Friday, May 29, 2009

ಒಂದು ರಜಾ ಅರ್ಜಿ..

...ಗೆ

ಕಣ್ಣ ಕನ್ನಡಿಯಲ್ಲಿ
ಕಳೆದ ಕಾಲದ ಧೂಳು
ಇಣುಕಿನೋಡಿದರೆ ಪ್ರತಿಬಿಂಬವಿಲ್ಲ;
ಒರೆಸಲು ಇಬ್ಬರಿಗೂ ಪುರುಸೊತ್ತಿಲ್ಲ...
ತೊಡಗಿಕೊಂಡಿದ್ದು ಅತಿಯಾಯಿತೇನೋ.!?

ಗೊತ್ತು ನನಗೆ,
ಕ್ಲೀನಿಂಗ್ ಏಜೆಂಟ್ ಧಾರೆಯಾಗುತಿದ್ದ
ದುಃಖದ ದಿನಗಳು
ಕಳೆದುಹೋದ
ಸಮಾಧಾನದ ಬದುಕಿದು..
ಸಮಾಧಾನ ತುಸು ಹೆಚ್ಚೇ ಆಯಿತೇನೋ!?

ಕಾಡು ಹಾದಿಯ ಹಾದು
ಬೆಟ್ಟದೊರತೆಯ ಮಗ್ಗುಲ
ಬಯಲಲ್ಲಿ ಕೂರಬೇಕಿದೆ..
ಕಳೆದ ಕಾಲದ ನೇಹದ ನೆನಪಿನ ಮಿನುಗು
ಬರುವ ದಿನಗಳ ಕನಸಿನ ಮೆರುಗು
ಅಚಾನಕ್ಕಾಗಿ ದಕ್ಕಿಸಿಕೊಂಡ ಪುರುಸೊತ್ತಿನ ಸೊಬಗು
-ಗಳನ್ನ ಹೊತ್ತು ಹೊಳೆಯುವ
ಆಕಾಶಗನ್ನಡಿಯ ಚುಕ್ಕಿಗಳು
ಕಣ್ಣ ಕನ್ನಡಿಯಲ್ಲಿ
ಕಾಣದ ಬಿಂಬಗಳ
ಮರುಪ್ರದರ್ಶನಕ್ಕೆ ಕಾದಿವೆ..

ಈ ಎಲ್ಲ ಗಡಿಬಿಡಿಯ
ದಿನರಾತ್ರಿಗಳ ಹಿಂಡಿ
ಒಂದುದಿನರಾತ್ರಿಯ
ರಜೆ ಸೋಸಲಾದೀತಾ..?

..ಇಂದ

10 comments:

Srik said...

Absolutely brilliant!!! Ran into your blog from Sujay's blog link. Loved your poems and writing! Keep going! you have one more to add to your fans list :)

sunaath said...

ಸಿಂಧು,
ಭಾವಲಹರಿ ಸೊಗಸಾಗಿ ಚಿಮ್ಮಿದೆ. Beautiful!

ಶಿವಪ್ರಕಾಶ್ said...

"ಕಣ್ಣ ಕನ್ನಡಿಯಲ್ಲಿ
ಕಳೆದ ಕಾಲದ ಧೂಳು
ಇಣುಕಿನೋಡಿದರೆ ಪ್ರತಿಬಿಂಬವಿಲ್ಲ"
ತುಂಬಾ ಯೋಚನೆಗೆ ಇಡುಮಾಡುವ ಸಾಲುಗಳು...
ಒಳ್ಳೆಯ ಕವನ

Anonymous said...

"ಅಚಾನಕ್ಕಾಗಿ ದಕ್ಕಿಸಿಕೊಂಡ ಪುರುಸೊತ್ತಿನ ಸೊಬಗು" - ತುಂಬಾ ಚೆನ್ನಾಗಿದೆ!

shivu.k said...

ಸಿಂಧು ಮೇಡಮ್,

ಕವನದ ಭಾವನೆಗಳು ಚೆನ್ನಾಗಿ ಪ್ರತಿಬಿಂಬಿತವಾಗಿವೆ...

"ಅಚಾನಕ್ಕಾಗಿ ದಕ್ಕಿಸಿಕೊಂಡ ಪುರುಸೊತ್ತಿನ ಸೊಬಗು" ಪದಪ್ರಯೋಗ ಇಷ್ಟವಾಯಿತು.

ಹರೀಶ ಮಾಂಬಾಡಿ said...

ಇಣುಕಿನೋಡಿದರೆ ಪ್ರತಿಬಿಂಬವಿಲ್ಲ;
ಒರೆಸಲು ಇಬ್ಬರಿಗೂ ಪುರುಸೊತ್ತಿಲ್ಲ...
ತೊಡಗಿಕೊಂಡಿದ್ದು ಅತಿಯಾಯಿತೇನೋ.!?

ಸಾಲು ಮಾರ್ಮಿಕ

Manjunatha Kollegala said...

ಕಣ್ಣ ಕನ್ನಡಿಯಲ್ಲಿ
ಕಳೆದ ಕಾಲದ ಧೂಳು

ಸೊಗಸಾದ ಪ್ರತಿಮೆ. ನನಗಿಷ್ಟವಾಯಿತು. ಕವನ ಚೆನ್ನಾಗಿದೆ

Shashi Dodderi said...

good one

ಸಿಂಧು sindhu said...

ಶ್ರೀಕ್,
ಸುಜಯ್ ಹೇಳಿದರು. i envy ur recent sarpas trek.. heard the details from Sujay, his photos are a way above the world.. have tagged ur blog. will read.

thanks.

ಸುನಾಥ,ಶಿವಪ್ರಕಾಶ್,ಕಲ್ಯಾಣ್,ಶಿವು,ಹರೀಶ್, ಮಂಜುನಾಥ್ ಮತ್ತು ಶಶಿ,
ನಿಮಗೆ ಇಷ್ಟವಾಗಿದ್ದು ನನಗೆ ಖುಶಿಯಾಗಿದೆ.

ಪ್ರೀತಿಯಿಂದ
ಸಿಂಧು

sooryaneduralli kiru hanathe said...

ಈ ಎಲ್ಲ ಗಡಿಬಿಡಿಯ
ದಿನರಾತ್ರಿಗಳ ಹಿಂಡಿ
ಒಂದುದಿನರಾತ್ರಿಯ
ರಜೆ ಸೋಸಲಾದೀತಾ..?....

isthavayithu.