Thursday, June 28, 2007

ಅಕ್ಷರ ಪ್ರೇಮ ನಿವೇದನೆ

ಮರುಭೂಮಿಯ ರಾತ್ರಿಗಳಲ್ಲಿ
ಬೆಳದಿಂಗಳು ಚಂದವಿರಬಹುದೆಂದು
ನನ್ನ ಅಸೆ ಮತ್ತು ನಂಬಿಕೆ;


ಮರಳುಗಾಡಿಗೇ ಬರುವ ಧೈರ್ಯ ಮಾಡಿದವನು
ಕೃಷ್ಣಪಕ್ಷ ಕಳೆದು
ಇಂಚಿಂಚೇ ನಗಲಾರೆಯಾ?


ಎಂದು ಬರಲಿದೆ ಪಾಡ್ಯ?
ನನಗೆ ಬಿದಿಗೆಯೆಂದರೆ,
ಬಿದಿಗೆಯಲ್ಲಿ ಪುಟ್ಟಗೆ ನಗುವ ನೀನೆಂದರೆ
ತುಂಬ ಪ್ರೀತಿ.
ಅದಕ್ಕೇ ಕಾದಿದ್ದೇನೆ ಇದು ಮರಳುಗಾಡೆಂದು ಗೊತ್ತಿದ್ದರೂ.

3 comments:

  1. ಪ್ರೀತಿ ಇದ್ದಲ್ಲಿ ... ಕಾಯುವುದು ಕೂಡ ಒಂದು ಸುಖ ಅನ್ನಿಸುತ್ತದೆ ... ಅಲ್ಲವೆ .. ?

    ReplyDelete
  2. ಉಮಾಶಂಕರ್,

    ಪ್ರೀತಿಯೇ, ಕಾಯುವ ಬಲ ಕೊಡುತ್ತದೆ. ನೋವಿನಲ್ಲೂ ಒಂದು ನಲಿವಿನ ಭರವಸೆ ತುಂಬುತ್ತದೆ.

    ReplyDelete
  3. ನಿಜಾ ಕಣ್ರೀ... ಮರುಭೂಮಿಯಲ್ಲಿ ಬೆಳದಿಂಗಳು ನಿಜಕ್ಕೂ ಚೆನ್ನಾಗಿರುತ್ತೆ... ಓಯಾಸಿಸ್ ಪಕ್ಕದಲ್ಲಿದ್ರೆ....
    ಕವನ ತುಂಬಾ ಚೆನ್ನಾಗಿದೆ..

    ReplyDelete