ನಮ್ಮ ಮಹಾನಗರದ ಶಾಲೆಗಳು
ತುಂಬ ಸೊಫೆಸ್ಟಿಕೇಟೆಡ್ದು.
ಅಗಲಿದ ಹಿರಿಚೇತನಕ್ಕೆ ನಮಿಸಿ
ಸರ್ಕಾರ ರಜೆ ಘೋಷಿಸಿದ್ದು
ಇವತ್ತು ರಾತ್ರಿಯೇ ಇನ್ಬಾಕ್ಸಿಗೆ ಬರುತ್ತೆ;
ಇವತ್ತು ಲೇಟಾಗಿ ಮಲಗಿದ ಪುಟ್ಟನಿಗೆ ನಾಳೆ ಬೇಗೆದ್ದರೂ ಶಾಲೆಯಿಲ್ಲ.
ನನ್ನೂರಿನ ಕೆರೆದಡದ ಶಾಲೆಗಳ ನಿಲುವೇನೋ ಗೊತ್ತಿಲ್ಲ;
ಹಳ್ಳಿಯೂರಿನ ಕನ್ನಡ ಶಾಲೆ ಹೇಗೋ ಗೊತ್ತಿಲ್ಲ.;
ಅಲ್ಲಾದರೂ ಇರಬಹುದು -
ನಿವೃತ್ತಿಯ ಹತ್ತಿರತ್ತಿರದ ಮೇಷ್ಟರು ಕೆಲವರು
ಅರ್ಧಕ್ಕೆ ಧ್ವಜ ಹಾರಿಸಿ
ಮೌನವಂದನೆ ಮಾಡಿಸಿ
ಬಂದವರಲ್ಲೇ ಒಬ್ಬಳ ಹತ್ತಿರ
ಆ ಚೇತನದ ಬಗ್ಗೆ ನಾಕಾರು ಮಾತಾಡಿಸಿ
ಮಕ್ಕಳಿಗೆ ಕಾಣಿಸದ ಹಾಗೆ ಕಣ್ಣೊರೆಸಿಕೊಳ್ಳುವವರು...ಅಲ್ಲಾದರೂ ಇರಬಹುದು..
ಅಲ್ಲಿವರೆಗೆ ಪಿಸುಗುಟ್ಟುತ್ತ
ಸರತಿ ಕೆಡಿಸಿ ಓಡಲು ಸಿದ್ಧ
ಪುಟ್ ಪುಟಾಣಿ ಕಣ್ಗಳು
ಇದನ್ನೆಲ್ಲ ಗಮನಿಸಿ
ಗಪ್ ಚಿಪ್ಪಾಗಿ ಸರತಿಯಲ್ಲಿ ನೆಟ್ಟಗೆ ನಿಲ್ಲಬಹುದು;
ಒಂದೆರಡು ಸಪೂರ ಜೀವಗಳ
ಕಣ್ಣು ಮಂಜಾಗಬಹುದು;
ಮುಂದೆಂದೋ ವಿಂಗ್ಸ್ ಆಫ್ ದಿ ಫೈರ್ ಆಗಿ ನಿಲ್ಲಬಹುದು.
ನಿಲ್ಲಲಿ.
ಮಹಾನಗರದ ಪುಟ್ಟನಿಗೆ ಇವೆಲ್ಲ ಸಿಗುವುದಿಲ್ಲ. ಬರಿಯ ರಜೆ.
ಎಲ್ಲದಕ್ಕೂ - ಗರಿಮೆಗೂ ಮತ್ತು ಅಂತಃಕರಣಕ್ಕೂ.
ಕಲಾಮಜ್ಜನಿಗೆ ನಮನ.

ನಮ್ಮ ಹಳ್ಳಿಯ ಶಾಲೆಗಳ ಸಂಸ್ಕೃತಿ ಹಾಗು ನವನಾಗರಿಕ ಪಟ್ಟಣಗಳ ನಾಗರಿಕತೆಯ ವ್ಯತ್ಯಾಸವನ್ನು ಸರಿಯಾಗಿ ಕವನಿಸಿದ್ದೀರಿ. ಏನೇ ಆದರೂ, ಕಲಾಮರ ನಿಧನವು ಅನೇಕ ವಿದ್ಯಾರ್ಥಿಗಳಲ್ಲಿ ಕಣ್ಣೀರನ್ನು ತರಿಸಿದೆ. ನನ್ನ ಮೊಮ್ಮಗಳು ರಾತ್ರಿ ಹತ್ತೂವರೆಗೆ ನನಗೆ ಫೋನು ಮಾಡಿ, ಗದ್ಗದಿತ ಧ್ವನಿಯಲ್ಲಿ ಈ ದುಃಖದ ಸಮಾಚಾರವನ್ನು ತಿಳಿಸಿದಳು.
ReplyDelete