ಆಶಾಢದ ಕೊನೆಗೆ
ತೆರೆದಂತೆ ಕಂಡ
ತುಸು ಹೊಸ ದಾರಿ
ಸುತ್ತಿ ಬಳಸಿ ನಡೆದು
ಕೊನೆಗೆ
ಹಳೆಯ ಹೆದ್ದಾರಿಗಿಳಿದು
ಪಯಣ ಅಸಹನೀಯವಾಗಿ
ನಿಲ್ದಾಣದ ನೆರಳಿಗಿಳಿಯದೆ
ಕವಲೊಡೆದು
ಹೊರಟಾಗ
ಕಣ್ಣ ಕೊನೆಗೆ
ಶ್ರಾವಣದ ಹನಿ.
ಏನ ಹೇಳಲಿ
ಮತ್ತೆ ಮತ್ತೆ -
ಬರ’ದ ಬದುಕಿಗೆ
ನೆರೆಹಾವಳಿಯ ನೆರವು
ನೆನಪು ಸಂತ್ರಸ್ತ,
ಆ ಕಳೆದ ಕಾಲ ವ್ಯಸ್ತ, ವ್ಯರ್ಥ!
ಋತುವಿಲಾಸಕ್ಕೆ
ಸಂದ
ವಿಕ್ಷಿಪ್ತ ವಿಲಾಪವಿದು
ಪ್ರತೀ ತಿಥಿಯಲ್ಲೂ
ಅ-ಕ್ಷರವಾಗುತ್ತಾ
ಅದು ಹೇಗೋ
ಒಳಗಿನ ಕುದಿ ಕಳೆದು
ಆರುತಿರುವ ಬೆಂಕಿಯಂತಹ ನೆನಪು!
ಬಡಿಸುವ ಬಳಗ
-
ಮಧ್ಯಾಹ್ನ ಊಟದ ಹೊತ್ತಿಗೆ ಏನೋ ಕೆಲಸದ ನಿಮಿತ್ತ ಊರಿನ ಲ್ಯಾಂಡ್ಲೈನ್ ನಂಬರಿಗೆ ಫೋನು
ಮಾಡಿದೆ. ಯಾರೂ ಎತ್ತಲಿಲ್ಲ. ನಂತರ ಅಮ್ಮನ ಮೊಬೈಲಿಗೆ ಮಾಡಿದೆ. ಹತ್ತಾರು ಬಾರಿ ರಿಂಗ್
ಆದನಂತರ ಫೋನ್ ಎ...