Thursday, October 20, 2011

ಎರಡು ತುದಿಗಳ ನಡುವಣಚ್ಚರಿಯ ಬದುಕು!

ಅಳುಕು -
ಮೀರುವ ಕ್ರಿಯೆಯಲ್ಲಿ ಅಳಿಯುವೆನೇನೋ ಎಂದು;
ಹೊಳಪು -
ಮಡಿಲು ತುಂಬಿದ ಗುಲಾಬಿಕಾಲ್ಗಳ ಸೊಬಗು ಕಂಡು;
ಸಿಡುಕು -
ನೀನು ನಿದ್ದೆ ಕೆಡಿಸುತ್ತೀ ಅಂತ;
ಕಿರಿನಗು-
ನಿನ್ನ ಬೇಡಿಕೆ ತುಂಬಿದ ಕೆನ್ನೆಕಂಗಳ ನೋಡಿ;
ಅಸಹನೆ -
ಇನ್ನೇನು ತುತ್ತಿಡುವಷ್ಟರಲ್ಲಿ ಚಡ್ಡಿ ಬಿಚ್ಚುತ್ತೀ ಕಕ್ಕ ಬಂತು;
ಮಂತ್ರಮುಗ್ಧೆ -
ಕುತ್ತಿಗೆಯ ಬಳಸಿ ಕೆನ್ನೆಗೆ ಮೆತ್ತನೆ ಕೆನ್ನೆ ತೀಡುವಾಗ;
ಗೊಣಗು -
ಊಟದ ತಟ್ಟೆ ಹಿಡಿದು ಮನೆಯಿಡೀ ಸುತ್ತುವಾಗ;
ಬೆರಗು -
ಬೇಸರ ಬಂದು ಗಬ್ಬೆದ್ದ ದಿನದ ರುಟೀನಲ್ಲಿ ನಿನ್ನ ಹೊಸತನದ ಬನಿ ಬನಿ ಇಳಿವಾಗ;
ಅನಿಸುತ್ತೆ ಟುಪ್ಪೂ..
ಇದಕ್ಕೆ ಇರಬಹುದೆ ಕತೆ ಕವಿತೆ ಗೀತ ಗೋವಿಂದ-
-ಗಳಲ್ಲಿ ಉಲಿದಿದ್ದು
"ಮಣ್ಣುತಿಂದ ಬಾಯ ಬಿಡಿಸೆ
ಅಮ್ಮನೆದುರು ಜಗವೆ ಹರಡಿ
ಮೂಡಿದುದು ಅಚ್ಚರಿ
ತಾಯ್ತನದ ವೈಖರಿ !
ಅವಳ ಹೊರತು ಕಾಣಬಹುದು ಯಾರಾದರೂ ಹೇಗೆ??
ಮಗು ಮಣ್ಣು ತಿನ್ನದೆ -
ಅಮ್ಮ ಪೆಟ್ಟು ಕೊಡದೆ-
ಬಾಯಿ ಬಿಡದೆ-
ಅದರಲ್ಲಿಣುಕದೆ-
ಅಮ್ಮನ ಹೊರತು ಕಾಣಬಹುದು ಯಾರಾದರೂ ಹೇಗೆ??
ಮಗಳ ಹೊರತು ತೋರಬಹುದು ಯಾರಾದರೂ ಹೇಗೆ?

4 comments:

  1. ವಿಶಿಷ್ಟವಾದ ಬರವಣಿಗೆ ಶೈಲಿ ಮತ್ತು ಸರಳತೆಯ ಮೂರ್ತತೆ. ತಾಯಿಯ ಮಾತುಗಳು ಅಕ್ಕರೆಯಿಂದ ಬರೆಯಲ್ಪಟ್ಟಿವೆ. ತುಂಬಾ ಇಷ್ಟವಾಯಿತು.
    ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
    www.badari-poems.blogspot.com
    www.badari-notes.blogspot.com
    www.badaripoems.wordpress.com

    Face book Profile : Badarinath Palavalli

    ನಿಮ್ಮ ಓದಿಗೆ ನನ್ನ ಕವನಗಳು ಕಾದಿವೆ ಮತ್ತು ನಿಮ್ಮ ಅಭಿಪ್ರಾಯದ ಕಾಮೆಂಟುಗಳು ನನಗೆ ದಾರಿ ದೀಪ.

    ReplyDelete
  2. ಸಿಂಧು,
    ಪುಟ್ಟ ಮಗುವು ತಾಯಿಯಲ್ಲಿ ಹುಟ್ಟಿಸಬಹುದಾದ ಭಾವನೆಗಳನ್ನು ’ಕವನದಲ್ಲಿ-ಕಾಮನಬಿಲ್ಲು’ ಕಾಣುವಂತೆ ಚಿತ್ರಿಸಿದ್ದೀರಿ. ಇದರ ಶ್ರೇಯಸ್ಸು ನಿಮ್ಮ ಪುಟ್ಟ ಮಗುವಿಗೇ ಸೇರಬೇಕಲ್ಲವೆ!

    ReplyDelete
  3. ಮಗು ತಾಯಿಯಲ್ಲಿ ಉ೦ಟುಮಾಡುವ ಅಷ್ಟಭಾವಗಳನ್ನು ಬಹಳ ಚೆನ್ನಾಗಿ ಕವನಿಸಿದ್ದೀರಿ, ಅಭಿನ೦ದನೆಗಳು. ನನ್ನ ಬ್ಲಾಗ್ ಗೆ ಒಮ್ಮೆ ಭೇಟಿ ನೀಡಿ.

    ReplyDelete
  4. magaLindaagi ammana sahitya krushi hechchagide:)

    Nice write up.

    ReplyDelete