Wednesday, July 9, 2008

ಅರ್ಪಣೆ..

ಅರ್ಧರಾತ್ರಿಯಲ್ಲಿ ಮಾತನಾಡಿಸಿ, ಫ್ಲೈಯಿಂಗ್ ಹಗ್ ಕೊಟ್ಟವಳಿಗೆ...
ಪುಟ್ಟ ತುಂಬೆ ಹೂ,
ಬಿಳಿಬಿಳೀ ಇಬ್ಬನಿ,
ಸೂಸಿ ಬರುವ ತಂಗಾಳಿ,
ಅದರಒಳಗಣ
ಮಲ್ಲಿಗೆಯ ಘಮ,
ಎಳೇ ಬಿಸಿಲು,
ಹಕ್ಕಿ ಚಿಲಿಪಿಲಿ,
ಮೊದಲ ಮಳೆಹನಿ,
ಪುಟ್ಟಪುಟಾಣಿ ಪಾಪುವಿನ ಹೂನಗೆ,
ಎಲ್ಲ ಬೊಗಸೆಯಲ್ಲಿ ಹಿಡಿದು
ನಿಂತಿದೇನೆ ನಿನ್ನ
ಪ್ರೀತಿ,ನೇಹಗಳಿಗೆ ಮನಸೋತು..

14 comments:

ಶಾಂತಲಾ ಭಂಡಿ (ಸನ್ನಿಧಿ) said...

ಚಿಂದಕ್ಕಾ...
ಯಾರವಳು ಯಾರವಳು ಯಾರವಳು ಯಾರು?
ಅವಳು ಯಾರಾದರೇನಂತೆ...ಇವಳ ಕಣ್ಮನದುಂಬಿದ್ದು ಸತ್ಯ.
ನಿನ್ನ ಸಾಲುಗಳಿಗೆ ಅವಳು ಋಣಿಯಾಗುವದಂತೂ ದಿಟ.
‘ಸಿಹಿಮುತ್ತು ಸಿಹಿಮುತ್ತು ಇನ್ನೊಂದು...’
ಅವಳೊಮ್ಮೆ ದಿಢೀರ್ ಅಂತ ಪ್ರತ್ಯಕ್ಷವಾದರೆ? ಪುಟ್ಟಮಗುವಾಗಿ ನಿನ್ನೊಡನೆಯೇ ಇರ್ತೀನಿ ಅಂತ ಹಠ ಮಾಡಿದರೆ ಪ್ಯಾರಿಸ್ ಹುಡುಗನಿಗೇನು ಹೇಳುತ್ತೀಯ?

Shree said...

ಸೂಪ್ಪರ್ಬ್...! :-) ನಂಗೆ ಹುಳುಕಾಗ್ತಿದೆ...!

ಸಿಂಧು sindhu said...

ಶಾಂತಲಾ,

ಅವಳು ಪ್ರೀತಿಯ ಗೆಳತಿ!
ನಿನ್ನ ಪ್ರತಿಸ್ಪಂದನ ಮನಸ್ಸಿಗೆ ತಂಪೆರೆದಿದೆ.
ಪುಟ್ಟಮಗುವಾಗಿ ಬಂದರೆ ಅವನೂ ನಾನು ಇಬ್ಬರೂ ಕಾಂಪಿಟೇಶನ್ ಮೇಲೆ ಅವಳನ್ನು ಎತ್ತಿ ಮುದ್ದಾಡುವುದು ಖಂಡಿತ. ವಾಪಸ್ ಕಳ್ಸೋ ಚಾನ್ಸೇ ಇಲ್ಲ. ಇಬ್ರೂ ಕಾಯ್ತಾ ಇದೀವಿ..

ಶ್ರೀ..
ಅದೇನು ಹುಳುಕು? ;) ಗುಟ್ಟಾಗಿ ಮೈಲ್ ಮಾಡಿ.. :D

ಪ್ರೀತಿಯಿಂದ
ಸಿಂಧು

ಕನಸು said...

ನಿಮ್ಮ ಬೊಗಸೆಯೊಳಗಿನ ಸಂಪತ್ತು....ಜೊತೆಗೊಂದು ಸಿಹಿಮುತ್ತು....
ನಿಮ್ಮ ಗೆಳತಿಗೆ ಜಗತ್ತೇ ಸಿಕ್ಕಂತೆ ಬಿಡಿ..

Anonymous said...

ಛೇ.
ನಿಮ್ ನಿಮ್ ಮಾತುಕತೆ ಅರ್ಥಾನೇ ಆಗ್ತಿಲ್ಲಪ್ಪ.
ಅದೇನು ಸಂಕೇತಗಳಲ್ಲಿ ಮಾತಾಡ್ತೀರ್ರೀ..
-ಜೋಗಿ

ಸಿಂಧು sindhu said...

ಕನಸು,

ಅಲ್ಲವಾ. ಎಲ್ಲ ಗೆಳತಿಯರ ಸಾಂಗತ್ಯ ಮತ್ತು ಹಂಚಿಕೊಳ್ಳುವಿಕೆ ಮಾತಿಗೆ ಸಿಗದ ಸಿಹಿಯೇ.

ಜೋಗಿ,
:D
ಸ್ವಲ್ಪ ಪರಕಾಯಪ್ರವೇಶ ಬೇಕೇನೋ.. :) ಗೆಳತಿಯರ ಭಾಷೆ ಇದು.. ಈ ಪ ಭಾಷೆ, ಸ ಭಾಷೆ ಇರುತ್ತಲ್ಲಾ ಹಾಗೆ.. :)

ಪ್ರೀತಿಯಿಂದ
ಸಿಂಧು

jomon varghese said...

ಸೂಪ್ಪರ್ಬ್...! ಬೊಗಸೆಯಲ್ಲಿ ಪ್ರೀತಿ..

ಸುಧೇಶ್ ಶೆಟ್ಟಿ said...

ಶಾ೦ತಲಾ ಅವರೇ…

ನಿಮ್ಮ ’ಮರಳುವ ಮೊದಲು’ ಎ೦ಬ ಬರಹವನ್ನು ಓದಿ ನಾನು ನಿಮ್ಮ ಬರಹದ ಶೈಲಿಗೆ ಮರುಳಾಗಿ ನಿಮ್ಮ ಬ್ಲಾಗಿನ ಖಾಯ೦ ಓದುಗ ಆಗಿಬಿಟ್ಟೆ. ಇನ್ನು ನಾನು ಅ೦ತಹ ಬರಹಕ್ಕೆ ಎಲ್ಲಿ ಹೋಗಲಿ.
ದಯವಿಟ್ಟು ನಿಮ್ಮ ನಿರ್ಧಾರ ಬದಲಿಸಿ.

Unknown said...

ಪ್ರತಿಯೊಂದು ಸಾಲಿಗೂ ಜೀವನ ಚಕ್ರ ಓಡುತ್ತಿದೆ
ಹಿಂದೆ ಮುಂದೆ ಸ್ವಲ್ಪ ಸೇರಿಸಿದರೆ, ಚಕ್ರ ಪೂರ್ಣ ದರ್ಶನ ನೀಡುವುದು ಎಂಬ ಭಾವನೆ ನನ್ನದು

ಮತ್ತೆ ಮತ್ತೆ ಓದಿದಷ್ಟೂ, ಹೆಚ್ಚಿನ ಚಿಂತನೆಗಳಿಗೆ ಒತ್ತು ಕೊಡುವ ಈ ಪದ ಪುಂಜಗಳಿಗೆ ಶರಣು
ಅತ್ಯಮೂಲ್ಯ ಬರಹ

ಒಳ್ಳೆಯದಾಗಲಿ

ಗುರುದೇವ ದಯಾ ಕರೊ ದೀನ ಜನೆ

Anonymous said...

nanage hotte kicchu jaasti agtide..chikkadagi aaadru tumba vishaalavagi heliddiri:)

ಸಿಂಧು sindhu said...

’ತಿರುಕ’

ಧನ್ಯವಾದಗಳು.

ಸೋಮು,
ಏನು ಮಾಡುವುದು. ಒಳ್ಳೆಯ ಹೊಟ್ಟೆಕಿಚ್ಚಿನ ಉರಿಗೆ ಸಿಕ್ಕಿ ಇನ್ನೂ ಒಳ್ಳೊಳ್ಳೆ ಕವಿತೆಗಳು, ಬರಹಗಳು ನಿಮ್ಮಿಂದ ಬರಲಿ.

ಪ್ರೀತಿಯಿಂದ
ಸಿಂಧು

shivu.k said...

ಬೊಗಸೆಯೊಳಗೆ ಪ್ರೀತಿ! ಚೆಲ್ಲೋಗಿ ಬಿಟ್ಟಾತು, ಕವನ ಹೇಳುವ ನೆಪದಲ್ಲಿ!
ಕವನ ಚೆನ್ನಾಗಿದೆ.
ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನೀವೊಮ್ಮೆ ನನ್ನ ಬ್ಲಾಗಿನೊಳಗೆ ಬನ್ನಿ. ಅಲ್ಲಿ ನನ್ನ ಛಾಯಾಚಿತ್ರಗಳು ಹಾಗೂ ಅದರ ಬಗೆಗಿನ ಲೇಖನಗಳು ನಿಮಗೂ ಇಷ್ಟವಾಗಬಹುದು. ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com

shivu.k said...

ಬೊಗಸೆಯೊಳಗೆ ಪ್ರೀತಿ! ಚೆಲ್ಲೋಗಿ ಬಿಟ್ಟಾತು, ಕವನ ಹೇಳುವ ನೆಪದಲ್ಲಿ!
ಕವನ ಚೆನ್ನಾಗಿದೆ.
ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನೀವೊಮ್ಮೆ ನನ್ನ ಬ್ಲಾಗಿನೊಳಗೆ ಬನ್ನಿ. ಅಲ್ಲಿ ನನ್ನ ಛಾಯಾಚಿತ್ರಗಳು ಹಾಗೂ ಅದರ ಬಗೆಗಿನ ಲೇಖನಗಳು ನಿಮಗೂ ಇಷ್ಟವಾಗಬಹುದು. ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com

shivu.k said...

ಬೊಗಸೆಯೊಳಗೆ ಪ್ರೀತಿ! ಚೆಲ್ಲೋಗಿ ಬಿಟ್ಟಾತು, ಕವನ ಹೇಳುವ ನೆಪದಲ್ಲಿ!
ಕವನ ಚೆನ್ನಾಗಿದೆ.
ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನೀವೊಮ್ಮೆ ನನ್ನ ಬ್ಲಾಗಿನೊಳಗೆ ಬನ್ನಿ. ಅಲ್ಲಿ ನನ್ನ ಛಾಯಾಚಿತ್ರಗಳು ಹಾಗೂ ಅದರ ಬಗೆಗಿನ ಲೇಖನಗಳು ನಿಮಗೂ ಇಷ್ಟವಾಗಬಹುದು. ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com