ಎಲ್ಲ ಕತ್ತಲ ಕೊನೆಯಲ್ಲೊಂದು ಬೆಳಕಿನ ಕೋಲು, ಬೇಸರದ ಕ್ಷಣಗಳ ಭಾರದ ಮೋಡವ ಇಳುಹಲು ಸುರಿವ ಮಳೆಯ ಆಹ್ಲಾದ,
ಇದೆ ಅಲ್ಲವೆ ಬದುಕು ಎಂಬ ಅರಿವು ಮತ್ತು ಇದೆಯೆ ಬದುಕು ಎಂಬ ಅಚ್ಚರಿ.
ನಾನು ತುಂಬ ಇಷ್ಟಪಟ್ಟ ಅಶ್ವತ್ಥರು ಮತ್ತು ಇಷ್ಟವಾಗಿದ್ದ ವಿಷ್ಣು ಇಬ್ಬರ ನಿರ್ಗಮನದ ಸುದ್ದಿಯ ಕಾರ್ಮೋಡದಂಚಿನ ಬೆಳ್ಳಿಗೆರೆಯಂತೆ ಹೊಳೆಯುತ್ತಿರುವುದು ಇನ್ನೊಂದು ಸುದ್ದಿ - ಸಂಕ್ರಾಂತಿಯ ಕಂಪಿಗೆ ಮತ್ತೆ ಕೆಂಡಸಂಪಿಗೆ
http://kendasampige.com/article.php?id=2953
ನೋವುಗಳನ್ನ ಮೀರುವ ಶಕ್ತಿಯನ್ನ ಬಯಸುತ್ತಾ,
ಪ್ರೀತಿಯಿಂದ,
ಸಿಂಧು
ಹೊಸವರ್ಷವೆಂಬ ಒಗಟು
-
ಅಕ್ಷರಗಳು ಕರಗಿ
ಧ್ವನಿಯಾಗಿ ಬೆಳಕಾಗಿ
ಹೊಳೆಹೊಳೆಯುತ್ತಾ ಹೊರಟಿವೆ
ಎಲ್ಲಿಗೋ!
ಇನ್ನಿಲ್ಲದ ಪಯಣದಂತೆ ಭಾಸವಾಗಿದೆ
ಕಂತುತ್ತಿರುವ ಭಾಸ್ಕರನ ತಣ್ಣನೆಯ
ಕೆಂಬಣ್ಣದ ಬೆಳಕಿನಲ್ಲಿ
ಸಾಗುತ್ತ...
2 comments:
waiting for many more in kenda sampige
ಚಿಂದಕ್ಕಾ...
ಅರೆ ! ಕೆಂಡಸಂಪಿಗೆ ಮತ್ತೆ ಆರಂಭವಾ? ನಿಜ. ಪ್ರತಿಯೊಂದು ನೋವನ ಅಂಚಿನಲ್ಲೊಂದು ನಲಿವಿನ ಹೂ ಇದ್ದಿದ್ದಕ್ಕೇ ಬದುಕಿಷ್ಟು ಚೆಲುವು.
ನಿನ್ನ ಬ್ಲಾಗ್ ಲೇಖನಕ್ಕೆ ಪಬ್ಲಿಷ್ ಆದ ತಾರೀಖು ತಪ್ಪು ತೋರಿಸ್ತಿದೆಯೇನೇ ಚಿಂದಕ್ಕಾ... ಒಮ್ಮೆ ನೋಡೋ.
Post a Comment