ಮೊನ್ನೆ ಎಲ್ಲೋ ಕಾಡು ಸುತ್ತಲು ಹೋದವರು ಹಾಗೇ ಕಡಲತೀರವನ್ನೊಂದಿಷ್ಟು ನೋಡಿಬಿಡುವಾ ಅಂತ ಹೋದೆವು. ಅಲ್ಲಿಸಿಕ್ಕ ಗೆಳೆಯನೊಡನೆ ಕಳೆದ ಒಂದ್ನಾಲ್ಕೈದು ಗಂಟೆಗಳು ತುಂಬ ತಂಪಾಗಿದ್ದವು. ಕಡಲ ತೀರದ ಮಾರ್ದವ ಬಿಸಿಯ ಮೇಲೆ ತೇಲಿ ಬರುವ ಗಾಳಿಯ ತಂಪು, ನುಣ್ಪು ಮತ್ತು ಬಿಸುಪು ಎಲ್ಲದರ ಒಟ್ಟಂದದಂತಿತ್ತು ಅವರೊಡನೆ ಕಳೆದ ಸಮಯ.
ತುಂಬ ದಿನದಿಂದ ನೋಡಬೇಕೆಂದಿತ್ತು ಇಬ್ಬರಿಗೂ. ಅವಕಾಶವಾಗಿರಲಿಲ್ಲ. ಅವತ್ತು ಅಚಾನಕ್ಕಾಗಿ ಸಿಕ್ಕಿ ಇಬ್ಬರಿಗೂ ಮಾತು ಮೊದಲು ಮಾಡಲು ಗೊತ್ತಾಗಲಿಲ್ಲ. ಒಂದೆರಡು ದೋಸೆ, ಕಾಫಿ, ಲಸ್ಸಿ, ಮತ್ತು ಅಳಿವೆಯೊಂದರಲ್ಲಿ ದೋಣಿಯಾನ, ಜನರಿಂದ ತುಂಬಿರದ ಕಡಲ ತೀರ, ಮಾತು ಮಾತು ಮಾತು.. ಎಲ್ಲ ತುಂಬ ಹಿತವಾಗಿತ್ತು. ಯುಗಾದಿಯ ಹಿಂದಿನ ದಿನ ಮುಕ್ಕಿದ ಆಲೆಮನೆಯ ಬೆಲ್ಲದ ಸಿಹಿಯಿತ್ತು.
ಹೆಚ್ಚು ಹೆಚ್ಚು ಬರೆಯಲಿಕ್ಕೇನಿಲ್ಲ. ತುಂಬ ಸಂತಸ ನನಗೆ ಅವರ ಕಂಡು. ನೋಡಿದ ಸುತ್ತಿದ ಕಾಡೆಲ್ಲ, ಕಾಡಿನ ಪ್ರೀತಿಯೆಲ್ಲ ಮೈವೆತ್ತಂತಹ ವ್ಯಕ್ತಿಯ ಭೆಟ್ಟಿಯಾಗಿ ಮನಸು ಉಲ್ಲಸಗೊಂಡಿದೆ.
ನಮಗಾಗಿ ಸಮಯ ಕೊಟ್ಟು, ಜೊತೆಗೂಡಿದ ಈ ಸ್ನೇಹಿತರಿಗೆ ಪ್ರೀತಿಪೂರ್ವಕ ವಂದನೆಗಳು.
i have a small doubt, when i meet my old school friends after some years talk with them ends within hours after that we start rewinding our school days and nothng more than that. our economic status is not a barrier but our mindset will be completely different[atleast mine] than school days and our meet starts irritating me, though i feel sad about it.
ReplyDeletedoes this happen to everyone or only for psychoes like me........
totally confusing.......
yours,
kr
Nice writing ... took me for a ride - dose, coffee, lassi, walk along the ocean... very nostalgic memories :)
ReplyDeleteKeep up!
gowtham
Even I also have same questions as Kr.
ReplyDeleteಕೆ.ಆರ್ ಅವರೆ,
ReplyDeleteನಿಮ್ಮ ಅನಿಸಿಕೆ ಬಹುಪಾಲು ನಿಜ. ಹಳೆಯ ವಿಷಯಗಳು,ಗೆಳೆಯ-ಗೆಳತಿಯರು,ಕಳೆದ ಕ್ಷಣಗಳು ಎಲ್ಲೋ ನೆರಳಲ್ಲಿ ಕೂತು ನೆನಪಾದಾಗ ಮನಸ್ಸಿಗೆ ತಂಗಾಳಿಯಂತೆ ಹಾಯುತ್ತವೆ. ಆದರೆ ನಾವು ಆ ಬಿಂದುವಿನಿಂದ ದೂರ ಸಾಗಿ ಬಂದಿರುತ್ತೇವೆ ಬದುಕಿನ ದಾರಿಯಲ್ಲಿ. ಒಬ್ಬೊಬ್ಬರದೂ ಒಂದೊಂದು ದಿಕ್ಕು. ಹಾಗಾಗಿಯೇ ಬಹಳ ಸಲ ನಮ್ಮೆಲ್ಲರ ಅಭಿಪ್ರಾಯ ಚಿಂತನೆಗಳು ಪೂರ್ತಿ ಅಪರಿಚಿತವೆನ್ನಿಸುವಷ್ಟು ಬದಲಾಗಿರುತ್ತವೆ.
ಈ ಅಪರಿಚಿತತೆ ಮತ್ತು ಹಳೆಯ ನೆನಪಿನ ಗಾಢತೆ ಹೊಸದೇ ಬಂಧವನ್ನ ಬೆಸೆಯಲು ಅಡ್ಡಗೋಡೆಯಂತೆ ನಿಲ್ಲುತ್ತವೆ. ಎಲ್ಲೋ ಅಲ್ಲಲ್ಲಿ ಗೋಡೆ ಮುರಿದು ಸೇತುವೆಯು ಮೂಡದೇ ಇಲ್ಲ. ಆದ್ರೂ ಹೆಚ್ಚು ಬಾರಿ ಗೋಡೆ ಅಡ್ಡವಾಗಿ ನಿಂತುಬಿಡುತ್ತದೆ.
ಇದರಲ್ಲಿ ಸೈಕೋ ಎನ್ನುವಂತದೇನಿಲ್ಲ. ಸಹಜ ಸ್ಥಿತಿ.
ಕವಿ ಷೆಲ್ಲಿಯ ಕವಿತೆಯೊಂದರಲ್ಲಿ ಹೇಳುತ್ತಾನೆ ಹೂವು ಚೆನ್ನಾಗಿದೆ ಅಂತ ರಾಶಿ ಹಾಕಿಕೊಂಡು ಕೂತೇ ಇದ್ದರೆ ದಿನ ಕಳೆದ ಮೇಲೆ ಕೊಳೆತು ನಾರುತ್ತದೆ ಅಂತ.
ಮೇಲು ಮೇಲಿನ ಸಂಬಂಧಗಳು ಹಾಗೇ. ಬೇರಿಳಿದವು ಹೊಸ ಹೂವರಳಿಸಿ ನಗುತ್ತಿರುತ್ತವೆ ಅಂತ ನನ್ನ ಅನಿಸಿಕೆ.
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ.
ಗೌತಮ್,
ಖುಶಿಯಾಯ್ತು, ನಿಮಗೆ ಇಷ್ಟವಾಗಿದ್ದು ನೋಡಿ.
ಸುಧೇಶ್,
ನಿಮ್ಮ ಅದೇ ಪ್ರಶ್ನೆಗೆ ಉತ್ತರ ಸಿಕ್ಕಿರಬಹುದಲ್ಲ. ನಿಮ್ಮ ವಿಚಾರ ಅಭಿಪ್ರಾಯ ಬೇರೆ ಇದ್ದರೆ ತಿಳಿಸಿ. ನಾನೂ ತಿಳಿಯಬಯಸುತ್ತೇನೆ.
ಪ್ರೀತಿಯಿಂದ
ಸಿಂಧು
good one
ReplyDeleteಯಾಕೋ ಆತ್ಮೀಯರೊಬ್ಬರ ಸಂಗಾತದ ಗುಂಗಿನಲ್ಲೇ ಮೈಮರೆತಂತಿದೆ? ಮುಂದೆ?
ReplyDeleteಶಶೀ,
ReplyDeleteಥ್ಯಾಂಕ್ಸ್. ಮತ್ತೇನು ಮುಂಬಯಿ ಸಮಾಚಾರ?! ಊರಿನ ನೆನಪಿನ ಬುತ್ತಿ ಯಾಕಿನ್ನೂ ಬಿಚ್ಚಿಲ್ಲ.. :)
ಚಕೋರ,
ಗುಂಗು ಎಂದರೆ ಹಾಗೇ ಅಲ್ಲವೆ?! :-)
ವೈಯಕ್ತಿಕ ಕೆಲಸ ಮತ್ತು ಒತ್ತಡಗಳ ಕಾರಣ ಬ್ಲಾಗೋದು ಮತ್ತು ಬರಹ ಬೇಸಿಗೆ ರಜೆ ತೆಗೆದುಕೊಂಡಿವೆ. :) ಬರೆಯದೆ ಇರುತ್ತೇನಾ ನಾನು.. ಇವತ್ತಿಲ್ಲದಿದ್ದರೆ ಇನ್ನೊಂದು ದಿನ..
ಪ್ರೀತಿಯಿಂದ
ಸಿಂಧು