Monday, September 29, 2008

ಆಶೆಯೆಂಬ ತಳವೊಡೆದ ದೋಣಿಯಲಿ ದೂರತೀರಯಾನ..

ಕಣ್ಣಿಗೆ ಕಂಡದ್ದೆಲ್ಲವನ್ನೂ
ಮನದ ಭಿತ್ತಿಯೊಳಗೆ ಮೂಡಿಸಲಾಗುವುದಿಲ್ಲ;
ಒಳಗೆ ಮೂಡಿದ್ದೆಲ್ಲವನ್ನೂ
ಹೊರಗೆ ಹಂಚಿಕೊಳ್ಳಲೂ ಆಗುವುದಿಲ್ಲ.
ಕಂಬನಿಯ ಬದುಕಿಗೆ
ಕವಿತೆಯ ಕರವಸ್ತ್ರ ಕೊಟ್ಟವರು
ಮಾತಿನ ಹಾದಿಯುದ್ದಕ್ಕೆ
ಮೌನದ ಹೆಜ್ಜೆ ಇಟ್ಟು ಹೋಗಿದ್ದಾರೆ.

ಇಷ್ಟಕ್ಕೂ ಭಾವವೊಂದು
ನನ್ನದೇ ಮಾತಾಗಿ ದಾಖಲಾಗಲೇಬೇಕೆ!
ಗುಳ್ಳೆ-
ಒಳಿತು,ಚೆಲುವು,ಭಾವ,ಸಹಯಾನ,ಬದುಕು,ಬದಲಾವಣೆ,ನಾನುಇತ್ಯಾದಿ..
- ಎಲ್ಲ ಗುಳ್ಳೆಗಳೂಒಡೆದಿವೆ,
ಈ ದಾರಿ ಕೊನೆಗೊಂಡಿದೆ.

ಎಲ್ಲರ ಪ್ರೀತಿಯ ಸ್ಪಂದನೆಗೆ ತಲೆಬಾಗಿ ನಮಿಸುತ್ತಾ
ನೇಪಥ್ಯ ಸಿಂಧುವಿನೊಳಗಿನ್ನೊಂದು ಬಿಂದುವಾಗಿ..

-ಪ್ರೀತಿಯಿಂದ
ಸಿಂಧು

19 comments:

SHREE (ಶ್ರೀ) said...

ತಳವೊಡೆದ ದೋಣಿಯಾದರೂ ಆಶೆ ಬೇಕು ಬದುಕಿಗೆ.
ಇದು ಅರ್ಧವಿರಾಮವಾಗಲಿ ಅಂತ ಮನದುಂಬಿ ಹಾರೈಸುವೆ...
ಪ್ರೀತಿಯಿಂದ,
-ಶ್ರೀ

shreedevi kalasad said...

ಹೊಸತೊಂದು ಬಿಂದುವಿನೊಂದಿಗೆ ಸಿಂಧುವಿನ ಆಗಮನ ಮತ್ತೆಂದು?

ಪಲ್ಲವಿ ಎಸ್‌. said...

ಪ್ರೀತಿಯ ಸಿಂಧು,

”ಕಂಬನಿಯ ಬದುಕಿಗೆ
ಕವಿತೆಯ ಕರವಸ್ತ್ರ ಕೊಟ್ಟವರು
ಮಾತಿನ ಹಾದಿಯುದ್ದಕ್ಕೆ
ಮೌನದ ಹೆಜ್ಜೆ ಇಟ್ಟು ಹೋಗಿದ್ದಾರೆ”

ಈ ಸಾಲುಗಳು ತುಂಬ ಹಿಡಿಸಿದವು ಕಣ್ರೀ. ಕಂಬನಿಯ ಬದುಕಿಗೆ ಸಿಕ್ಕ ಕರವಸ್ತ್ರ ನಿಮ್ಮ ಅಕ್ಷರ ಪ್ರತಿಭೆ. ಅದು ಕಣ್ಣೀರು ಒರೆಸುವುದಕ್ಕಷ್ಟೇ ಸೀಮಿತವಾಗದಿರಲಿ. ಆತ್ಮವಿಶ್ವಾಸದ ಬಾವುಟವಾಗಿ ಪಟಪಟಿಸಲಿ. ಕಂಬನಿ ತುಂಬಿದ ಕಣ್ಣುಗಳೆಲ್ಲ ಅದನ್ನು ನೋಡಿ ಭರವಸೆ ತಂದುಕೊಳ್ಳುವಂತಾಗಲಿ.

ಇಂತಹ ಬಿಂದುಗಳು ಸೇರಿಕೊಂಡರೆ ತಾನೇ ಸಿಂಧುವಾಗುವುದು?

- ಪಲ್ಲವಿ ಎಸ್‌.

Sree said...
This comment has been removed by the author.
Sree said...

ಅಬ್ಬಾ ನೀವೊಬ್ರು ಬಾಕಿಯಿದ್ರಿ!:) ದೂರತೀರದ ಯಾನಗಳು ಇಷ್ಟು ಬೇಗ ಕೊನೆಯಾಗಲ್ಲ ಅಂತ ನನಗಂತೂ ನಂಬಿಕೆ ಇದೆಪಾ, ಕಾಯ್ತಿರ್ತೀನಿ ಮತ್ತೆ ಸಹಯಾನಕ್ಕೆ:)

Harish - ಹರೀಶ said...

ಸಿಂಧು ಅಕ್ಕ, ನಿಂಗಕ್ಕೆಲ್ಲ ಇದ್ದಕ್ಕಿದ್ದಂತೆ ಬ್ಲಾಗ್ ಬರೆಯದ್ನ ಬಿಡ ಯೋಚನೆ ಯಾಕಾದ್ರೂ ಬರ್ತು ಅಂತ.. ಗುರ್ರ್ರ್....

ಬರೀತಾ ಇರು.. ನಿಲ್ಸಡ.. "ಬಿಂದು..ಕೊನೆಯದು.. ಪೂರ್ಣವೆನ್ನಲಾರೆ.." ಅಂತ ಬರದ್ಯಲ, ಅದು ನಿಜ ಆಗಲಿ. ಬಿಂದುಗಳು ಸೇರಿ ರೇಖೆ, ರೇಖೆಗಳು ಸೇರಿ ಅಕ್ಷರ, ಅಕ್ಷರಗಳು ಸೇರಿ ಲೇಖನ, ಕವನಗಳಾಗಿ ಬರಲಿ..

shreeshum said...

ಹಾರ ತುರಾಯಿ ಬೇಕು ಪಂಡಿತಂಗೆ
ಹೆಸರಿಸಿರೆ ಸಾಕು ಪಾಮರಂಗೆ
ಹಣದ ಕೊಪ್ಪರಿಗೆ ಬೇಕು ಕೃಪಣಂಗೆ
ಮೌನವೊಂದೇ ಸಾಕು ಸುಖಿಪಂಗೆ
-ಎಂದಿದ್ದಾರೆ ಜ್ಞಾನಿಗಳು

sunaath said...

ಪ್ರತಿ ವ್ಯಕ್ತಿಯೂ ಆ ಚೈತನ್ಯಸಿಂಧುವಿನ ವ್ಯಕ್ತಬಿಂದು; ಅಂದ ಮೇಲೆ, ನಿಮ್ಮ ಭಾವಬಿಂದುಗಳು ಏಕೆ ವ್ಯಕ್ತವಾಗಬಾರದು, ಸಿಂಧು?

nostalgia said...

good one

ಸುಪ್ತದೀಪ್ತಿ suptadeepti said...

ಯಾಕಮ್ಮಾ ಅರ್ಧವಿರಾಮ? ಆರಾಮಾಗಿದ್ದೀಯಾ ತಾನೆ?
ಪ್ರೀತಿಯಿಂದ- ಜ್ಯೋತಿ.

Anonymous said...

Please keep writing.

Anonymous said...

what is this? nilsodaadroo ee thara alla -sudhanva

Anonymous said...

nillisadiru vanamaalini
koraLa gaanavanu

neevelldaroo nillisidre

naa kere neeru paale

ಸಂಭವಾಮಿ ಯುಗೇ ಯುಗೇ said...

ಲೇಖನ ಚೆನ್ನಾಗಿದೆ.ನಾನೂ ಒಂದು ಬ್ಲಾಗ್ ಆರಂಭಿಸಿದ್ದೇನೆ. ಸಂಭವಾಮಿ ಯುಗೇ ಎಂದು ಹೆಸರು. ಬಿಡುವಾದಾಗ ಓದಿ

Anonymous said...

ಆತ್ಮೀಯ ಕನ್ನಡ ಮಿತ್ರರೇ,

ನಿಮ್ಮ ಕವನ ಬಹಳ ಸೊಗಸಾಗಿದೆ.

ಕನ್ನಡ ಮನರಂಜನಾ ಲೋಕದಲ್ಲಿ ತನ್ನದೇ ಆದ ಛಾಪಿನಿಂದ, "ಕನ್ನಡಹನಿಗಳು.ಕಾಂ" ಅನೇಕ ಕನ್ನಡಿಗರ ಹೃದಯಗಳನ್ನು ಬೆಸೆಯುತ್ತಿದೆ. ತನ್ನ ನವ ನವೀನ ವಿನ್ಯಾಸದೊಂದಿಗೆ, "ಕನ್ನಡಹನಿಗಳು.ಕಾಂ", ಕರ್ನಾಟಕದ ಹಾಗೂ ವಿಶ್ವದೆಲ್ಲೆಡೆಯ ಕನ್ನಡಿಗರ ಮನೆ-ಮನಗಳನ್ನು ತಲುಪುತ್ತಿದೆ.

ನೀವೂ ಈ ಒಂದು ಪ್ರಯತ್ನವನ್ನು ಪ್ರೋತ್ಸಾಹಿಸುತ್ತೇರೆಂದು ನಂಬಿರುತ್ತೇನೆ.

ನಿಮ್ಮ ಅಂತರ್ಜಾಲದಲ್ಲಿ ಪ್ರಕಟಿಸುವಿರಾ ?

ನೀವು ಈ ಕೆಳಗಿನ ಲಿಂಕ್‍ನಿಂದ ಕೋಡ್‍ನ್ನು ತೆಗೆದುಕೊಳ್ಳಬಹುದು.

KannadaHanigalu-Linkus

ನಿಮ್ಮಲ್ಲಿ ಕವನ, ಹನಿಗವನ, ಇನ್ನೂ ಮುಂತಾದುವುಗಳಿದ್ದರೆ ನಮ್ಮಲ್ಲಿ ಪ್ರಕಟಿಸಿ, ಇನ್ನೂ ಹೆಚ್ಚಿನ ಕನ್ನಡ ಸ್ನೇಹಿತರಿಗೆ ತಲುಪಲು ಸಹಾಯ ಮಾಡಿ.

ಈ ಕೆಳಗಿನ ಕೊಂಡಿಯಲ್ಲಿ ನಿಮ್ಮ ಬರಹಗಳನ್ನು ಸೇರಿಸಬಹುದು.

KannadaHanigalu-submit

ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ.

ಧನ್ಯವಾದಗಳೊಂದಿಗೆ.....
ಕನ್ನಡ ಹನಿಗಳ ಬಳಗ

ಶರಶ್ಚಂದ್ರ ಕಲ್ಮನೆ said...

ನಿಮ್ಮ ಕವನವನ್ನು ಓದಿ ಸಂತೋಷ ಪಡಲೋ ಅತ್ವ ನಿಮ್ಮ ಇಂತ ಕವನಗಳನ್ನು ಓದೋ ಭಾಗ್ಯ ಮುಂದೆ ಸಿಗೋಲ್ಲ ಎಂದು ಬೇಸರಿಸಲೋ ತಿಳಿಯದಾಗಿದೆ. Please do keep writing.

Anonymous said...

I just discovered your blog and seems like I am already losing a friend. Please continue to write!

Meena Jois

Anonymous said...

ಇಷ್ಟು ದಿನ ನಿಮ್ಮ ಬರಹವನ್ನ ಓದಿ ಪ್ರೊತ್ಸಾಹಿಸಿದ ಎಲ್ಲರಿಗು ಚುಟುಕಾಗಿ ಬರೆದು ನೀವು yaake ಬರೆಯೋದು ಬಿಟ್ರಿ ಅಂತ ಹೇಳೋ ಸೌಜನ್ಯನಾದ್ರೂ ತೋರಿಸಿ ಸಿಂಧು.

-ಪುಷ್ಪಜ್ಯೋತಿ.

ಸಿಂಧು Sindhu said...

ಸ್ಪಂದಿಸಿದ ಎಲ್ಲರಿಗೂ ಪ್ರೀತಿಯಿಂದ ಶರಣೆನ್ನುತ್ತೇನೆ.

ಶ್ರೀ.
ನಿಜ. ಅದಕ್ಕೇ ತಳ ಒಡೆದ ದೋಣಿಯಾದರೂ ಯಾನ ಹೊರಟಿರುವುದು..

ಶ್ರೀದೇವಿ..
ಎಲ್ಲೂ ಹೋಗಿಲ್ಲ ನಾನು..

ಪಲ್ಲವಿ
ಅದು -”ಕಂಬನಿ ಬದುಕು, ಕವಿತೆ ಕರವಸ್ತ್ರ’ ನನ್ನ ಮೆಚ್ಚಿನ ಕೆ.ಎಸ್. ನ ಅವರ ಕವಿಸಾಲು. ನಿಮ್ಮ ಹಾರೈಕೆಗೆ ಧನ್ಯವಾದ.

ಶ್ರೀ..
ಅಲ್ವಾ.. ಏನಂತೀರಾ.. ಇಲ್ಲರೀ ನನ್ನ ಯಾನ ಸಿಕ್ಕಾಪಟ್ಟೆ ದೂರದ್ದು. ಮುಳುಗದೆ ತೇಲುವವರೆಗೂ ನಡೀತಾ ಇರ್ತದೆ.. :)

ಹರೀಶ,
ಬರೆಯದ್ನ ಬಿಡೋ ಯೋಚನೆ ಖಂಡಿತಾ ಇಲ್ಲ. ಇನ್ನೂ ಗುರ್ರ್ ಅನ್ನುವುದು ಬೇಡಪ್ಪಾ..

ಶ್ರೀಶಂ,
ಒಳ್ಳೆಯ ನೀತಿಯೇ. ಆಚರಿಸಲು ಬಲು ಕಷ್ಟ.

ಸುನಾಥ,
ಖಂಡಿತಾ. ಅಭಿವ್ಯಕ್ತಿಯೆಡೆಗಿನ ನನ್ನ ತಳಮಳದ ಸಾಲುಗಳು ಇವು.

ಶಶೀ,
ಥ್ಯಾಂಕ್ಯೂ.

ಸುಪ್ತದೀಪ್ತಿ,
ಆರೋಗ್ಯ. ಆದ್ರೆ ಆರಾಮಿಲ್ಲರೀ - ಆರಾಂ ಹರಾಂ ಹೈ ಅಂತ ಹೇಳಿದಾರೆ ಯಾರೋ ಅದ್ಕೆ ಸಿಕ್ಕಾಪಟ್ಟೆ ಕೆಲಸ ಮತ್ತು ಒತ್ತಡ.. :)

ಸುಧನ್ವ,
ನಿಲ್ಲಿಸಿಲ್ಲ...

ಮತ್ತು ಕುತೂಹಲ
ನಿಲ್ಲಿಸುವುದಾದರೆ ಹೇಗೆ ನಿಲ್ಲಿಸಬೇಕು.. ;)

ಹೆಸರಿಲ್ಲದ ಸ್ಪಂದನೆಯವರಿಗೆ,
ನಿಲ್ಲಿಸುವುದೇನಿಲ್ಲ... ಆದ್ರೂ ಯಾವುದಕ್ಕೂ ನೀವು ಈಜು ಕಲಿತಿದ್ದರೆ ಒಳ್ಳೆಯದು.. :)

ಸಂಭವಾಮಿ ಯುಗೇಯುಗೇ,
ಖಂಡಿತಾ.

ಶರಶ್ಚಂದ್ರ,
ಕ್ಶಮಿಸಿ, ನನ್ನ ಲಹರಿ ನಿಮ್ಮನ್ನು ಅಪಾರ್ಥಕ್ಕೆ ದೂಡಿದ್ದಕ್ಕೆ.
ನಿಲ್ಲಿಸಿಲ್ಲ ನಾನು ಬರೆಯುವುದನ್ನು.. :)

ಮೀನಾ,
ಚಾಚಿದ ಸ್ನೇಹಹಸ್ತಕ್ಕೆ ನನ್ನ ಕೈ ಯಾವಾಗಲೂ ಮುಂದಾಗಿಯೇ ಇರುತ್ತದೆ. ಓದಿ ಸ್ಪಂದಿಸುತ್ತಿರಿ.

ಪುಷ್ಪ ಜ್ಯೋತಿ,
ನಾನು ಬರೆಯುವುದನ್ನು ಬಿಟ್ಟಿಲ್ಲ.


ಪ್ರೀತಿಯಿಂದ
ಸಿಂಧು