Monday, August 22, 2011

ಸೋಜಿಗ!

ಮೇಲ್ಮುಖ ಹರಿಯುವ
ಕಾರಂಜಿ ನೀರಿನ
ತುದಿಯಲೊಂದು ಪುಟ್ಟ ಗೋಲ
ಹರಿವ ನೀರಿನ ಬಲವೇ ಬಲ
ಅತ್ತಿತ್ತ ಜಗ್ಗದ ಗೋಲ
ನೋಡಿ ಹಿರಿಯರಿಗೂ ಎಳೆಯರಿಗೂ ಸೋಜಿಗ
ನೀರ್ಬಲದ ಗೋಲ
ನಡು ದಾರಿಯಲ್ಲಿ
ನೆನಪಾಗುವಾಗ
ಮನದಲ್ಲೊಂದು ಭಯದ ಸೆಳೆ

ಹೆದರಿ,ಬೆವೆತ ಮಸ್ತಿಷ್ಕದಲ್ಲಿ
ನಿಜದ ಅರಿವು ಸಟ್ಟನೆ ಹೊಳೆ
ಹೊಳೆದು..
ನೀರು ನಿಂತ ಮರುಘಳಿಗೆಯಲ್ಲಿ
ಕೆಳಗುರುಳುವ ಗೋಲ!
ಈಗಿತ್ತು ಈಗಿಲ್ಲ!
ಬದುಕು ಕಡೆಗೂ
ಹಳೆಯ ಹಿರಿಯರ ಮಂತ್ರಶ್ಲೋಕಗಳ
ನೀರಮೇಲಣ ಗುಳ್ಳೆಗಳ
ಭಾಷ್ಯವೇ!
ನೀನು ಯಾವಾಗ
ಹರಿದು ಹೋದೆ?
ನಾನು ಯಾವಾಗ ಬಿದ್ದೆ?
ಸೋಜಿಗಕ್ಕೇ ಅಚ್ಚರಿ.
ಸ್ವಮರುಕದ ಎಣ್ಣೆಯಲಿ
ಬಿದ್ದ ನೋವಿಗೆ ಮಾಲೀಷು,
ಪುಕ್ಕಟೆ ಮಾಲೀಷು.

6 comments:

sunaath said...

"ಸಹಜ ಕವಿಯಿತ್ರಿಯ ಕವನಕ್ಕೇನು ಬೇಕು?
ನೀರ ಮೇಲಿನ ಒಂದು ಗೋಲ ಸಾಕು!"

ಸಿಂಧು sindhu said...

@ಸುನಾಥ,

ನಿಮ್ಮ ವಿಶ್ವಾಸ ದೊಡ್ಡದು. ಒಂದು ಧನ್ಯತೆಯ ಭಾವ ಇಲ್ಲಿ.

ಪ್ರೀತಿಯಿಂದ,ಸಿಂಧು

Santhosh Rao said...

Tumba chennagi barediddira..

ಸಾಗರದಾಚೆಯ ಇಂಚರ said...

sundara kavana

tadavaagi odiddakke kshamisi

ಸಿಂಧು sindhu said...

ಸಂತೋಷ್ ಮತ್ತು ಗುರು,

ಓದಿ ಸ್ಪಂದಿಸಿದ್ದಕ್ಕೆ ಧನ್ಯವಾದ.

@ಗುರು, ಇದೇನಿದು ಇಷ್ಟೊಂದು ಫಾರ್ಮಾಲಿಟಿ?

ನನ್ನ ಬ್ಲಾಗಿಗೆ ಗೋಡೆಗಳಿಲ್ಲ.. ಎಲ್ಲೂ, ಯಾವಾಗ್ಲಾದ್ರೂ.. ಎಷ್ಟೋತ್ತಿಗಾದ್ರೂ, ಎಷ್ಟು ಲೇಟಾಗಾದ್ರು.. ಓದಿ. ಓದಿದ್ರ ಬಗ್ಗೆ ನಿಮ್ಮ ಅನಿಸಿಕೆ ಹಂಚಿಕೊಂಡ್ರೆ ನಂಗೆ ಖುಶಿ, ಅರಿವು. ಎರಡೂ.

ಪ್ರೀತಿಯಿಂದ,
ಸಿಂಧು

ಸಾಗರದಾಚೆಯ ಇಂಚರ said...

@ Sindhu

agreed :)

adru ellanu time ge odabeku andkotini, kelavomme agolla :)