Tuesday, July 31, 2007

ಹೀಗೇ ಸುಮ್ಮನೆ..

ಭಾರವಾದ ನಿಟ್ಟುಸಿರು,
ಹೆಪ್ಪುಗಟ್ಟಿದ ಮೌನ,
ದುಃಖಕ್ಕೆ ಆಸರೆಯಾಗಿ ಗಾಳಿ ತೀಡದೆ ನಿಂತು,
ಸುತ್ತೆಲ್ಲ ಬಿಸಿಯಾಗಿ ಸೆಖೆಯೇರಿ,
ಇನ್ನೇನು ಹನಿಯಬೇಕು ಕಣ್ಣಂಚು,
ಅದೋ ಮೊಬೈಲಿನಲಿ ಮಿಂಚು!

ಹನಿಯ ಕಣ್ಣಂಚಲೆ ತಡೆದು
ಉದಾಸವಾಗಿ ಫೋನೆತ್ತಿಕೊಂಡು
ಡಿಸ್ ಪ್ಲೇ ನೋಡಿದರೆ
ನೀರಂಚಲಿ ಕುಳಿತು
ಹನಿವ ಮಳೆಯ, ಸುಳಿವ ಕುಳಿರ್ಗಾಳಿಯ

ಸೊಗವನ್ನು
ಹೂವರಳಿದ ಸಹಜತೆಯಲ್ಲಿ

ಬಣ್ಣಿಸುವ ಆ ಮೆಸೇಜು..
ದುಃಖ ಕರಗಿ,
ಮೌನ ಹಗುರಾಗಿ
ಮನದ ತುಂಬ ಹಗೂರಭಾರದ ನೆನಪು.
ನಿಸೂರಾಗಿ ಹಾಯತೊಡಗಿದ ಗಾಳಿಯಲಿ ತಂಪು.
ಸುತ್ತೆಲ್ಲ ವಿಷಯಗಳಲ್ಲಿ ಅದೇನೋ ಹೊಸ ಒನಪು...

ಪುಟ್ಟ ದೀಪದ ಚೆಂಬೆಳಕು,
ಹಿತರಾಗದ ಮುದನೀಡುವ ಹಾಡು,
ಮಳೆ, ಹೂವು, ಹಕ್ಕಿ, ಕಾಡು,
ಹೊಳೆ,ಕಡಲು,ಬೆಟ್ಟದ ಬೀಡು
ಎಲ್ಲ ಚಂದದ ಸಂಗತಿಗಳ
ಒಟ್ಟಂದದ ಆಪ್ತ ಪ್ರಭಾವಲಯ
ಹರಡಿದ ನಿನಗೆ ಅರ್ಪಿತವೀ
ತಡೆ ಹಿಡಿದಿಟ್ಟ ಕಣ್ಣ ಹನಿ..

8 comments:

  1. ”ಮೆಸೆಜ್’ಮಾಯೆಯ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ...

    ReplyDelete
  2. I have a crazy idea for u.
    Y don't u compile all your
    previous blogs related to
    "Malenadu" and publish
    a decent book. I am sure
    many of the true
    "Malenadina janaru"
    particularly those who
    are missing the flavour of
    Malenadu (because
    of our professions and other
    commitments) would love such effort.

    Anyway goooooooooooooooood blog. But one suggestion in design. It was slightly uncomfortable to read kannada fonts in the existing background. Is it possible to switch to simple black and white combination. They too are good colours.

    ReplyDelete
  3. ಚನ್ನಾಗಿ ಬರೆದಿದ್ದಿರಾ ಸಿಂಧು ಅಕ್ಕ,

    ಒಮ್ಮೊಮ್ಮೆ ಕಣ್ಣ ನೀರು ಜಾರಿ ನೆಲ ಸೇರಿ ಮಣ್ಣಲ್ಲಿ ಮಣ್ಣಾದರೂ ಮೆಸೆಜ್ ಬರಲ್ಲಾ.

    ಕವನ ಅರ್ಥಪೂರ್ಣವಾಗಿದೆ.

    ReplyDelete
  4. ಅಕ್ಕಾ,

    ಚೊಲೋ ಇದ್ದು ಕವ್ನ. ಅನಾನಿಮಸ್ ಹೇಳಿದ್ದು ಸತ್ಯ, ಕೆಲು ಸರಿ ಕಾದ್ರೂ ಮೆಸೇಜೇ ಬರದಿಲ್ಲೆ!


    ಪುಟ್ಟ ದೀಪದ ಚೆಂಬೆಳಕು,
    ಹಿತರಾಗದ ಮುದನೀಡುವ ಹಾಡು,
    ಮಳೆ, ಹೂವು, ಹಕ್ಕಿ, ಕಾಡು,
    ಹೊಳೆ,ಕಡಲು,ಬೆಟ್ಟದ ಬೀಡು

    ಈ ಶಬ್ದನೆಲ್ಲ ನಿನ್ನಷ್ಟ್ ಚಂದ ಯಾರೂ ಬಳ್ಸದಿಲ್ಲೆ ನೋಡು..

    ReplyDelete
  5. ನಾನು ಇತ್ತೀಚಿಗೆ ಮೊಬೈಲ್ ಸ್ವಿಚ್ಚಾಫ್ ಮಾಡಿಟ್ಟಿರ್ತೀನಿ ರಾತ್ರಿ ಹೊತ್ತು.. ಈ 'ಪುಟ್ಟ ದೀಪದ ಚೆಂಬೆಳಕು' ಎಷ್ಟು ಹಿತವಾದುದೋ ಅಷ್ಟೇ ಮೂಡೌಟ್ ಮಾಡುವಂಥದೂ ಆಗಿರೊತ್ತೆ ಕೆಲ ಸಲ..:( ;[

    ReplyDelete
  6. ಸಿಂಧು ಅಕ್ಕಾ,

    ಈ ಮೊಬೈಲ್ ಮೆಸೆಜ್ ನ ಚಂಬೆಳಕು ಕೊಟ್ಟಷ್ಟಟ್ಟು ಸುಖ ದುಃಖ ಮತ್ತೆ ಯಾವುದು ಕೊಡಕೆ ಸಾದ್ಯನೇ ಇಲ್ಲೆ. ಮೆಸೆಜ್ ನಾ ಕಂಡಹಿಡಿದವರು ಸಿಕ್ಕಿದ್ರೆ ನಾನು ’ಸರಿಯಾಗಿ’ ವಿಚಾರಿಸಿಕೊಳ್ಳವು.

    ಮೆಸೆಜ್ ನ ಆ ಚಂಬೆಳಕಿಗೆ ಕಾಯುವ ಯಾತನೆ, ಬಂದನಂತರ ಜಾರುವ ಕಣ್ಣಿರು ಆ ಸಂಕಟ ಹ್ಮ್ ಇರಲಿ.

    ಚನ್ನಾಗಿ ಬರದ್ದೆ. ನಿಂಗೆ ಮೆಸೆಜ್ ಬಂದಾಗ ಖುಷಿ ಆಯಿತಲ್ಲಾ ನಮಗೂ ಅದರಿಂದ ಖುಷಿನೆ.

    ReplyDelete
  7. ಒಂದೋಂದ್ಸಲ ಮೆಸೇಜ್ ಗಿರೋ ಶಕ್ತಿ ಕಾಲ್ ಗಿರಲ್ಲಾ, ಬ್ಲಾಗ್ ಗಿರೋ ಶಕ್ತಿ ಪುಸ್ತಕಕ್ಕೆ ಇರಲ್ಲಾ ಅನ್ಸತ್ತೆ!

    ReplyDelete
  8. ದಿನೇಶ್,
    ಮೆಸೇಜ್ ಮಾಯೆಯೇ? ಮುಕ್ತಿಯೇ? :)

    ವೆಂಕಿ,
    ನಿಮ್ಮ ಪ್ರೀತಿಯ ಕ್ರೇಝಿ ಐಡಿಯಾಗೆ ನನ್ನ ಧನ್ಯವಾದಗಳು. ಸ್ವಲ್ಪ ಸಮಯದ ನಂತರ ನೋಡೋಣ.
    ಡಿಸೈನ್ ಬದಲಾವಣೆ ಮಾಡುತ್ತೇನೆ ಆದಷ್ಟು ಬೇಗ.

    ಅನಾಮಿಕ,
    ಧನ್ಯವಾದಗಳು.

    ಶ್ರೀನಿಧಿ,
    ಪಂಡಿತರು ಹೇಳಿದ ಮೇಲೆ ಇನ್ನೇನು ಬೇಕು.
    ಥ್ಯಾಂಕ್ಸ್.

    ಸು,
    ನಿನ್ನ ಮಾತು ನಿಜ, ಆದ್ರೂ ಅದು ಯಾರಪ್ಪಾ ನಮ್ಮ ಸುಶ್ರುತನ ಮೂಡ್ ಔಟ್ ಮಾಡುವಂತ ಮೆಸೇಜ್ ಕಳಿಸುವವರು. ನಂಬರ್ ಕಳ್ಸು. ವಿಚಾರಿಸ್ತಿ ನಾನು.

    ರಂಜು,
    ಸರಿಯಾಗಿ ವಿಚಾರಿಸಿಕೋ.. :) ನನ್ನ ಸಹಮತವಿದೆ.

    ಪರೇಶ್,
    :) ಅನುಭವ ಮಂಟಪಕ್ಕೆ ನನ್ನದೊಂದು ಪುಟ್ಟ ಕಲ್ಲು.

    ಪ್ರೀತಿಯಿರಲಿ,
    ಸಿಂಧು

    ReplyDelete