Tuesday, January 6, 2009

ನನ್ನ ಖುಶೀ ನಿಮಗೂ...

ಫಿರ್ ಛಿಡೀ ರಾತ್ ಬಾತ್ ಫೂಲೋಂ ಕೀ.. ರಾತ್ ಹೈ ಯಾ ಬಾರಾತ್ ಫೂಲೋಂ ಕೀ.. ಎಂಬ ಹಾಡಿನುಲಿಯ ಮಾಧುರ್ಯದ ಅಂತರಂಗದಲ್ಲಿ ಅಡಗಿ ಕೂತಿದ್ದವಳು ಮಡಿಲಿಗೆ ಬಂದಿದ್ದಾಳೆ.
ಒಲವಿನ ಪಯಣದ ಹಾದಿಗೆ
ಜೊತೆಯಾಗಿ ಮೆಲ್ಲಡಿ ಇಡಲು
ನೀರಧಿಯ ನೇವರಿಸಿ
ಮುಗುಳು ಬಿರಿದ ತಿಂಗಳನ
ಮಗಳ ಆಗಮನ..
ಮಾರ್ಗಶಿರ ಪ್ರತಿಪದೆಯ ಹೊಸ್ತಿಲಲಿ!
ಖುಶೀ,ಸಂತಸ,ಛಲ,ಸಂಕಟ,ನೋವು,ನೆಮ್ಮದಿ,ಸಣ್ಣತನ,ಸಮೃದ್ಧಿ,ಸಮಾಧಾನ,ಆತ್ಮೀಯ ಕುಟುಂಬ,ಮತ್ತು ತುಂಬಿತುಳುಕುವಷ್ಟು ಪ್ರೀತಿ ಎಲ್ಲವನ್ನೂ ಎರೆದ ಬದುಕು, ಇನ್ನೊಂದೇ ಬದುಕನ್ನು ಮಡಿಲಿಗಿಟ್ಟಿದೆ.
ಎಲ್ಲವನ್ನು ಕೊಟ್ಟಿರುವ ನವನವೋನ್ಮೇಷಶಾಲಿನೀ ಪ್ರಕೃತಿಯು ಪ್ರತಿರೂಪಿ ಸೃಷ್ಟಿಯನ್ನು ಹನಿಯಾಗಿ ಬನಿ ಇಳಿಸಿದ್ದಾಳೆ.
ಆ ಶಕ್ತಿಗೆ ನಮನ. ಜೊತೆಗೆ ನಿಂತು ನೇವರಿಸಿದ ಎಲ್ಲ ಪ್ರೀತಿಯ ಕೈಗಳಿಗೆ ನಮನ.
ಮುದ್ದು ಸುರಿಸುವ ಗುಲಾಬಿ ಕಾಲುಗಳಿಗೆ, ಕರೆಂಟು ಹರಿಸುವ ಮುಗ್ಧ ಕಣ್ಗಳಿಗೆ, ಬಿಗಿಯಾಗಿ ಹಿಡಿದಿರುವ ಪುಟಾಣಿ ಬೆರಳುಗಳಿಗೆ.. ನಮನ.
ಹೋದ ನವೆಂಬರಿನ ಕೊನೆಯಲ್ಲಿ ಧರೆಗಿಳಿದು ಘಮ್ಮನರಳಿದ ಋತುಋತುವಿನ ಚೇತನದಂತೆ ನಮ್ಮ ಬಾಳಲ್ಲಿ ತುಂಬಿಕೊಳ್ಳುತ್ತಿರುವವಳ ಹೆಸರು ಸೃಷ್ಟಿ. ನಮ್ಮ ಸಂತಸದ ಸಿಹಿ ನಿಮ್ಮೊಡನೆ ಹಂಚಿ ದುಪ್ಪಟ್ಟಾಗಿಸುವ ಆಸೆ..
ಪ್ರೀತಿಯಿಂದ
ಸಿಂಧು

30 comments:

  1. ಸೃಷ್ಟಿಯ ಆಯುಷ್ಯ ನೂರಾಗಲಿ ,
    ತುಂಬು ಸಂಸಾರ ನಿಮ್ಮದಾಗಲಿ .
    ಪ್ರೀತಿಯೊಂದಿಗೆ
    ಶರತ್ ಅಕಿರೆಕಾಡು

    ReplyDelete
  2. ಅಭಿನಂದನೆಗಳು ಸಿಂಧು! ತುಂಬಾನೇ ಖುಷಿ ಕೊಡ್ತು ನಿಮ್ಮ ಲೇಖನಗಳು. God bless! :)

    ReplyDelete
  3. ಅಭಿನಂದನೆಗಳು ಸಿಂಧು ಮೇಡಮ್,

    ಫೋಟೊಗಳು ಮತ್ತು ಲೇಖನ ಚೆನ್ನಾಗಿದೆ...

    ಮತ್ತೆ ನನ್ನ ಬ್ಲಾಗಿಗೆ ಅಲ್ಲಿ ಮೊದಲ ಬಾರಿಗೆ ಹೊಸ ಕವನ ಬರೆದಿದ್ದೇನೆ.. ನೋಡಿ ಪ್ರತಿಕ್ರಿಯಿಸಿ...ಬರುತ್ತಿರಲ್ಲ್ಲ///

    ReplyDelete
  4. ಸಿಂಧು ಅಕ್ಕಾ...

    ಸೃಷ್ಟಿಗೆ ಅಭಿನಂದನೆಗಳು.
    ನಿನ್ನ ಖುಶಿ ನನಗೂ :-)
    ಪುಟಾಣಿ ಕೆನ್ನೆಗೊಂದು ಮುತ್ತು.

    ReplyDelete
  5. ಸಿಂಧು, ಪುಟ್ಟ ಸೃಷ್ಟಿಯಿಂದ ನಿಮ್ಮ ಬದುಕಿನ ಸೊಬಗು ಹೆಚ್ಚಲಿ. ಹೊಸ ವರುಷದ ಶುಭಾಶಯಗಳು.

    ReplyDelete
  6. sundaravagi suddi heliddeera
    khushi aytu

    ReplyDelete
  7. ಶುಭಾಶಯಗಳು.

    ಮುದ್ದು ಸೊಸೆಗೆ ಸುಸ್ವಾಗತ

    ReplyDelete
  8. ಖುಷಿಯಾಯಿತು.

    ಕಂಗ್ರಾಟ್ಸೂ... :) :)

    ReplyDelete
  9. ಅಭಿನಂದನೆಗಳು.
    ಸೃಷ್ಟಿಗೆ ಶುಭ ಹಾರೈಕೆಗಳು.
    - ಚೇತನಾ ತೀರ್ಥಹಳ್ಳಿ

    ReplyDelete
  10. ayyo... appanige? marethebittidde. kshamisi,
    avarigoo...

    ReplyDelete
  11. ಸಿಂಧು ಮೇಡಂ,
    ಅಭಿನಂದನೆ. ಪುಟ್ಟ ಕಂಗಳ ನಿರೀಕ್ಷೆ ಈಡೇರಲಿ. ನಿಮ್ಮ ಕನಸೂ ನನಸಾಗಲಿ. ಹೊಸ ವರುಷದ ಹೊಸ್ತಿಲಲ್ಲಿ ಸಿಹಿಯಾದ ಸಂಗತಿಯನ್ನು ಹೇಳಿದಿರಿ. ಸೃಷ್ಟಿಯ ಬದುಕು ಹಸಿರಾಗಿರಲಿ. ಅಂದ ಹಾಗೆ ನಾವು ಸಾಂಗತ್ಯ ಆರಂಭಿಸಿದ್ದೇವೆ. ಸಮಯವಾದಾಗ ಬಂದು ಭೇಟಿ ಕೊಡಿ, www.saangatya.wordpress.com
    ಸಾಂಗತ್ಯ

    ReplyDelete
  12. ಖುಷಿಯ ವಿಚಾರ. ಇಬ್ಬರಿಗೂ ಶುಭಹಾರೈಕೆಗಳು.

    -ಜಿತೇಂದ್ರ

    ReplyDelete
  13. ಸಿಂಧು,
    ಹೊಸ ವರ್ಷಕ್ಕೆ ಹೊಸ ಸೃಷ್ಟಿ.
    ನಿಮಗೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು.

    ReplyDelete
  14. ಪ್ರೀತಿಯ ಸಿಂಧು, ಕುಮಾರ್-
    ಇಬ್ಬರಿಗೂ ಹಾರ್ದಿಕ ಅಭಿನಂದನೆಗಳು. ಸೃಷ್ಟಿಗೆ ಎಲ್ಲ ಹಾರೈಕೆಗಳು.

    ನಿಮ್ಮ ಮೂವರ ಜೀವನವೂ ಸಂತಸಮಯವಾಗಿರಲಿ. ನಗು ತುಂಬಿ ಹರಿಯಲಿ. ನೆಮ್ಮದಿ ಅಂಗಳದಲ್ಲೇ ಅರಳಲಿ.

    ReplyDelete
  15. ಪ್ರಿಯ ಸಿಂಧು,

    ಮುದ್ದಾದ ಸೃಷ್ಟಿಗೆ ಸಿಹಿ ಮುತ್ತುಗಳು. ಅವಳ ಅಮ್ಮ, ಅಪ್ಪನಿಗೆ ಹಾರ್ದಿಕ ಶುಭಾಶಯಗಳು. ಹಾಗೆಯೇ ಅದಿತಿಯಕ್ಕನಿಂದಲೂ ಪುಟ್ಟ ತಂಗಿಗೆ ಸಿಹಿ ಮುತ್ತುಗಳು :)

    ReplyDelete
  16. ಹೆಸರು ಸೂಚಿಸೋದಕ್ಕೂ ಅವಕಾಶ ಇಲ್ವಲ್ಲಾ ! ಆಗಲಿ ಶುಭವಾಗಲಿ.

    ReplyDelete
  17. woww congrats:) srishtige sihimuttugaLu:)

    ReplyDelete
  18. ಸುದ್ದಿ ಕೇಳಿ ಖುಷಿಯಾಯ್ತು ಸಿಂಧು. ಮಗೂಗೆ ನಂದೂ ಒಂದು ಮುತ್ತು.

    -ಮೀರ.

    ReplyDelete
  19. good good.. Olleya alochanegalu..

    ReplyDelete
  20. Sindhu,

    Namma Shrishti du putta putta photo kelsi....

    Sujata

    ReplyDelete
  21. imagoo nimma srustigoo shubhavaagali... avalu nimma kanasugala munduvarikeyaagali
    - shama

    ಹಾಯ್,
    ಪ್ರತಿ ವರ್ಷದ ಹಾಗೆ ಅಮ್ಮನ ಹುಟ್ಟು ಹಬ್ಬದ ಅಂಗವಾಗಿ ಮಾತೃ ಉತ್ಸವ ಮಾರ್ಚ್ ತಿಂಗಳ ಎರಡನೇ ಭಾನುವಾರ ಅಂದರೆ ಎಂಟನೇ ತಾರೀಖಿನಂದು ನಡೆಸಲಿದ್ದೇವೆ. ಅಂದವಾದ ಅಮ್ಮನಿಗೆ ಸಂಬಂಧಿಸಿದ ಒಳ್ಳೆಯ ಸೂಕ್ತಿಗಳು/ಕವನದ ಸಾಲುಗಳು/ Quotations ಇದ್ದರೆ ಬೇಕು. ನಿಮ್ಮಲ್ಲಿದ್ದರೆ ಫೆಬ್ರವರಿ ಎರಡನೇ ತಾರೀಖಿನೊಳಗೆ ನನಗೆ ಕಳುಹಿಸುವಿರಾ ? ಬರೆದವರ ಹೆಸರೂ ಇದ್ದರೆ ಅನುಕೂಲ.

    ಅಂದ ಹಾಗೆ, ಆಹ್ವಾನ ಕಳುಹಿಸುವೆ … ತಪ್ಪದೆ ಬನ್ನಿ
    ಧನ್ಯವಾದಗಳು,
    ಶಮ, ನಂದಿಬೆಟ್ಟ
    http://minchulli.wordpress.com

    ReplyDelete
  22. ಸಿಂಧುವಕ್ಕನಿಗೆ ಶುಭಾಶಯ...ಮುದ್ದು ಸೃಷ್ಟಿಗೆ ವೆಲ್‌ಕಂ ಟು ಭೂಮಿ :)

    ReplyDelete
  23. ಸಿಂಧು ಅವರೇ,

    ಅಭಿನಂದನೆಗಳು !
    ನಿಮ್ಮ ಮತ್ತು ಸೃಷ್ಟಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ

    ReplyDelete
  24. congrats!!:)
    'ಸೃಷ್ಟಿ' ಪುಟಾಣಿಗೆ ಸ್ವಾಗತ. ಅದೇ ಖುಷಿಯಲ್ಲಿ ಇನ್ನೊಂದಿಷ್ಟು ಬರೀರಿ.

    ReplyDelete
  25. chennagide ri .nim blog ge ede modlu visit maaadidini...kushi aytu.......

    ReplyDelete