ಮರುಭೂಮಿಯ ರಾತ್ರಿಗಳಲ್ಲಿ
ಬೆಳದಿಂಗಳು ಚಂದವಿರಬಹುದೆಂದು
ನನ್ನ ಅಸೆ ಮತ್ತು ನಂಬಿಕೆ;
ಮರಳುಗಾಡಿಗೇ ಬರುವ ಧೈರ್ಯ ಮಾಡಿದವನು
ಕೃಷ್ಣಪಕ್ಷ ಕಳೆದು
ಇಂಚಿಂಚೇ ನಗಲಾರೆಯಾ?
ಎಂದು ಬರಲಿದೆ ಪಾಡ್ಯ?
ನನಗೆ ಬಿದಿಗೆಯೆಂದರೆ,
ಬಿದಿಗೆಯಲ್ಲಿ ಪುಟ್ಟಗೆ ನಗುವ ನೀನೆಂದರೆ
ತುಂಬ ಪ್ರೀತಿ.
ಅದಕ್ಕೇ ಕಾದಿದ್ದೇನೆ ಇದು ಮರಳುಗಾಡೆಂದು ಗೊತ್ತಿದ್ದರೂ.
ಮೃಗಶಿರ : ಹಲವು ಕಥೆಗಳ ಒಂದು ಸುಂದರ ಗುಚ್ಛ
-
*ಯಾ*ವುದೇ ಪುಸ್ತಕವನ್ನು ಅದರ ಮುಖಪುಟವನ್ನು ನೋಡಿ ಅಳೆಯದಿರು ಎಂದು ಹೇಳುತ್ತಾರೆ. ಅಂತೆಯೇ
ಓರ್ವ ವ್ಯಕ್ತಿಯ ಬದುಕನ್ನು ಅರಿಯುವಾಗ, ಕೇವಲ ಆತನ ಏಕಪಕ್ಷೀಯ ಮಾತುಗಳನ್ನು, ಅವರಿವರು
ಹೇಳಿದ್ದ...
3 comments:
ಪ್ರೀತಿ ಇದ್ದಲ್ಲಿ ... ಕಾಯುವುದು ಕೂಡ ಒಂದು ಸುಖ ಅನ್ನಿಸುತ್ತದೆ ... ಅಲ್ಲವೆ .. ?
ಉಮಾಶಂಕರ್,
ಪ್ರೀತಿಯೇ, ಕಾಯುವ ಬಲ ಕೊಡುತ್ತದೆ. ನೋವಿನಲ್ಲೂ ಒಂದು ನಲಿವಿನ ಭರವಸೆ ತುಂಬುತ್ತದೆ.
ನಿಜಾ ಕಣ್ರೀ... ಮರುಭೂಮಿಯಲ್ಲಿ ಬೆಳದಿಂಗಳು ನಿಜಕ್ಕೂ ಚೆನ್ನಾಗಿರುತ್ತೆ... ಓಯಾಸಿಸ್ ಪಕ್ಕದಲ್ಲಿದ್ರೆ....
ಕವನ ತುಂಬಾ ಚೆನ್ನಾಗಿದೆ..
Post a Comment