ಮೊದಮೊದಲು ಬರೆದಾಗ ಅಂದುಕೊಂಡೆ:
ನನ್ನ ಮನದ ದುಗುಡವಾರಿಸಲು ಬರೆಯುತಿರುವೆ
ಆಮೇಲಾಮೇಲೆ
ಓದಿದವರ ಆಹಾ...ಚೆನಾಗಿದೆ ಕೇಳಲು ಬರೆಯುತಿರುವೆ
ನಾನು ಮೆಚ್ಚುವವವರು ಮೆಚ್ಚಲು ಬರೆಯುತಿರುವೆ
ಇಂದು ನನ್ನ ಲೇಖನಿ ಕಸಿಯುವವಳು ಎಂದಾದರೂ ಓದಲೆಂದು ಬರೆಯುತಿರುವೆ
ಎಳೆಬೆನ್ನ ಮೇಲೆ ಸೆಳೆದ ನನ್ನದೇ ಕೈಯ ಹಕೀಕತ್ತು ನನಗೇ ಗೊತ್ತಾಗಲು ಬರೆಯುತಿರುವೆ
....
ಮತ್ತೆ ಈಗೀಗ:
ನನ್ನ ಮನದ ದುಗುಡವಾರಿಸಲು ಬರೆಯುತಿರುವೆ;
ಆರುವುದೋ, ತೀರುವುದೋ..ಮತ್ತೆ ಹೊತ್ತಿ ಉರಿಯುವುದೋ
ತಿಳಿದವಳಲ್ಲ.
ದುಗುಡವಾರಲೆಂಬ ಹಂಬಲ ಮತ್ತು ಅಸಹಾಯಕತೆ
ಯಲಿ ಮುಳುಗಿ ಬರೆವ ಕ್ಷಣಗಳಲಿ ನಾನು ನಾನಲ್ಲ.
ಬರೆವಾಗ ಇರುವವಳು
ಕರೆದಾಗ ಬರದವಳು
ಬರೆದ ಮೇಲೆ ಇರುವವಳಲ್ಲ.
ನನ್ನ ಮನದ ದುಗುಡವಾರಿಸಲು ಬರೆಯುತಿರುವೆ
ಆಮೇಲಾಮೇಲೆ
ಓದಿದವರ ಆಹಾ...ಚೆನಾಗಿದೆ ಕೇಳಲು ಬರೆಯುತಿರುವೆ
ನಾನು ಮೆಚ್ಚುವವವರು ಮೆಚ್ಚಲು ಬರೆಯುತಿರುವೆ
ಇಂದು ನನ್ನ ಲೇಖನಿ ಕಸಿಯುವವಳು ಎಂದಾದರೂ ಓದಲೆಂದು ಬರೆಯುತಿರುವೆ
ಎಳೆಬೆನ್ನ ಮೇಲೆ ಸೆಳೆದ ನನ್ನದೇ ಕೈಯ ಹಕೀಕತ್ತು ನನಗೇ ಗೊತ್ತಾಗಲು ಬರೆಯುತಿರುವೆ
....
ಮತ್ತೆ ಈಗೀಗ:
ನನ್ನ ಮನದ ದುಗುಡವಾರಿಸಲು ಬರೆಯುತಿರುವೆ;
ಆರುವುದೋ, ತೀರುವುದೋ..ಮತ್ತೆ ಹೊತ್ತಿ ಉರಿಯುವುದೋ
ತಿಳಿದವಳಲ್ಲ.
ದುಗುಡವಾರಲೆಂಬ ಹಂಬಲ ಮತ್ತು ಅಸಹಾಯಕತೆ
ಯಲಿ ಮುಳುಗಿ ಬರೆವ ಕ್ಷಣಗಳಲಿ ನಾನು ನಾನಲ್ಲ.
ಬರೆವಾಗ ಇರುವವಳು
ಕರೆದಾಗ ಬರದವಳು
ಬರೆದ ಮೇಲೆ ಇರುವವಳಲ್ಲ.
1 comment:
ಇವರಲ್ಲದೆ ಇವರ್ಯಾರು ಎಂದು ತಿಳಿಯಲೇ ಬೇಕೆಂಬ ಹಂಬಲ ನನಗಂತೂ ಇಲ್ಲ.
ಯಾಕೆಂದರೆ, ಲೇಖನಿಯಿಂದ ಹರಿದ ಸಾಲುಗಳು
ನನ್ನ ಮನದಲ್ಲಿ ಅಚ್ಚೊತ್ತಿ ಉಳಿಯುತ್ತಿವೆ, ಇಷ್ಟೇ ಸಾಕು.
ಮುಂದೊಮ್ಮೆ, ಭವಿಷ್ಯ ಇದನ್ನೋದೀತು, ಖುಶಿ ಪಟ್ಟೀತು,
ತನ್ನ ಜನನಿಯನ್ನು ನೆನೆದೀತು,
ಇನ್ನೇನು ಬೇಕು?
Post a Comment