ...
ಎಷ್ಟು ಪ್ರೀತಿಸ ಬಹುದೋ ನಿನ್ನನ್ನು
ಅದಕ್ಕಿಂತ ಜಾಸ್ತಿಯೇ
ಪ್ರೀತಿಸುವೆ ನಾನು ನಿನ್ನನ್ನು,
ಇದು ಗೊತ್ತಾಗಿದ್ದು
ನಿನ್ನೆ ನಾವಿಬ್ಬರೂ
ಹುಚ್ಚಾಪಟ್ಟೆ ಜಗಳವಾಡಿ
ಮುಸುಡಿ ಮೂರುಕಡೆ ಮಾಡಿಕೊಂಡು
ಕೂತಾಗ.
ಚಿಂದಕ್ಕಾ...
"ಎಲ್ಲವನ್ನೂ
ಸಂತೈಸುವ ಪ್ರೀತಿ
ನನ್ನ ಇದೀಗಷ್ಟೇ ಸಮಾಧಾನಿಸಿ
ನಿನ್ನೆಡೆಗೇ ಹೊರಟಿದ್ದಾಳೆ
ಒಂದೆರಡು ಕ್ಷಣ ತಾಳು"
ಇಷ್ಟು ಚಂದ ಬರೆಯುತ್ತೀಯಲ್ಲ, ನಂಗೂ ಸ್ವಲ್ಪ ಕೊಡು ಇಂಥ ಒಂದಿಷ್ಟು ಸಾಲುಗಳ.
ಸುಂದರ ಕವನ
ಪ್ರೇಮಿಗಳ ದಿನಕ್ಕೆ ಸರಿಯಾಗಿ ಬಂದಿದೆ
ಶಬ್ದ ಜೋಡಣೆ ಚೆನ್ನಾಗಿದೆ
i love you film noDdi ninneya, :) it sounds almost same:)
nice!
ಸಿಂಧು,
ಪ್ರೀತಿಯಲ್ಲಿಯ ಸಿಟ್ಟಿನಷ್ಟೇ ಸೊಗಸಾದ ಕವನ. ‘ಪ್ರೇಮಿಗಳ ದಿನಾಚರಣೆ’ಗೆ ಈ ಕವನ ಸುಂದರ ಉಡುಗೊರೆ.
ವೇಣು,ಜಲನಯನ,ಇಂಚರ,
ನಿಮ್ಮ ಸ್ಪಂದನೆಗಳಿಗೆ ಖುಶಿಯಾಯಿತು. ಧನ್ಯವಾದಗಳು.
@ಶಾಂತಲೆ,
ಎಂಥ ಮಾತು! ನಿನ್ನ ಪ್ರೀತಿಗೆ ನಿನ್ನ ರೀತಿಗೆ ಇರುವುದೇ ಹೋಲಿಕೆ?
@ನಿಧಿ
ಇಲ್ಯೋ ಮಾರಾಯ ಯಾವ ಸಿನಿಮಾ ನೋಡಿ ಬರೆದಿದ್ದಲ್ಲ. ಎಲ್ಲ ನಮ್ಮದೇ ದೊಂಬರಾಟದ ಅನುಭವ. :)
@ಸುನಾಥ್,
ನಿಮ್ಮ ಮಾತು ನಿಜ. ಪ್ರೀತಿಯ ಸಿಟ್ಟು ಸೊಗಸೂ ಹೌದು ಸಂಕಟವೂ ಹೌದು. ನೀವು ಮೆಚ್ಚಿದ್ದು ಖುಶಿಯಾಯ್ತು.
ಪ್ರೀತಿಯಿಂದ
ಸಿಂಧು
Post a Comment