ಒಲವಿನ ಪಯಣದ ಹಾದಿಗೆ
ಜೊತೆಯಾಗಿ ಮೆಲ್ಲಡಿ ಇಡಲು
ನೀರಧಿಯ ನೇವರಿಸಿ
ಮುಗುಳು ಬಿರಿದ ತಿಂಗಳನ
ಮಗಳ ಆಗಮನ..
ಮಾರ್ಗಶಿರ ಪ್ರತಿಪದೆಯ ಹೊಸ್ತಿಲಲಿ!
ಜೊತೆಯಾಗಿ ಮೆಲ್ಲಡಿ ಇಡಲು
ನೀರಧಿಯ ನೇವರಿಸಿ
ಮುಗುಳು ಬಿರಿದ ತಿಂಗಳನ
ಮಗಳ ಆಗಮನ..
ಮಾರ್ಗಶಿರ ಪ್ರತಿಪದೆಯ ಹೊಸ್ತಿಲಲಿ!
ಖುಶೀ,ಸಂತಸ,ಛಲ,ಸಂಕಟ,ನೋವು,ನೆಮ್ಮದಿ,ಸಣ್ಣತನ,ಸಮೃದ್ಧಿ,ಸಮಾಧಾನ,ಆತ್ಮೀಯ ಕುಟುಂಬ,ಮತ್ತು ತುಂಬಿತುಳುಕುವಷ್ಟು ಪ್ರೀತಿ ಎಲ್ಲವನ್ನೂ ಎರೆದ ಬದುಕು, ಇನ್ನೊಂದೇ ಬದುಕನ್ನು ಮಡಿಲಿಗಿಟ್ಟಿದೆ.
ಎಲ್ಲವನ್ನು ಕೊಟ್ಟಿರುವ ನವನವೋನ್ಮೇಷಶಾಲಿನೀ ಪ್ರಕೃತಿಯು ಪ್ರತಿರೂಪಿ ಸೃಷ್ಟಿಯನ್ನು ಹನಿಯಾಗಿ ಬನಿ ಇಳಿಸಿದ್ದಾಳೆ. ಆ ಶಕ್ತಿಗೆ ನಮನ. ಜೊತೆಗೆ ನಿಂತು ನೇವರಿಸಿದ ಎಲ್ಲ ಪ್ರೀತಿಯ ಕೈಗಳಿಗೆ ನಮನ.
ಎಲ್ಲವನ್ನು ಕೊಟ್ಟಿರುವ ನವನವೋನ್ಮೇಷಶಾಲಿನೀ ಪ್ರಕೃತಿಯು ಪ್ರತಿರೂಪಿ ಸೃಷ್ಟಿಯನ್ನು ಹನಿಯಾಗಿ ಬನಿ ಇಳಿಸಿದ್ದಾಳೆ. ಆ ಶಕ್ತಿಗೆ ನಮನ. ಜೊತೆಗೆ ನಿಂತು ನೇವರಿಸಿದ ಎಲ್ಲ ಪ್ರೀತಿಯ ಕೈಗಳಿಗೆ ನಮನ.

ಮುದ್ದು ಸುರಿಸುವ ಗುಲಾಬಿ ಕಾಲುಗಳಿಗೆ, ಕರೆಂಟು ಹರಿಸುವ ಮುಗ್ಧ ಕಣ್ಗಳಿಗೆ, ಬಿಗಿಯಾಗಿ ಹಿಡಿದಿರುವ ಪುಟಾಣಿ ಬೆರಳುಗಳಿಗೆ.. ನಮನ.