ಚುಮು ಚುಮು ಬೆಳಗು,
ರಾತ್ರಿಯಿಡೀ ಅತ್ತುಬಿಟ್ಟಿದ್ದೆ
ಹೊರಗೆ ಧೋ ಎಂದು ಮಳೆಯಿತ್ತು
ಹಸೀ ಮಣ್ಣು ಒದ್ದೆ ಗಿಡಮರ
ಮಳೆ ನಿಂತು ಮೋಡ ಚೆದುರಿದ
ಆಕಾಶದಲ್ಲಿ ಸೂರ್ಯನ ಹೊಂಗಿರಣ
ಹರಡಿ ಕೆರೆಯ ನೀರು ಗಾಳಿಯಲೆಗೆ
ಪುಳಕಗೊಂಡು, ಅಲ್ಲೇ ಮರದ
ಮರೆಯಲ್ಲಿ ಹೆಸರು ಗೊತ್ತಿರದ ಹಕ್ಕಿಯೊಂದು ಹಾಡಿ...
ಅಷ್ಟರಲ್ಲಿ ನೀನು ಕರೆದೆ
ನನಗೆ ರಾತ್ರಿಯ ದುಃಖ ನೆನಪಾಯಿತು...
ಕಣ್ಣು ತುಂಬಿ ತುಳುಕುವುದರಲ್ಲಿತ್ತು...
ತಡೆಹಿಡಿದು
ನಿನ್ನ ಹುಟ್ಟಿದ ದಿನಕ್ಕೆ ಶುಭಾಶಯ ಹೇಳಿದೆ
ಮತ್ತೆ ಮಾತಿಲ್ಲ,
ನಿಟ್ಟುಸಿರು...
ನೀನೇನಂದುಕೊಂಡೆಯೋ ಗೊತ್ತಿಲ್ಲ,
ನಾನು ಮಾತ್ರ ಹಳೆಯ ಕಹಿ ಬದಿಗಿಟ್ಟು
ನಿನಗಿನ್ನೊಮ್ಮೆ ಮನಸಾರೆ ಹಾರೈಸಿ
ಮೇಲೆದ್ದು ಹೊರಟುಬಂದೆ...
ಇಲ್ಲ ನನಗೆ ತಿರುಗಿ ನೋಡಬೇಕೆನ್ನಿಸಲಿಲ್ಲ ನಿಜಕ್ಕೂ.
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
-
“ಅಸ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ| ಪೂರ್ವಾಪರೌ ತೋಯನಿಧೀ
ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ ”
ಕವಿಗುರು ಕಾಳಿದಾಸನು ತನ್ನ ‘ಕುಮಾರಸಂಭವ’ ಕಾವ್ಯ...
4 comments:
ನೀನೇನಂದುಕೊಂಡೆಯೋ ಗೊತ್ತಿಲ್ಲ,
ನಾನು ಮಾತ್ರ ಹಳೆಯ ಕಹಿ ಬದಿಗಿಟ್ಟು
ನಿನಗಿನ್ನೊಮ್ಮೆ ಮನಸಾರೆ ಹಾರೈಸಿ
ಮೇಲೆದ್ದು ಹೊರಟುಬಂದೆ...
ಇಲ್ಲ ನನಗೆ ತಿರುಗಿ ನೋಡಬೇಕೆನ್ನಿಸಲಿಲ್ಲ ನಿಜಕ್ಕೂ.
:...)
ಬೆಳಕು ಹರಿಯುವುದೇ ಹಾಗೆ, ಹೊಸದಾರಿ ತೋರಲಿಕ್ಕೆ, ರಾತ್ರಿಯ ದು:ಖ ಮರೆಯಲಿಕ್ಕೆ... :) :) :) ನಗೆಬೀಜ ಚೆಲ್ಲಲಿಕ್ಕೆ...
ರಾತ್ರಿ ಆಗುವುದೇ ದುಃಖ ಕೊಡುವುದಕ್ಕೊ ಎನೋ, ಕತ್ತಲೆ ದುಃಖದ ಸಂಕೇತ.
ಬೆಳಗಾಗುವುದೆ ಆ ದುಃಖ ಮರೆಯಲೋ ಎನೋ?
ನೋವುಂಡ ಜೀವಕ್ಕೆ ಹಗಲಿ ಕಳೆಯುವುದು ಕಷ್ಟವಲ್ಲ ಆ ನೀರವ ರಾತ್ರಿಗಳಲ್ಲಿ ಕಣ್ಣೀರು ಹಾಕದೆ ಕಳೆಯುವುದು ಅತ್ಯಂತ ಕಷ್ಟ.
"ಇಲ್ಲ ನನಗೆ ತಿರುಗಿ ನೋಡಬೇಕೆನ್ನಿಸಲಿಲ್ಲ ನಿಜಕ್ಕೂ"
ತಿರುಗಿ ನೋಡುವುದು ಮತ್ತೊಮ್ಮೆ ಬರುತ್ತೆನೆ ಎನ್ನುವುದರ ಸಂಕೇತ. ತಿರುಗಿ ನೋಡದೆ ಇದ್ದಿದೆ ಒಳ್ಳೆಯದು ಅಷ್ಟು ಕಹಿ ನೆನಪುಗಳು ಇರುವ ಆ ಸಂಭಂದ ಆ ಜೀವಗಳು ಮತ್ತೆ ಮೀಟ್ ಆಗದಿರುವುದೇ ಒಳ್ಳೆಯದು.
ಪೂರ್ಣಿಮಾ,
ನಿಜಕ್ಕೂ..
ಶ್ರೀ,
ಬೆಳಕು ಹರಿಯುವುದು ನಗೆಬೀಜ ಚೆಲ್ಲಲಿಕ್ಕೇ. ನಮಗೆ ಆರಿಸಿಕೊಂಡು ಬಿತ್ತಲು ಗೊತ್ತಿರಬೇಕಷ್ಟೇ.
ರಂಜು,
ಹೌದು, ನೋವ ಗಳಿಗೆಗಳ ರಾತ್ರಿ ಕಳೆಯುವುದು ತುಂಬ ಕಷ್ಟ.
ನೀನು ಹೇಳುವುದು ತುಂಬ ನಿಜ. ತಿರುಗಿ ನೋಡದೆ ಇದ್ದಿದ್ದು ಒಳ್ಳೆಯದು.
ಪ್ರೀತಿಯಿರಲಿ,
ಸಿಂಧು
Post a Comment