ನನ್ನ ಭಾವಲಹರಿಗೆ ಸ್ಪಂದಿಸಿದ ಮತ್ತು ಸ್ಪಂದಿಸುತ್ತಲೇ ಇರುವ ಎಲ್ಲರಿಗೂ ಪ್ರೀತಿಯ ವಂದನೆಗಳು.
ಕೆಲಸ ಮತ್ತು ವೈಯಕ್ತಿಕ ಒತ್ತಡಗಳಿಂದ ಪ್ರತಿಸ್ಪಂದನೆ, ಬ್ಲಾಗ್ ಬರಹ ಮತ್ತು ಓದು ಎರಡೂ ತುಂಬ ನಿಧಾನವಾಗಿಬಿಟ್ಟಿದೆ.
ನನ್ನ ಲಹರಿಗೆ (ಹಿಂದಿನ ಬರಹ/ಕವಿತೆ) ಸ್ಪಂದಿಸಿದವರಲ್ಲಿ ಹೆಚ್ಚಿನವರು ನಾನು ಬ್ಲಾಗ್ ಮುಚ್ಚುತ್ತಿದ್ದೇನಾಗಿ ತಿಳಿದುಕೊಂಡಿದ್ದೀರಿ. ಆ ಅರ್ಥ ಬರುವ ಹಾಗೆ ಬರೆದಿದ್ದರೆ ಕ್ಷಮಿಸಿ.
ನಾನು ಬರೆಯುವುದು ನನ್ನ ಮನದ ಮೇಲೆ ಹಾಯುವ ಎಷ್ಟೋ ಕಾಲದ ಮತ್ತು ದಿನದಿನವೂ ಘಟಿಸಿದ ನೆನಪುಗಳನ್ನ ನೇವರಿಸಿದ ಭಾವಲಹರಿಯನ್ನ. ಓದಿದ ನೀವೂ ಇದನ್ನ ಪ್ರೀತಿಯಿಂದ ಆಸ್ಥೆಯಿಂದ ನೇವರಿಸಿದ್ದೀರಿ ಪ್ರತಿಸ್ಪಂದಿಸಿದ್ದೀರಿ. ಎಷ್ಟೋ ಬಾರಿ ಈ ಎಲ್ಲವೂ ನಾನಂದುಕೊಂಡ ಆಯಾಮವನ್ನು ದಾಟಿ ಇನ್ನೆಲ್ಲೋ ಸಾಗಿವೆ. ಬಿಟ್ಟ ಬಾಣದ ಗತಿಯಲ್ಲಿ ಬರೆದ ಮಾತುಗಳು ನನ್ನ ಪರಿಧಿ ಮೀರಿ ಸಾಗುತ್ತವೆ ನಾಟುತ್ತವೆ. ಇದು ಎಲ್ಲರ ಬರಹದ ಮಿತಿ ಮತ್ತು ಸಾಮರ್ಥ್ಯ. ಹೀಗಾದಾಗ ಭಾವುಕ ಮನಸ್ಸು ಗೊಂದಲದಲ್ಲಿ ಬೀಳುತ್ತದೆ. ತಾರ್ಕಿಕ ನೆಲೆಗಟ್ಟು ಗಟ್ಟಿಯಿರದ ಭಾವಸಂವೇದನೆಗಳು ದಿಕ್ಕೆಡುತ್ತವೆ. ಹೀಗಿದ್ದೂ ತಡವರಿಸಿಕೊಂಡೂ ಭಾವಲಹರಿಗಳು ಹರಿಯುತ್ತಲೇ ಇರುತ್ತವೆ. ಇದರ ಜೊತೆಗೆ ನನ್ನ ಕೆಲಸದ ಒತ್ತಡ, ವೈಯಕ್ತಿಕ ಒತ್ತಡಗಳು ಇನ್ನೊಂದಿಷ್ಟು ಒಜ್ಜೆ ಹೇರಿವೆ.
ಬರೆಯದೆ ಕೂರಬಹುದಾದ ಹುಟ್ಟಲ್ಲ ನನ್ನದು. ಬರೆಯಲು ಬಿಂಕ ಬಿಗುಮಾನವೆರಡೂ ಇಲ್ಲ. ಬರೆದಾಗ ಇಲ್ಲಿ ಖಂಡಿತ ಹಂಚಿಕೊಳ್ಳುತ್ತೇನೆ. ನಿಮ್ಮ ಅನಿಸಿಕೆಗಳಲ್ಲಿ ಕಲಿಯಬಯಸುತ್ತೇನೆ.
ಮೊದಲೆ ಹೇಳಿದ ಹಾಗೆ ಇದು - ಆಶೆಯೆಂಬ ತಳ ಒಡೆದ ದೋಣಿಯ ದೂರ ತೀರ ಯಾನ. ಎಲ್ಲೂ ಮುಳುಗಬಹುದು. ತೇಲಿ ಇನ್ನೆಲ್ಲೋ ಸಾಗಲೂ ಬಹುದು. ಇದು ಬಾಳು ನೋಡು ಇದ ತಿಳಿದೆನೆಂದರೂ ತಿಳಿದ ಧೀರನಿಲ್ಲ.. ಎಂಬ ಸಾಲು ದೋಣಿಯ ಹುಟ್ಟಾಗಿರುವುದು ನನ್ನ ಯಾನದ ಅದೃಷ್ಟವಿರಬಹುದು.
ಪ್ರೀತಿಯಿರಲಿ
ಸಿಂಧು
ಬಡಿಸುವ ಬಳಗ
-
ಮಧ್ಯಾಹ್ನ ಊಟದ ಹೊತ್ತಿಗೆ ಏನೋ ಕೆಲಸದ ನಿಮಿತ್ತ ಊರಿನ ಲ್ಯಾಂಡ್ಲೈನ್ ನಂಬರಿಗೆ ಫೋನು
ಮಾಡಿದೆ. ಯಾರೂ ಎತ್ತಲಿಲ್ಲ. ನಂತರ ಅಮ್ಮನ ಮೊಬೈಲಿಗೆ ಮಾಡಿದೆ. ಹತ್ತಾರು ಬಾರಿ ರಿಂಗ್
ಆದನಂತರ ಫೋನ್ ಎ...
6 comments:
ಸಿಂಧು,
ಅನೇಕ ದಿನಗಳ ನಂತರ ನಿಮ್ಮ ಬರಹ ನೋಡಿ ಖುಶಿಯಾಯ್ತು.
ದೈನಂದಿನ ಒತ್ತಡಗಳಲ್ಲಿ, ಬರೆಯಲು,ಸ್ಪಂದಿಸಲು ತಡವಾಗಬಹುದು. ಆದರೆ,ಕಂಡಾಗ ಸಂತೋಷವಾಗದಿರುತ್ತದೆಯೇ?
ಸುನಾಥ,
ನಿಮ್ಮ ಪ್ರೀತಿಗೆ ಮರುಮಾತಿಲ್ಲ ನನ್ನದು. ಶರಣು.
ಪ್ರೀತಿಯಿಂದ
ಸಿಂಧು
sindhak,
ishtu bharavase kottre saaku. namgu 'swalpa' nemmadi iratte :)
ಪ್ರೀತಿಯ ಸಿಂಧು,
ನೀವು ಇನ್ಮುಂದೆ ಬರೆಯಲ್ಲ ಅಂಥ ತಿಳಿದು ಬಹಳ ಬೇಸರವಾಗಿತ್ತು.ಆದ್ರೆ ಮತ್ತೆ ಸಮಯ ಸಿಕ್ಕಾಗ ಬರಿಯುತ್ತಿರಿ ಅಂಥ ತಿಳಿದಾಗ ಬಹಳ ಸಂತೋಷ ಪಟ್ಟವರಲ್ಲಿ ನಾನು ಒಬ್ಬ.ನಿಮ್ಮ ಬರಹಗಳಿಗಾಗಿ ಕಾಯುತ್ತ ಇರ್ತೇವೆ .
ಪ್ರೀತಿಯಿಂದ
ಶರತ್.ಎ
ಅಕ್ಕ, ನೀ ಯಂಗಳ ಮೇಲೆ ಗೂಬೆ ಕೂರ್ಸ್ವಾಂಗಿಲ್ಲೆ.. ಎಲ್ಲ ಶಾಂತಲಕ್ಕ ಮಾಡಿದ ಕಿತಾಪತಿ :-)
ವಿಕಾಸ, ಶರತ್, ಮತ್ತು ಹರೀಶ,
ನಿಮ್ಮ ಸ್ಪಂದನೆಗಳು ನನ್ನಲ್ಲಿ ಹೊಸದೇ ಉತ್ಸಾಹ ತುಂಬುತ್ತಿವೆ. ನಿಮ್ಮ ಸಹೃದಯತೆ ಮತ್ತು ಪ್ರೀತಿಗೆ ನನ್ನ ಮರುನುಡಿಯಿಲ್ಲ.
ಹರೀಶ, ಶಾಂತಲೆಯದು ಕಿತಾಪತಿಯಲ್ಲ, ಸಿಕ್ಕಾಪಟ್ಟೆ ಪ್ರೀತಿ.
ಪ್ರೀತಿಯಿಂದ
ಸಿಂಧು
Post a Comment