Tuesday, November 8, 2016

ಗಾಳಿ ಹೆಜ್ಜಿ ಹಿಡಿದ ಸುಗಂಧ...

ಎಷ್ಟೋ ಬಾರಿ ನಕ್ಕು ಕಲೆತು
ಮತ್ತೆಷ್ಟೋ ಪ್ರಶ್ನೋತ್ತರಗಳು ಕುಳಿತು
ಜೊತೆಜೊತೆಗೆ ನಡೆವಾಗ
ಮಾತು ಮಾತಿಗೆ ಮಲೆತು
ಹಾಗೀಗೇ ಓಡಾಡಿಕೊಂಡಿದ್ದ
ಇವೆರಡು ಕಣ್ಣು
ಅವತ್ಯಾಕೋ
ಎಚ್ಚರ ತಪ್ಪಿ ಬಿದ್ದೆದ್ದು
ನಿನ್ನ ಕಣ್ಣ ಕಾಳಜಿಯ
ಕೊಳದಲ್ಲಿ ಹೊಕ್ಕು
ಮತ್ತೆಂದೂ ತೊರೆಯದ ಹಾಗೆ...

ಮತ್ತೆ ಮತ್ತೆ ನೋಟದ ಕರೆಂಟು
ಹರಿದು....
ಫಿಲಮೆಂಟು ಉದುರಿದ ಬಲ್ಬಿನಲ್ಲೂ
ದೀಪ ಉರಿದ ಜಾದು

ಇವತ್ತು ನೀನು ರಾಗವಾಗಿ ಹಾಡುತ್ತೀ...
"ಪ್ರಣತಿ ಇದೆ. ಬತ್ತಿ ಇದೆ.
ಜ್ಯೋತಿ ಬೆಳಗುವೊಡೆ
ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೋ..." ಎಂದು..

(ಪ್ರಣತಿ ಇದೆ ಬತ್ತಿ ಇದೆ... ಇದು ಅಲ್ಲಮನ ವಚನ. ವೆಂಕಟೇಶ ಕುಮಾರರ ದನಿಯಲ್ಲಿ ಹರಿದ ಸುಧೆ.)

5 comments:

sunaath said...

ಪ್ರತಿಭೆ ಎನ್ನುವ ತೈಲ ಇರುವಾಗ, ಕಾವ್ಯ ಎನ್ನುವ ಜ್ಯೋತಿ ಬೆಳಗದೆ ಇದ್ದೀತೆ? ಅಭಿನಂದನೆಗಳು.

prabhamani nagaraja said...

ಚೆನ್ನಾಗಿದೆ ನಿಮ್ಮ ಕವನ.

Unknown said...

Nice

Unknown said...

Nice

Unknown said...

Nice