ಈಗಷ್ಟೆ ನಿಂತ ಮಳೆ,
ಮರಮರದ ಹಸಿರೆಲೆಯ
ತುದಿಮೂಗಲ್ಲಿ ಪುಟ್ಟ ಪುಟ್ಟಹನಿ,
ಮೋಡ ಚೆದುರಿ, ಕೊನೆಯ ಕಿರಣಗಳು
ಕೆಂಪಗೆ ನೀಲಿಯಲ್ಲಿ ಹರಡುತ್ತಾ
ಹಿತವಾದ ಸಂಜೆ,
ದಾರಿ ಇಕ್ಕೆಲದ ಕಳೆಗಿಡಕ್ಕೂ
ಮಳೆಹನಿಯ ಸವಿದು
ಎಂತದೋ ಬಳುಕು ;
ದಾರಿಬದಿಯ ನೀರಹರಿವಿನಲ್ಲಿ
ಚಿಣ್ಣರ ಪುಟ್ಟ ಕಾಲಾಟ;
ತುಂಬಿಬಂದಿದೆ ಮನ
ಮನೆಗೆ ಬಂದವಳು ಕದವ ತೆರೆದೆ
ಬಾಲ್ಕನಿಯಾಚೆಗೆ ದೂರದಲಿ
ಸಾವನದುರ್ಗದ ಮೇರುನೋಟ;
ನೀನಿಲ್ಲ ಜತೆಯಲ್ಲಿ
ಅಕ್ಷಾಂಶವೇ ಬೇರೆ
ಹರಡಿಬಿದ್ದಿದೆ ಗುರುತು ಹಾಕಿಟ್ಟ ಭೂಪಟ
ಗೊತ್ತು ಕೆಲದಿನಗಳ ದೂರ
ಹೇಗೆ ಇಳುಕಲಿ ಮನದ ಭಾರ?
ಕೈ ಮುಗಿದು ಕೂತಿದ್ದೇನೆ
ಬಿಸಿಹಾಲಿನ ಬಟ್ಟಲ ಮುಂದೆ..
ಗೊತ್ತು ನೀನಲ್ಲೆ ಇದ್ದರೂ
ಮನಸು ಇಲ್ಲೆ ಉಳಿದಿದೆ..!
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
-
“ಅಸ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ| ಪೂರ್ವಾಪರೌ ತೋಯನಿಧೀ
ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ ”
ಕವಿಗುರು ಕಾಳಿದಾಸನು ತನ್ನ ‘ಕುಮಾರಸಂಭವ’ ಕಾವ್ಯ...
14 comments:
hi sindhu,
you have got fantastic writing with those words, which are irrerestible from ur nature.go on and continue writing...
i think you can also write some songs for kannda movies.why can`t u try?.. all the best and if u are free please visit my blog
http://pushpakanda.blogspot.com
have a good day
Basavaraj.S.Pushpakanda
ಕವನ ಚೆನ್ನಾಗಿದೆ.
ಚೆಂದದ ಕವಿತೆ..
ಆಹಾ! ಎಂಥ ಸೊಗಸು!
ಉಕ್ಕಿ ಹರಿಯುವ ಭಾವನೆಗಳನ್ನು ಚಿಕ್ಕ ಕವನದಲ್ಲಿ ಸುಂದರವಾಗಿ ಸೆರೆ ಹಿಡಿಯಲಾಗಿದೆ.
ಚಿಂದಕ್ಕಾ...
ಚಂದದ ಕವನ.
ಈದು ಯಾವಾಗ ಬರ್ದಿದ್ದು ಅಂತ ನಂಗ್ ಗೊತ್ತಿದ್ದೂ...
ಚೆನ್ನಾಗಿದೆ......... ಮತ್ತೆ ಆಗಮನ......
this is gr8
ನೆನಪನ್ನು ನೇವರಿಸಿದವರೇ,
ತುಂಬಾ ಇಷ್ಟವಾಯ್ತು ಕವನ. ಸೊಗಸಾದ ಅಭಿವ್ಯಕ್ತಿ.
ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿಸುತ್ತೀರಾ?
ಬಿಸಿಹಾಲಿನಂಥ ಬೆಚ್ಚನೆ ಮನದ ಮುಂದೆ ಕೈ ಮುಗಿದರೆ ಅದೆಂಥ ತೃಪ್ತ ಕ್ಷಣ!! ತಟ್ಟುವ ಕವಿತೆಗೆ ಧನ್ಯವಾದ.
ಚೆಂದದ ಕವನ, ಇಷ್ಟವಾಯಿತು ;ಮಳೆ ನಿಂತ ಮೇಲೆ ಮರದ ಎಲೆಗಳಿಂದ ತೊಟ್ಟಿಕ್ಕುವ ಹನಿಗಳನ್ನು ನೋಡಿ ನಾನೂ ತುಂಬ ಸಾರಿ ಖುಷಿಪಟ್ಟಿದ್ದೇನೆ.
Hi Sindhu,
very good. I appreciate the lyrics that make me feel the serenity of nature.
ಚಂದದ ಕವನ...
Post a Comment