Tuesday, July 10, 2007

ಹಿಡಿದಿಡಲಾಗದ ಚಿತ್ರಗಳು..

ಫ್ರೇಮಿನಲ್ಲೊಂದು ರೋಚಕ ತಿರುವು..
ಬಗ್ಗಿ ನೋಡಿದ್ದಿದ್ದರೆ ಕಣಿವೆಯ ಹಸಿರು ಗದ್ದೆ
ತಲೆಯೆತ್ತಿದರೆ ಮೋಡ ಮುತ್ತಿಕ್ಕುವ ಬೆಟ್ಟಸಾಲು..

ಓಹ್, ರಂಜಕತೆಯ ಬಣ್ಣ ಖಾಲಿಯಾಗಿ
ಕರಿಗೆರೆಯೆಳೆಯುವ ಇದ್ದಿಲ ಚೂರು ಮುಗಿದುಹೋಗಿ
ಒಳಗೂ ಹೊರಗೂ ಸುರಿವ ಮಳೆಗೆ-
ಬಿಳಿಯ ಹಾಳೆ ಒದ್ದೆ!
ಫ್ರೇಮಿನ ಅಂಟು ಲಡ್ಡಾಗಿ,
ಅಲುಗಾಡುತ್ತಿದೆ
ಗೋಂದಿನ ಟ್ಯೂಬು ಚಪ್ಪಟೆ..

ಬಿಡಿಸಲಾಗದ ಚಿತ್ರಗಳನ್ನು
ತುಂಬಲಾಗದ ಬಣ್ಣಗಳನ್ನು
ಊಹಿಸುತ್ತ ಮುದಗೊಂದು,
ಎಚ್ಚರದಿ ಖಿನ್ನವಾಗಿ
ಕೈಚಲ್ಲಿ ಕೂತು ದಿಟ್ಟಿಸುವುದಷ್ಟೆ ಉಳಿದದ್ದು
ಮಾತು ದೂರ,
ಮೌನ ಭಾರ..

ಮುರಿದು ಬಿಸಾಡಿದ ಕ್ರೇಯಾನ್ ಹಿಡಿದ
ರದ್ದಿ ಆಯುವ ಪುಟ್ಟನ ಕೈಯಲ್ಲಿ
ನನಗೆಂದೂ ಗೊತ್ತಿರದ ಬಣ್ಣದ ಛಾಯೆ!
ಅವ ಬಿಡಿಸಬಹುದಾದ ಚಿತ್ರದಲ್ಲಿ
ನನ್ನ ಕೈ ಮೀರಿದ ರೇಖೆಗಳ ಮಾಯೆ!

ಎಲ್ಲ ಚಿತ್ರಗಳಾಚೆಗುಳಿಯುವುದು ನನ್ನ ಕವಿಗುರುವಿನ ಇನ್ನೊಂದು ಚಿತ್ರ
"ಕಣ್ಣು ಕಪ್ಪೆಯ ಚಿಪ್ಪಿನಗಲದ ದೋಣಿ, ಅದಕೆ ಕಂಡ ನೋಟ ಸಮುದ್ರದಂಥ ಪ್ರಾಣಿ"

15 comments:

Anonymous said...

ನಿಮ್ಮ ವಿಷಯದ ಆಯ್ಕೆ ಮತ್ತು ನಿರೂಪಣೆ ಅದ್ಭುತ ಕಣ್ರೀ. ಅಲ್ರೀ, ಇಷ್ಟೊಂದು ಹೇಗೆ ಬರೀತೀರಾ. ಅಷ್ಟು ಪ್ರೀತಿಯಿಂದ ಹೇಗೆ ಬರೀತೀರಾ. ಥ್ಯಾಂಕ್ಯೂ ಕಣ್ರೀ
ಜೋಗಿ

Anonymous said...

ಸಾರಿ, ಇದು ಹಿಂದಿನ ಲೇಖನಕ್ಕೆ ಸಂಬಂಧಿಸಿದ್ದು. ಇಲ್ಲಿ ಕಾಮೆಂಟ್ ಹಾಕಿದ್ದೀನಿ. ವಯಸ್ಸಾಯಿತು ನೋಡಿ, ಎಲ್ಲ ನೋಟಗಳಾಚೆ ಮತ್ತೊಂದು ಚಿತ್ರ ಇರೋದು ಫಕ್ಕನೆ ಕಾಣಿಸೋದೇ ಇಲ್ಲ.
ಜೋಗಿ

ಸಿಂಧು sindhu said...

ಪ್ರೀತಿಯ ಜೋಗಿ,

ನಾನು ಬರೆದಿದ್ದು ನಿಮಗೆ ಇಷ್ಟವಾಗಿದ್ದು ತಿಳಿದು..ತುಂಬ ಖುಷಿ ನನಗೆ. ನಿಮ್ಮದು ದೊಡ್ಡ ಮನಸ್ಸು.

ಧನ್ಯವಾದಗಳು ಮತ್ತು ಪ್ರೀತಿ
ಸಿಂಧು

Anonymous said...

ಬಿಡಿಸಲಾಗದ ಚಿತ್ರಗಳನ್ನು
ತುಂಬಲಾಗದ ಬಣ್ಣಗಳನ್ನು
ಊಹಿಸುತ್ತ ಮುದಗೊಂದು,
ಎಚ್ಚರದಿ ಖಿನ್ನವಾಗಿ
ಕೈಚಲ್ಲಿ ಕೂತು ದಿಟ್ಟಿಸುವುದಷ್ಟೆ ಉಳಿದದ್ದು
ಮಾತು ದೂರ,
ಮೌನ ಭಾರ.....

tumba chenagidhe.

minugutaare said...

chennagide nimma subject aayke mathu nirupane.

ಸುಪ್ತದೀಪ್ತಿ suptadeepti said...

ಕವನ ಚೆನ್ನಾಗಿದೆ, ಸಿಂಧು. ನವಿರು ವಿಷಯವನ್ನು ಅಷ್ಟೇ ನಾಜೂಕಾಗಿ ಹೆಣೆದಿದ್ದೀರಿ. ಧನ್ಯವಾದಗಳು.

Anonymous said...

nimma shabdagalu adbutha, nanu nimm dodaa Abhimani yagibittiddene, nimma ell baravanagegalannu oduthaiddene.

Anonymous said...

ಸಿಂಧೂ,
ಸೋಮಾರಿಯಾಗುತ್ತಿದ್ದೀರಾ?
ಅಥವಾ
busy?
ಎಲ್ಲ ಕವಿತೆಗಳಾಚೆ ಮತ್ತೊಂದು ಕವಿತೆ ಇದೆ..
-ಜೋಗಿ

Anonymous said...
This comment has been removed by the author.
Iranna Shettar said...

"ಮಾತು ದೂರ,
ಮೌನ ಭಾರ"

ಛಲೋ ಐತ್ರಿ..

ಪ್ರೀತಿಯಿರಲಿ
ಶೆಟ್ಟರು

Anonymous said...

==============================
I have a crazy idea for u.
Y don't u compile all your
previous blogs related to
"Malenadu" and publish
a decent book. I am sure
many of the true
"Malenadina janaru"
particularly those who
are missing the flavour of
Malenadu (because
of our professions and other
commitments) would love such effort.
=============================

ರಾಧಾಕೃಷ್ಣ ಆನೆಗುಂಡಿ. said...

ತುಂಬಾ ದಿನದ ನಂತರ ಭೇಟಿ ನೀಡಿದೆ. ಚೆನ್ನಾಗಿತ್ತು.

Anonymous said...

Sindhu, Good sugestion from Venky, give it a serious thought!
- SHREE

Anonymous said...

ಸಿಂಧು ಅವರೆ,

ಕವಿತೆಗಳು ಚೆನ್ನಾಗಿವೆ.

ಲೇಖನಗಳನ್ನ ಇನ್ನು ಓದಬೇಕಷ್ಟೇ.

ಶುಭಾಶಯಗಳು.

ಸಿಂಧು sindhu said...

ಅನಾಮಿಕ,
ಮೆಚ್ಚುಗೆಗೆ ವಂದನೆಗಳು,

ಮಿನುಗುತಾರೆ,
ನಿಮ್ಮ ಮೆಚ್ಚುಗೆಗೆ ಖುಷಿಯಾಯಿತು ನನಗೆ,

ಸುಪ್ತದೀಪ್ತಿ,
ನವಿರನ್ನ ನವಿರೇ ಸವಿಯುವುದು..

ಅಭಿಮಾನೀ ಅನಾಮಿಕ,
ಆದರಿಸಿ ಓದುತ್ತಿರುವುದಕ್ಕೆ ಧನ್ಯವಾದ.

ಜೋಗಿ,
ಸೋಮಾರಿಯಾಗುವುದು..?!ಹುಟ್ಟಾ ಸೋಮಾರಿ ನಾನು.. :)
ಬ್ಲಾಗಲ್ಲಿ ಬರೆಯಲು ಸಮಯವಾಗಲಿಲ್ಲ, ತುಂಬ ಕೆಲಸದ ಒತ್ತಡ.

ಶೆಟ್ಟರೆ,
ಖುಷಿಯಾತ್ರಿ

ವೆಂಕಿ,
ನಿಮ್ಮ ಕ್ರೇಝಿ ಪ್ರೀತಿ ದೊಡ್ಡದು. ಮುಂದೊಮ್ಮೆ ನೋಡೋಣ. ಈಗ ಕಾಲವಲ್ಲ, ಮಾಗಲು ಸಮಯ ಬೇಕು.

ರಾಧಾಕೃಷ್ಣ,
ಆಗಾಗ ಬರುತ್ತಿರಿ, ನಿಮ್ಮ ಪ್ರೀತಿಸಲಹೆಯ ಮಳೆಕೊಯ್ಲು ಅತ್ಯಗತ್ಯ.

ಶ್ರೀ,
ತುಂಬ ಸೀರಿಯಸ್ ಆಗಿ ಆಲೋಚನೆ ಮಾಡ್ತಾ ಇದೀನಿ..

ಆಟಮ್ ನೈಟಿಂಗೇಲ್,
ಧನ್ಯವಾದಗಳು,
ಓದಿ ಅಭಿಪ್ರಾಯ ತಿಳಿಸಿ

ಪ್ರೀತಿಯಿರಲಿ,
ಸಿಂಧು