Wednesday, June 25, 2014

ರಾತ್ರಿರಾಣಿ

ರಾತ್ರಿರಾಣಿಗೆ
ಮತ್ತೇರಿಸುವ ಸುಗಂಧ,
ಮಾರುದೂರಕ್ಕೆ ಮಾತ್ರ!
ಬಳಿಗೇ ಹೋದರೆ,
ಕಡುಹಸಿರು ಎಲೆಗಳ ಮೇಲೆ
ರಂಗೋಲಿಎಳೆಯಿಟ್ಟ ಹಾಗೆ,
ಹತ್ತಿರದಿ ಮೂಗೊತ್ತಿ
ಮೂಸಿದರೂ ಪರಿಮಳವಿಲ್ಲ.
ಗಾಳಿಗೊಡ್ಡಲೆಂದೇ
ಸೂಸುವ ಘಮ!

ಅದ್ಯಾಕೋ ಹಳೆ
ಝೆನ್ ಕತೆ ನೆನಪಾಗುತ್ತೆ,
ಚಿಟ್ಟೆ,ಸಂತಸ, ಮತ್ತು ಹಿಡಿದಿಡಲು ಕಷ್ಟಪಡುವ ಹುಡುಗೀ
ಹಸಿಯಾಗಿ,ಬಿಸಿಯಾಗಿ,ಮಾಗಿ-
ಬಿಡಲು

ಇವಳು ಬೇಂದ್ರೆಕವಿತೆಯಲ್ಲ.
ಹುಸಿಯಾಗಿ ಉಳಿಯುವ
ಹಗಲುಗನಸು.

ಸಂಜೆಯು ಇರುಳಿನಲ್ಲಿ
ಇಳಿಯುವ ಹೊತ್ತಿಗೆ,
ನೀರುಣಿಸಲು ಹೋದ ತಪ್ಪಿಗೆ,
ಅರೆಬಿರಿದ ಮೊಗ್ಗೆ ಮೊಗ್ಗೆ.
ಸುಮ್ಮನಿರಲು ಬಿಡದೆ
ಪದಗಳ ಹೆಣಿಗೆಗೆ
ಕಾರಣ..
ಕಿವಿಯಲಿ ಕಾಲೂರಿದ ಹಾಗೆ
ಎಲ್ಲದರಲ್ಲೂ ತೂರಿ ಬರುವ
ಈ ಉದ್ದ ಮೂಗೇ..

4 comments:

sunaath said...

ಭಾವನೆಗಳ ಗಾಳಿಪಟವನ್ನು ಹಾರಿಬಿಟ್ಟ ಹಾಗೆ ನಿಮ್ಮ ಕವನ!

Badarinath Palavalli said...

ನಡುವೆಲ್ಲೋ ಬಂದ ಬೇಂದ್ರೆ ಉಲ್ಲೇಖದಿಂದ ಕವಿತೆಯ ತೂಕವು ನೂರ್ಮಡಿಯಾಯಿತು.

ಗಾಳಿಯಲೇ ತೇಲಿಸಲಷ್ಟೇ ಹೊಮ್ಮಿ ಸುಗಂಧಗಳೆನಿತೋ ಧರೆಯಲಿ!

ಭಾವಲಹರಿ said...

ಪರಿಪಕ್ವತೆಯ ಪರಿಮಳ ಈ ನಿಮ್ಮ ಕವನದಲ್ಲಿ ಕಾಣಬಹುದು .

Anonymous said...

ಭಾವ,,, ಭಾವ,,,, ಭಾವ,,,, ಅಷ್ಟೇ,,,, ಮುಗಿದು ಹೋಯಿತು ಓದುಗನ ಕಥೆ,,,ಸೂಪರ್ ರ್,,,