Wednesday, April 2, 2008

ಹಸಿರ ಹೊದ್ದವಳು ಕಾದಿದ್ದಾಳೆ

ಹಸಿರ ಹೊದ್ದವಳು ಕಾದಿದ್ದಾಳೆ
ಹೊಳೆಯ ಹೊಸ್ತಿಲಲಿ
ನೆನಪಿನ ದೀಪ ಹಚ್ಚಿ..
ಏನೂ ಇಲ್ಲದೆ,
ಸುಮ್ಮನೆ,
ಮಾತ ಕದ್ದು
ಮೌನ ಬಡಿಸಿ
ಹಕ್ಕಿಗೊರಳ ಇಂಚರ ನೇಯುತ್ತಾ
ಖಾಲಿ ಬದುಕನ್ನ ತುಂಬಿ ತುಳುಕಿಸಲು..
ಹಸಿರ ಹೊದ್ದವಳು ಕಾದಿದ್ದಾಳೆ


ಇನ್ನೇಕೆ ಮಾತು.
ಬಿಂಕವಿಲ್ಲ,
ಮಾತ ಕಟ್ಟಿಟ್ಟುಹೊರಟೆ..
ಜೊತೆಗಿರುವನು ಚಂದಿರ.

ಆಮೇಲೆ ಸೇರಿಸಿದ್ದು.. ಈ ಹಸಿರು ಪಯಣದ ನೆನಪಿನ ಬರಹ ಕೆಂಡಸಂಪಿಗೆಯಲ್ಲಿ..
ಲಾವಂಚ -
http://www.kendasampige.com/article.php?id=514



4 comments:

  1. ಹಸಿರ ಹೊದ್ದವಳು ಕಾದಿದ್ದಾಳೆ.... ಭಾವನಾತ್ಮಕ...ತುಂಬಾ ಇಷ್ಟ ಆಯ್ತು...
    ಧನ್ಯವಾದಗಳು....
    ಹರೀಶ್ ಕೆ. ಆದೂರು.

    ReplyDelete
  2. ಎಲ್ ಹೋದ್ರಿ? :)

    ReplyDelete
  3. ಹೊಸವರ್ಷಕ್ಕಾಗಿ ಹಾರ್ದಿಕ ಶುಭಾಶಯಗಳು. ಹೊಸತನದ ಕವನಕ್ಕಾಗಿ ಧನ್ಯವಾದಗಳು.

    ReplyDelete
  4. ಹರೀಶ್,
    ಖುಶಿ ನಿಮಗೆ ಇಷ್ಟವಾಗಿದ್ದು ನೋಡಿ..

    ಶ್ರೀ.
    ಇಲ್ಲೆ.. ಪಕ್ಕದ ಕಾಡಿಗೆ ಹೋಗಿದ್ದೆ. ಏನ್ ಮಾಡೋದು ದಾರಿ ತಪ್ಪಲೇ ಇಲ್ಲ. ವಾಪಸ್ ಬಂದ್ ಬಿಟಿದೀನಿ.. :(

    ಸುಪ್ತದೀಪ್ತಿ,
    ಶುಭಾಶಯಗಳು ನಿಮಗೂ. ನಿಮ್ಮ ಕನಸುಗಳನ್ನ ಬೆನ್ನಟ್ಟಿ ಹಿಡಿಯುವ ಚೈತನ್ಯ, ನೋವುಗಳನ್ನ ಮೆಟ್ಟಿ ನಗುವ ಸಾಮರ್ಥ್ಯ ಸದಾ ಜೊತೆಗಿರಲಿ.
    ಕವಿತೆ ಇಷ್ಟವಾಗಿದ್ದಕ್ಕೆ ಖುಶೀ.

    ಪ್ರೀತಿಯಿಂದ
    ಸಿಂಧು

    ReplyDelete